ಸುದ್ದಿಲೈವ್/ಶಿವಮೊಗ್ಗ
ಹಲವುಗೊಂದಲಗಳು, ಇರುವ ವಿಮಾನಗಳೆ ನಿಗದಿತ ಸಮಯಕ್ಕೆ ಹಾರಾಟವಾಗುತ್ತಿಲ್ಲವೆಂಬ ನೆಗೆಟಿವ್ ಸುದ್ದಿ ಇರುವಾಗಲೇ ಮತ್ತೊಂದು ವಿಮಾನ ಸಂಸ್ಥೆ ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನ ಹಾರಾಡಿಸಲು ಮುಂದಾಗಿದೆ.
ಶಿವಮೊಗ್ಗ ವಿಮಾನ ನಿಲ್ದಾಣದಿಂದ ಮತ್ತೊಂದು ವಿಮಾನಯಾನ ಸಂಸ್ಥೆ ಸ್ಪೈಸ್ ಸೇವೆ ಆರಂಭಿಸಲು ನಿರ್ಧರಿಸಿದೆ. ಈಗಾಗಲೇ ತನ್ನ ವೆಬ್‌ಸೈಟ್‌ನಲ್ಲಿ ಶಿವಮೊಗ್ಗದಿಂದ ಎರಡು ಮಾರ್ಗಕ್ಕೆ ಟಿಕೆಟ್ ಬುಕಿಂಗ್ ಆರಂಭಿಸಿದೆ.
ಅಕ್ಟೋಬರ್ 10ರಿಂದ ಎರಡು ಮಾರ್ಗದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಸ್ಪೈಸ್ ಜೆಟ್ ವಿಮಾನಗಳು ಹಾರಾಟ ನಡೆಸಲಿದೆ. ಶಿವಮೊಗ್ಗದಿಂದ ಹೈದರಾಬಾದ್ ಮತ್ತು ಶಿವಮೊಗ್ಗದಿಂದ ಚೆನ್ನೈ ಮಾರ್ಗದಲ್ಲಿ ವಿಮಾನಗಳು ಹಾರಾಟ ನಡೆಸಲಿವೆ. ಈಗಾಗಲೇ ಸಿದ್ಧತೆಗಳು ಅರಂಭವಾಗಿದ್ದು, ಟಿಕೆಟ್ ಬುಕ್ಕಿಂಗ್ ಸರ್ವಿಸ್ ಆರಂಭಗೊಂಡಿದೆ.
ಶಿವಮೊಗ್ಗದಿಂದ ಈವರೆಗೂ ಬೆಂಗಳೂರು, ಹೈದರಾಬಾದ್, ತಿರುಪತಿ, ಗೋವಾಗೆ ವಿಮಾನ ಹಾರಾಟ ನಡೆಸುತ್ತಿವೆ. ಇಂಡಿಗೋ ಮತ್ತು ಸ್ಟಾರ್ ಏರ್ ಲೈನ್ ವಿಮಾನಗಳು ಮಾತ್ರ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಕಾರ್ಯಾಚರಿಸುತ್ತಿವೆ. ಈಗ ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ಸೇವೆ ಒದಗಿಸಲು ಸಿದ್ಧತೆ ನಡೆಸಿದೆ.