ಸುದ್ದಿಲೈವ್/ಹೊಸನಗರ
ಗಣಪತಿ ವಿಸರ್ಜನೆ ವೇಳೆ ಶಾಸಕ ಬೇಳೂರು ಗೋಪಾಲ ಕೃಷ್ಣ "ಚೋರರಿಗೆ ಒಂದು ಕಾಲ ಶುರುರರಿಗೆ ಒಂದು ಕಾಲ" ಎಂಬ ಹಾಡಿಗೆ ಶಾಸಕ ಗೋಪಾಲ ಕೃಷ್ಣ ಬೇಳೂರು ಭರ್ಜರಿ ಸ್ಟೆಪ್ ಹಾಕಿದ್ದಾರೆ.
ಹೊಸನಗರದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ಗಣಪತಿಆರನೇ ವರ್ಷದ ವಿಸರ್ಜನಾ ಶೋಭ ಯಾತ್ರೆಯಲ್ಲಿ ಶಾಸಕ ಬೇಳೂರು ಗೋಪಾಲ ಕೃಷ್ಣ "ಚೋರರಿಗೆ ಒಂದು ಕಾಲ ಶುರುರರಿಗೆ ಒಂದು ಕಾಲ" ಎಂಬ ಹಾಡಿಗೆ ಬೇಳೂರು ಭರ್ಜರಿ ಸ್ಟೆಪ್ ಹಾಕಿದರು.
ಹೊಸನಗರದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾವತಿಯಿಂದ ಪ್ರತಿಷ್ಠಾಪಿಸಿದ ಆರನೇ ವರ್ಷದ ಶ್ರೀ ಗಣೇಶೋತ್ಸವದ ವಿಸರ್ಜನಾ ಶೋಭ ಯಾತ್ರೆ ಶನಿವಾರ ಸಂಜೆ 6 ಗಂಟೆಗೆ ಪ್ರಾರಂಭವಾಗಿದ್ದು. ಶೋಭಾ ಯಾತ್ರೆಯೊಂದಿಗೆ ವಾದ್ಯಗೋಷ್ಠಿ ಡೊಳ್ಳು ಕುಣಿತ ಕೋಲಾಟ ಜಾನಪದ ಗೀತೆ ಬೊಂಬೆಗಳ ಕುಣಿತ ಹಲವಾರು ಪ್ರಕಾರದ ಜಾನಪದ ತಂಡಗಳು ಭಾಗವಹಿಸಿದ್ದು ಶೋಭಾ ಯಾತ್ರೆಗೆ ಮೆರಗು ನೀಡಿದವು.
ಹಿಂದೂ ಮಹಾ ಸಭಾ ಗಣಪತಿ ವಿಸರ್ಜನಾ ಶೋಭಾಯಾತ್ರೆಯಲ್ಲಿ ಮಹಿಳೆಯರು ಮಕ್ಕಳು ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು. ಹೆಚ್ಚುವರಿ ಪೋಲಿಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.