ಸುದ್ದಿಲೈವ್/ಶಿವಮೊಗ್ಗ
ನಗರದ ಹೊರವಲಯದಲ್ಲಿರುವ ದೇವಕಾತಿಕೊಪ್ಪದಲ್ಲಿರುವ ಇಂಡಸ್ಟ್ರಿಯಲ್ ಏರಿಯಾದ ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಗಂಡಸಿನ ಶವವೊಂದು ಪತ್ತೆಯಾಗಿದೆ.
ನಿನ್ನೆ ಸಂಜೆ 05:30ರ ಸಮಯದಲ್ಲಿ ದೇವಕಾತಿಕೊಪ್ಪ ಗ್ರಾಮ ಇಂಡಸ್ಟ್ರೀಯಲ್ ಏರಿಯಾದ ಹತ್ತಿರ ರೈಲ್ಪೇ ಹಳಿಯ ಪಕ್ಕದಲ್ಲಿರುವ ಕೆರೆಯಲ್ಲಿ ಸುಮಾರು 50-60 ವರ್ಷ ವಯಸ್ಸಿನ ಗಂಡಸಿನ ಮೃತ ದೇಹವು ತೇಲಿ ಬಂದಿತ್ತು.
ಮೃತ ದೇಹವು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದು ಮುಖ ದೇಹದ ಬಾಗಗಳು ಊದಿಕೊಂಡಿದ್ದು ಕೈಕಾಲಿನ ಚರ್ಮಗಳು ಕೊಳೆತು ಮೇಲ್ಬಾಗದ ಚರ್ಮ ಕಿತ್ತು ಬಂದಿದೆ. ಮೃತನ ಮೈಮೇಲೆ ಕಡುನೀಲಿ ಬಣ್ಣದ ತುಂಬು ತೋಳಿನ ಬನಿಯನ್ ಮತ್ತು ಕಡುನೀಲಿ ಬಣ್ಣದ ಪ್ಯಾಂಟ್ ಹಾಗೂ ಪಾಚಿಬಣ್ಣದ ಅಂಡರ್ ವೇರ್ ಧರಿಸಿರುತ್ತಾನೆ.
ಮೈಮೇಲೆ ಯಾವುದೇ ಹಚ್ಚೆ ಗುರುತು ಇತರೆ ಗುರುತುಗಳು ಕಂಡು ಬಂದಿರುವುದಿಲ್ಲ ಮೃತನ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಠಾಣಾಧಿಕಾರಿಗಳು ಶಿವಮೊಗ್ಗ ಗ್ರಾಮಾಂತರ ಪೊಲಿಸ್ ಠಾಣೆ ಮತ್ತು ಪಿಐ ಶಿವಮೊಗ್ಗ ಗ್ರಾಮಾಂತರ ಪೊಲಿಸ್ ಠಾಣೆ ದೂರವಾಣಿ ಸಂಖ್ಯೆ 08182-261418, ಅಥವಾ ಪೊಲೀಸ್ ಕಂಟ್ರೋಲ್ ರೂಂ 100 ನಂಬರಿಗೆ ಮಾಹಿತಿ ನೀಡಲು ಕೋರಿದೆ.