Girl in a jacket

ಮಿನಿಸ್ಟರ್ ಸೋಮಣ್ಣರಿಂದ ಭರಪುರದ ಭರವಸೆ



ಸುದ್ದಿಲೈವ್/ಶಿವಮೊಗ್ಗ

ಕೋಟೆಗಂಗೂರಿನಲ್ಲಿ ರೈಲ್ವೆ ಕೋಚಿಂಗ್ ಸೆಂಟರ್ ಕಾರ್ಯಕ್ರಮ ನಡೆಯುತ್ತಿದ್ದು, ಇಲ್ಲಿಗೆ ಇಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. 74ಎಕರೆ ಜಾಗದಲ್ಲಿ ನಿರ್ಮಾಣಗೊಳಿಸಲಾಗುತ್ತಿದೆ.  ಮುಂದಿನ ಸೆಪ್ಟಂಬರ್ ನಲ್ಲಿ ಈ ಯೋಜನೆ  ಮುಕ್ತಾಯಗೊಳ್ಳಲಿದೆ. ಇಲ್ಲಿ 9 ಮುಖ್ಯಲೈನ್, 8 ಫ್ಲಾಟ್ ಫಾರಂ ನಿರ್ಮಾಣಗೊಳ್ಳುತ್ತಿದೆ. 

ಮೊದಲಿಗೆ ಮಾತನಾಡಿದ ಸಂಸದ ರಾಘವೇಂದ್ರ ಮೂರು ವರ್ಷ ಕಳೆದಿದೆ ಲ್ಯಾಂಡ್ ಹ್ಯಾಂಡ್ ಓವರ್ ಆಗಿದೆ. 25% ಮಾತ್ರ ಕೆಲಸ ಮುಗಿದಿದೆ.  ಹಳೇ ಟ್ಯ್ಯಾಕ್ ಹಾಕಿದ ವೇಳೆ ರೈತರಿಗೆ ಹಣ ಬಂದಿಲ್ಲ ಎಂದಿದ್ದಾರೆ. ಇದನ್ನ‌ಬಗೆಹರಿಸಲು ರಾಜ್ಯ ಸಚಿವ ವಿ.ಸೋಮಣ್ಣರಿಗೆ ಮನವಿ ಮಾಡಿಕೊಂಡರು.‌

ಕೋಟೆ ಗಂಗೂರಿನ ಕೋಚಿಂಗ್ ಸೆಂಟರ್ ವಂದೇ ಭಾರತ್ ರೈಲು ಆರಂಭದೊಂದಿಗೆ ಈ ಭಾಗದಲ್ಲಿ ಉದ್ಘಾಟನೆಯಾಗಬೇಕೆಂದು ಸಂಸದರು ಕೇಳಿಕೊಂಡರು. 

ಡಿಪೋ ಆದರೆ ಎಲ್ಲಾ ಭಾಗದ ರೈಲುಗಳು ಬರಲಿದೆ ಎಂದ ಸಂಸದ. ಪಿಟ್ ಲೈನ್ ನ್ನ ಡಿಸೆಂಬರ್ ಒಳಗೆ ಮುಗಿಸಿಕೊಟ್ಟರೆ ವಂದೇ ಬಾರತ್ ರೈಲು ತರಲು ಅನುಕೂಲಾಗಲಿದೆ ಎಂದರು.

ರೈಲು ಸಚಿವ ವಿ.ಸೋಮಣ್ಣ ಮಾತನಾಡಿ, ರೈಟ್ಸ್(ರೈಲ್ವೆ ಸ್ವಾಯತ್ತ ಸಂಸ್ಥೆ) ನ ಅಧಿಕಾರಿಗಳಿಗೆ ಸ್ಪರ್ಧಾತ್ಮಕ ಕೆಲಸ ಮಾಡಿ, ಆರ್ಕಿಟೆಕ್ಟ್ ಮಾಡಲು ಹಲವಾರು ಮಂದಿದ್ದಾರೆ. ಬೇಗ ಕೆಲಸ ಮುಗಿಸಿಕೊಡಲು ಹೇಳಿದರು.  ಸಂಸದರು ಪರಿಹಾರ ನೀಡಲು ಕೇಳುತ್ತಿದ್ದಾರೆ. ಚರ್ಚೆ ಮಾಡೋಣ, ಒಂದು ಪರ್ಸೆಂಟ್ ಇದ್ದರು ರೈತರಿಗೆ ಪರಿಹಾರ ನೀಡುವುದಾಗಿ ಘೋಷಿಸಿದರು. 

ಟರ್ಮಿನಲ್ ನಿರ್ಮಾಣ ಸುಲಭದ ಕೆಲಸವಲ್ಲ. ಒಂದು ಡಿಪೋಬಂದರೆ ಉದ್ಯೋಗ ಸೃಷ್ಠಿಯಾಗಲಿದೆ. ತುಮಕೂರು ಜಾಗದಲ್ಲಿ ಶಿವಮೊಗ್ಗ ಇದ್ದರೆ ಎಲ್ಲರೂ ಶಿವಮೊಗ್ಗಕ್ಕೆ ಬರುತ್ತಿದ್ದರು. ಶಿವಮೊಗ್ಗ ಶಿಕಾರಪುರ ರಾಣೇಬೆನ್ನೂರು ಮಾರ್ಗ 50 ವರ್ಷಗಳ ಹಿಂದೆ ಆಗುತ್ತಿತ್ತು. ಸಂಸದರ ಬೇಡಿಕೆ ಏನಿದ್ದರೂ ಮಾಡಿ ಮುಗಿಸುವುದಾಗಿ ಭರವಸೆ ನೀಡಿದರು. 

ಇದೇ ವೇಳೆ ಕೋಟೆಗಂಗೂರಿನ ಗ್ರಾಪಂ ಅಧ್ಯಕ್ಷರು ಧನಕರು ಮತ್ತು ಇತರೆ ಗ್ರಾಮಸ್ಥರ ಓಡಾಟಕ್ಕೆ ಜಾಗ ಬಿಟ್ಟುಕೊಡಲು ಕೇಳಿದ್ದಾರೆ. ಕೋಚ್ ಬಳಿ ಸ್ಕೈ ಓವರ್ ಮಾಡಲು ಭರವಸೆ ನೀಡಿದರು. ಧನ ಕರು ಒಂದು ಕಡೆಯಿಂದ ಇನ್ನೊಂದು ಕಡೆ ಹೋಗಲು ಓವರ್ ಬ್ರಿಡ್ಜ್ ನಿರ್ಮಿಸ ಬಹುದು ಯಾವು ಸರಿ ಅದನ್ನ ನಿರ್ಮಿಸಿಕೊಡುತ್ತೇನೆ.   ಅಂಡರ್ ಪಾಸ್ ಬೇಡ ಎಂದ ಸಚಿವರು, . ಸ್ಥಳೀಯರಿಗೆ ಉದ್ಯೋಗ ನೀಡುವ ಭರವಸೆ ನೀಡಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು