Girl in a jacket

ಶಿವಮೊಗ್ಗ-ಶಿಕಾರಿಪುರ ಲೈನ್ 2026 ಕ್ಕೆ ಪೂರ್ಣ, ಕೋಚಿಂಗ್ ಸೆಂಟರ್ ಪೂರ್ಣಗೊಂಡ ನಂತರ ವಂದೇ ಭಾರತ್ ರೈಲು ಶಿವಮೊಗ್ಗಕ್ಕೆ-ವಿ.ಸೋಮಣ್ಣ



ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗಕ್ಕೆ ವಂದೇಭಾರತ್ ರೈಲನ್ನ ಬಿಡುಗಡೆಗೆ ಸಂಸದರ ಒತ್ತಾಯವಿದೆ. ಮೂದಿನ ಮೂರು ನಾಲ್ಲು  ತಿಂಗಳಲ್ಲಿ ರಾಜ್ಯಕ್ಕೆ  8 ವಂದೇ ಭಾರತ್ ಬರಲಿದೆ. ಒಂದು ವಂದೇ ಭಾರತ್ ನೀಡಲಾಗುವುದು ಎಂದು ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.  

ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯದಲ್ಲಿ 10 ವಂದೇ ಭಾರತ್ ಓಡಾಟ ನಡೆಯುತ್ತಿದೆ ಎಲ್ಲೂ ವಂದೇ ಭಾರತ್ ಕೋಚಿಂಗ್ ಸೆಂಟರ್ ಇಲ್ಲ. ಶಿವಮೊಗ್ಗದಲ್ಲಿ ಮೊದಲ ಬಾರಿಗೆ ವಂದೇ ಭಾರತ್ ಕೋಚಿಂಗ್ ಸೆಂಟರ್ ನಿರ್ಮಿಸಲಾಗುತ್ತಿದೆ.  ಕೋಚಿಂಗ್ ಸೆಂಟರ್ ಮುಗಿದ ನಂತರ ವಂದೇ ಭಾರತ ರೈಲ್ವೆ ಆರಂಭವಾಗಲಿದೆ ಎಂದರು.  

ಶಿವಮೊಗ್ಗ ಶಿಕಾರಿಪುರ ಲೈನ್ ಸಂಪೂರ್ಣಗೊಳ್ಳಲಿದೆ. ಮುಖ್ಯ ಇಂಜಿನಿಯರ್ ನೇತೃತ್ವದಲ್ಲಿ ಸಮಿತಿ ರಚಿಸಿ ಕೆಲಸದ ವೇಗದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಕಾಮಗಾರಿ 2025 ರಲ್ಲಿ ಸಂಪೂರ್ಣವಾಗುತ್ತಿಲ್ಲ. ಆದರೆ 2026 ಕ್ಕೆ ಕಾಮಗಾರಿ ಮುಕ್ತಾಯವಾಗಲಿದೆ ಎಂದರು. 

ರೈಲುಗಳ ನಿಲುಗಡೆಗೆ ಕೋಚಿಂಗ್ ಸೆಂಟರ್ ಬೇಕಿದೆ ಮುಂದಿನ ಜೂನ್ ನಲ್ಲಿ ಮುಗಿಯಲಿದೆ. ಭದ್ರಾವತಿಯ ಕಡೇದಕಟ್ಟೆ ರೈಲ್ವೆ ಓವರ್ ಬ್ರಿಡ್ಜ್ ಡಿಸೆಂಬರ್ ನಲ್ಲಿ ಮುಕ್ತಾಯಗೊಳ್ಳಲಿದೆ.  80 ಕೋಟಿ ವೆಚ್ಚದಲ್ಲಿ ಕೋಟೆಗಂಗೂರಿನಲ್ಲಿ ನಿರ್ಮಾಣವಾಗುತ್ತಿದೆ. ಕ್ವಾಟ್ರಸ್ ಗಳು ಕಟ್ಟಲಾಗುತ್ತಿದೆ. ಪಂಚಾಯಿತಿ ಕಡೆಯೊಂದ ದನ ಕರುಗಳು ಓಡಾಟಕ್ಕೆ ಜಾಗ ಮಾಡಿಕೊಡಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸದ ರಾಘವೇಂದ್ರ, ಶಾಸಕ ಚೆನ್ನ ಬಸಪ್ಪ, ಎಂಎಲ್‌ಸಿಗಳಾದ ಡಾ.ಧನಂಜಯ ಸರ್ಜಿ, ಭಾರತಿ ಶೆಟ್ಟಿ, ಡಿ.ಎಸ್ ಅರುಣ್ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು