ಸುದ್ದಿಲೈವ್/ಶಿವಮೊಗ್ಗ
ನಿನ್ನೆ ಗಣಪತಿ ವಿಸರ್ಜನೆಯಲ್ಲಿ ಆದ ಯುವಕರ ನಡುವಿನ ಕಿರಿಕ್ ಇಂದು ಬೆಳಿಗ್ಗೆ ಮತ್ತೆ ಮುಂದುವರೆದ ಪರಿಣಾಮವಾಗಿ ಮೂವರು ಗಾಯಗೊಂಡು ಮೆಗ್ಗಾನ್‌ಗೆ ದಾಖಲಾಗಿದ್ದಾರೆ.
ಶಿವಮೊಗ್ಗ ತಾಲೂಕಿನ ಸಂತೆಕಡೂರಿನ ನಿನ್ನೆ ಗಣಪತಿ ವಿಸರ್ಜನಾ ಮೆರವಣಿಗೆ ನಡೆದಿದೆ. ಪ್ರಮೋದ್ ಮತ್ತು ಯೋಗೀಶ್ ಯಾನೆ ಸ್ವಾಮಿ ನಡುವೆ ಸಣ್ಣ ಕಿರಿಕ್ ಆಗಿದೆ. ಎಣ್ಣೆ ಏಟಿನಲ್ಲಿ ಈ ಕಿರಿಕ್ ಆಗಿದೆ ಎನ್ನಲಾಗಿದೆ. ಸ್ವಾಮಿಯ ಸ್ನೇಹಿತರಾದ ಪ್ರವೀಣ ಮತ್ತು ವಿವೇಕ ಜಗಳ ಬಿಡಿಸಿದ್ದಾರೆ.
ಇಂದು ಸಹ ಪ್ರಮೋದ್ ಜಿದ್ದು ಸಾಧಿಸಿದ್ದಾನೆ. ತನ್ನ ಕಡೆಯ ಹುಡುಗರನ್ನ ಕರೆದುಕೊಂಡು ಸ್ವಾಮಿಯ ಬಳಿ ಬಂದು ಬ್ಯಾನರ್ ಕಟ್ಟುವ ಅಡಿಕೆ ದಬ್ಬೆಯನ್ನ ಕಿತ್ತುಕೊಂಡು ಸ್ವಾಮಿ, ಪ್ರವೀಣನ ಮೇಲೆ ಹಲ್ಲೆ ಮಾಡಿದ್ದಾನೆ.
ಗಲಾಟೆ ಸಂತೆಕಡೂರಿನಲ್ಲಿ ಸಂಚಲನ ಉಂಟು ಮಾಡಿದೆ. ಮೆರವಣಿಗೆ ವೇಳೆ ಯಾವ ವಿಷಯದಲ್ಲಿ ಗಲಾಟೆ ನಡೆದಿದೆ ಎಂಬುದು ಪೊಲೀಸ್ ತನಿಖೆ ಅಥವಾ ಎಫ್ಐಅರ್ ನಿಂದ ತಿಳಿದು ಬರಬೇಕಿದೆ. ಪ್ರಕರಣಕ್ಕೆ ಸಂಭಂಧಿಸಿದಂತೆ ತುಂಗ ನಗರ ಪೊಲೀಸ್ ಠಾಣೆಯ ಪಿಐ ಗುರುರಾಜ್ ಕೆ.ಟಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.