Girl in a jacket

ವಿದ್ಯುತ್ ಶಾಕ್ ನಿಂದ ಯುವಕ ಸಾವು



ಸುದ್ದಿಲೈವ್/ಶಿರಾಳಕೊಪ್ಪ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲಕಿನ ಶಿರಾಳಕೊಪ್ಪ ಹೋಬಳಿಯಲ್ಲಿ ಕಾರ್ ಸರ್ವಿಸ್ ಸ್ಟೇಷನ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕನಿಗೆ ಆಕಸ್ಮಿಕವಾಗಿ ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. 

ನಿನ್ನೆ ಸಂಜೆ ಕಾರು ಶೋರೂಮ್ ನಲ್ಲಿ ಹನುಮಂತು ಎಂಬ 21 ವರ್ಷದ ಯುವಕ ಕಾರು ಸ್ವಚ್ಚತೆ ಮಾಡುವ ವೇಳೆ ವಿದ್ಯುತ್ ಶಾಕ್ ಹೊಡೆದಿದೆ.‌ ವಿದ್ಯುತ್ ಶಾಕ್ ನಿಂದ ಯುವಕ ಸ್ಥಳದಲ್ಲಿಯೇ ಅಸು ನೀಗಿದ್ದಾನೆ. ಘಟನೆಯಿಂದ ಕುಟುಂಬದ ಆಕ್ರಂಧನ ಮುಗಿಲು ಮುಟ್ಟಿದೆ. 

ಶಿರಾಳಕೊಪ್ಪ-ಆನವಟ್ಟಿ ರಸ್ತೆಯಲ್ಲಿ ಬರುವ ಕಾರು ಸರ್ವಿಸ್ ನಲ್ಲಿ ಕೆಲಸ ಮಾಡುವಾಗ ಈ ಅವಘಡ ಸಂಭವಿಸಿದೆ. ಪುಣೇದನಹಳ್ಳಿಯಿಂದ ಹನುಮಂತು ದಿನ ಕೆಲಸಕ್ಕಾಗಿ ಓಡಾಡುತ್ತಿದ್ದ. ಘಟನೆ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು