Girl in a jacket

ಐತಿಹಾಸಿಕ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ

 


ಸುದ್ದಿಲೈವ್/ಶಿವಮೊಗ್ಗ


ಬಿಸಿಲು, ಮಳೆಯ ನಡುವೆ ಹಿಂದೂ ಮಹಾಸಭಾ ಗಣಪತಿ ಪ್ರಷ್ಠಾಪನೆಯಾಗಿದೆ. 80 ನೇ ವರ್ಷದ ಹಿಂದೂ ಮಹಾ ಮಂಡಳಿಯ ಗಣೇಶೋತ್ಸವಕ್ಕೆ ಚಾಲನೆ ದೊರೆತಿದೆ.


ನಗರದ ಕುಂಬಾರಗುಂಡಿಯಲ್ಲಿರುವ ಗಣೇಶಪ್ಪನವರ ಮನೆಯಿಂದ ಗಣಪತಿ ಮೂರ್ತಿಯನ್ನ ಟ್ರಿಲ್ಲರ್ ಮೂಲಕ ಕೋಟೆ ಭೀಮೇಶ್ವರ ದೇವಾಲಕ್ಕೆ ತರಲಾಗಿದೆ. ಸರಿಯಾದ ಸಮಯಕ್ಕೆ ಅಂದರೆ 11-30 ಕ್ಕೆ ಪ್ರತಿಷ್ಠಾಪೊಸಲಾಗಿದೆ



ಪ್ರತಿವರ್ಷದಂತೆ ಈ ವರ್ಷವೂ ನಾಲ್ಕು ಅಡಿಯ ಗಣಪನನ್ನ ಪ್ರತಿಷ್ಠಾಪಿಸಲಾಗಿದೆ. ಇದರ ಜೊತೆಗೆ ಕೆಳಗಿನ ಟೇಬಲ್‌ನಲ್ಲಿ ಗಣಪನನ್ನ ಕೂರಿಸಲಾಗುತ್ತಿದೆ. ಈ ಗಣಪನೇ ಪ್ರತಿಷ್ಠಾಪನ ಗಣಪ, ನಾಲ್ಕು ಅಡಿಯ ಗಣಪನೇ ಉತ್ಸವ ಮೂರ್ತಿ. ಸಣ್ಣ ಗಣಪನನ್ನ ವಿಸರ್ಜಿಸಿದ ನಂತರವೇ ಉತ್ಸವ  ಗಣಪನ ಮೆರವಣಿಗೆ ಆರಂಭವಾಗುವುದು 80 ವರ್ಷದಿಂದ ನಡೆದುಕೊಂಡು ಬಂದಂತಹ ಪದ್ಧತಿಯಾಗಿದೆ. 


ಹಿಂದೂ ಮಹಾಸಭಾ ಗಣಪತಿಯನ್ನ ಶಾಸ್ತ್ರದ ಪ್ರಕಾರ ಕುಂಬಾರರ ಬಳಿಯಲ್ಲೇ ಮಾಡಿಸಬೇಕೆಂಬ ಪದ್ಧತಿ ಹಿನ್ನಲೆಯಲ್ಲಿ ಕಳೆದ 80 ವರ್ಷದಿಂದ ಗಣಪನ ಮೂರ್ತಿಯನ್ನ ಕುಂಬಾರಗುಂಡಿಯ ಬಡಾವಣೆಯಲ್ಲಿರುವ ಗಣೇಶಪ್ಪರಿಂದ  ಪ್ರತಿಷ್ಠಾಪನೆಗೊಳ್ಳುತ್ತಿದೆ. 


80 ವರ್ಷದಲ್ಲಿ ಮೊದಲಿಗೆ ನಂಜುಡಪ್ಪ, ನಂತರ ಅವರ ಮಗ ಮಹೇಶಪ್ಪ ಈಗ ಇವರ ಮಗ ಗಣೇಶಪ್ಪನವರು ಹಿಂದೂ ಮಹಾಸಭಕ್ಕೆ ಗಣಪತಿ ವಿಗ್ರಹವನ್ನ ತಯಾರಿ ಮಾಡಿಕೊಡುತ್ತಿದ್ದಾರೆ. ಗಣಪತಿಯನ್ನ ಕುಂಬಾರ ಗುಂಡಿಯಿಂದ ಕೋಟೆ ಭೀಮೇಶ್ವರ ದೇವಸ್ಥಾನದ ವರೆಗೆ ಗಣಪತಿಯನ್ನ ತರುವುದರಲ್ಲೂ ಇತಿಹಾಸವಿದೆ. 


ದಕ್ಷಿಣ ಭಾರತದಲ್ಲೇ ಮೊದಲನೇ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ ನಗರದ ಭೀಮೇಶ್ವರ ದೇವಸ್ಥಾನಕ್ಕೆ ಸಲ್ಲುತ್ತದೆ.‌ 1945 ರಂದು ಪ್ರತಿಷ್ಠಾಪನೆಗೊಂಡ ಗಣತಿಯನ್ನ  ಎತ್ತಿನ ಗಾಡಿಯಲ್ಲಿತರಲಾಗಿತ್ತು. ಅದನ್ನ ನಗರದ ವೀರಭದ್ರಪ್ಪ ಎಂಬುವರು ಎತ್ತಿನಗಾಡಿಯಲ್ಲಿ ತಂದು ಪ್ರತಿಷ್ಠಾಪಿಸಲಾಗಿದೆ. 



ಅವರ ನಂತರ ಮಗನಾದ  ಚಂದ್ರಶೇಖರ್ ಅವರೇ ತಮ್ಮ ವಾಹನದಲ್ಲಿ ತಂದು ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈಗ ಚಂದ್ರಶೇಖರ್ ಅವರ ಮಗ ರಮೇಶ್ ಟ್ರಲ್ಲರ್ ನಲ್ಲಿ ಈ ಬಾರಿಯ ಗಣಪನನ್ನ ತಂದು ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. 


ಗಣಪತಿ ವಿಸರ್ಜನೆಗೆ ಬಳಸುವ ಟ್ಯಾಕ್ಟರ್ ನ್ನ ಚಲಾಯಿಸುವರು  ಧನಂಜಯ್ ಆಗಿದ್ದಾರೆ. ಕಳೆದ 33 ವರ್ಷದಿಂದ ವಿಸರ್ಜನಾ ಮೆರವಣಿಗೆಯಲ್ಲಿ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಬಂದಿದ್ದಾರೆ. ಹೀಗೆ ಐತಿಹಾಸಿಕ ಗಣಪನ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗಿದೆ. 

ಚಾಲಕ ರಮೇಶ್

ನಿಗದಿತ ಸಮಯಕ್ಕೆ ಹಿಂದೂ ಗಣಪ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಈ ಬಾರಿ ಈದ್ ಮಿಲಾದ್ ಹಬ್ಬ ಮುಗಿದ ನಂತರ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವ ಬಂದಿದ್ದರಿಂದ ನಿಗದಿತ ಸಮಯಕ್ಕೆ  ನಡೆಯಲಿದೆಯಾ ಅಥವಾ ಮುಂದೆ ಹೋಗಲಿದೆಯಾ ಅಥವಾ ಈದ್ ಮೆರವಣಿಗೆ ಅಂದೇ ನಡೆಯಲಿದೆಯಾ ಅಥವಾ ಮುಂದೆ ಹೋಗಲಿದೆಯಾ ಎಂಬ ಗೊಂದಲ ಮೂಡಿತ್ತು. ಈಗ ಈ ಗೊಂದಲ ಮುಕ್ತಾಯ ಗೊಂಡಂತೆ ಕಂಡು ಬಂದಿದೆ. 


ಸೆ.22 ರಂದು ಮಿಲಾದ್ ಮೆರವಣಿಗೆ ನಡೆಯುವ ಸಾಧ್ಯತೆ ಕಂಡು ಬರುತ್ತಿದೆ. ಈ ಬಗ್ಗೆ ಮುಸ್ಲೀಂ ಸಮುದಾಯ ಸುದ್ದಿಗೋಷ್ಟಿ ನಡೆಸಿ ಖಾತ್ರಿ ಪಡಿಸಲಿದೆ ಎಂಬ ಮಾಹಿತಿ ತಿಳಿದು ಬಂದಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು