ಸುದ್ದಿಲೈವ್/ಶಿವಮೊಗ್ಗ
ಈದ್‌ಮಿಲಾದ್ ಮೆರವಣಿಗೆಗೆ ಅನುಮತಿ ನೀಡದಂತೆ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕವು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ.ಕೆ.ಗೆ ಮನವಿ ಸಲ್ಲಿಸಿದ್ದಾರೆ.
ಈದ್‌ಮಿಲಾದ್ ಸಂದರ್ಭದಲ್ಲಿ ಅಶಾಂತಿ ಸೃಷ್ಟಿಸುವ ಬಹುದೊಡ್ಡ ಹುನ್ನಾರ ನಡೆಯಬಹುದು ಎಂಬ ಸಂಶಯ ವ್ಯಾಕಯ್ತವಾಗುತ್ತಿದೆ. ಕಳೆದ ವರ್ಷ ಈದ್‌ಮಿಲಾದ್ ಮೆರವಣಿಗೆಯ ವೇಳೆ ಶಿವಮೊಗ್ಗದ ರಾಗಿಗುಡ್ಡದಲ್ಲಿ ಹಿಂದೂಗಳನ್ನು ಗುರಿಯಾಗಿಸಿ ದಾಳಿ ನಡೆದಿದೆ. ಹಿಂದೂ ಮನೆಗಳಲ್ಲಿ ಭಯದ ವಾತವರಣ ನಿಮಾರ್ಣ ಮಾಡಲಾಗಿತ್ತು.
ಮಂಡ್ಯದ ನಾಗಮಂಗಳದ ಬದರಿಕೊಪ್ಪನಲ್ಲಿನ ಪ್ರತಿಷ್ಠಾಪಿಸಲಾಗಿದ್ದ ಗಣೇಶಮೂರ್ತಿ 11 ಸೆಪ್ಟೆಂಬರ್ 2024 ರಂದು ವಿಸರ್ಜನಾ ಮೆರವಣಿಗೆ ಸಂವರ್ಭದಲ್ಲಿ ಯುವಕರ ಗುಂಪೊಂದು ಏಕಾ ಏಕಿ ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ದಾಳಿ ನಡೆಸಿದೆ. ಅಲ್ಲದೇ ಮಾರಕಾಸ್ತ್ರಗಳಿಂದ ಹಿಂದೂಗಳ ಮೇಲೆ ದಾಳಿ ಮಾಡಿದೆ.
ಈ ಕೃತ್ಯದ ಹಿಂದೆ ನಿಷೇದಿತ ಇಸ್ಲಾಮಿ ಮೂಲಭೂತವಾದಿ ಸಂಘಟನೆಯ ಕೈವಾಡವಿರುವ ಸಂಶಯವಿದ್ದು, ಅಲ್ಲದೆ ಈ ಕೃತ್ಯ ಇಡಿ ರಾಜ್ಯದ ಹಿಂದೂಗಳಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದೆ. ಅಲ್ಲದೇ ಇಡೀ ರಾಜ್ಯದ ಜನತೆ ಗಾಬರಿಗೊಂಡಿದ್ದಾರೆ. ಹಾಗಾಗಿ ಮತ್ತೊಮ್ಮೆ ಈದ್ ಮಿಲಾದ್ ಸಂದರ್ಭ ಮೆರೆವಣಿಗೆಗೆ ಅವಕಾಶ ನೀಡಿದರೆ ರಾಜ್ಯದಲ್ಲಿ ಅಶಾಂತಿ ಸೃಷ್ಟಿಯಾಗುವ ಸಂಶಯವಿದೆ.
ಆದುದರಿಂದ ತಾವುಗಳು ಈದ್‌ಮಿಲಾದ್ ಸಂದರ್ಭ ಯಾವುದೇ ಕಾರಣಕ್ಕೂ ಮೆರವಣಿಗೆಗೆ ಅವಕಾಶ ನೀಡಬಾರದಾಗಿ ಸಂಘಟನೆ ಮನವಿಯಲ್ಲಿ ಒತ್ತಾಯಿಸಿದೆ.