Girl in a jacket

ಸಿನಿಮಾ ಡೈಲಾಗ್ ಬರೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೊಡ್-ಸುಮೋಟೋ ಪ್ರಕರಣ ದಾಖಲು



ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಕೋಟೆ ಪೊಲಿಸ್ ಠಾಣೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ವಿಡಿಯೋ ಹಾಗೂ ಕೋಮುಗಲಭೆ ಪ್ರಚೋದಿಸುವ ಹಿನ್ನಲೆಯಲ್ಲಿ ಯುವಕನ ವಿರುದ್ಧ ಸುಮೋಟೊ ಪ್ರಕರಣ ದಾಖಲಾಗಿದೆ. 

ಸೆ.17 ರಂದು ನಡೆದ ಗಣಪತಿ ಮೆರವಣಿಗೆ ವೇಳೆ ಅಮೀರ್ ಅಹಮದ್ ಸರ್ಕಲ್‌ನಲ್ಲಿ ಹಿಂದೂ ಹಾವಳಿಯ ಪೇಜ್ ನಲ್ಲಿ  ವಿಡಿಯೋ ಹರಿದಾಡಿತ್ತು. ಈ ವಿಡಿಯೋಗೆ ಪ್ರತಿಯಾಗಿ ದರ್ಶನ್ ಸಿನಿಮಾ ಡೈಲಾಗ್ ಸೇರಿಸಿ ಇನ್ ಸ್ಟಾಗ್ರಾಮ್ ನ ಖಾತೆ ಟಿಪ್ಪು ಸಾಮ್ರಾಜ್ಯದಲ್ಲಿ ಆಡಿಯೋ ವಿಡಿಯೋವನ್ನ ಹರಿಬಿಡಲಾಗಿದೆ. 

ವಾಟ್ ಪೀಪಲ್ ಆರ್ ಡೂಯಿಂಗ್? ಅಯೋ ಬರ್ಕಯ್ಯ, ಈ ಶಿವಮೊಗ್ಗ ನಂದು ಎಂಬ ಮೂರು ನಾಲ್ಕು ವಿಡಿಯೋ ಹರಿಬಿಟ್ಟು ಕೋಮು ಪ್ರಚೋದನೆಯ ವಿಡಿಯೋ ಹರಿದಾಡಿವೆ. 

ಶಿವಮೊಗ್ಗ ನಗರದ ಬೈಪಾಸ್ ನಲ್ಲಿರುವ ತುಂಗಾ ಸೇತುವೆ ಮೇಲೆ ಒಂದು ಧರ್ಮದ ಬಾವುಟಗಳನ್ನು ಹಾರಿಸಿ ಅದಕ್ಕೆ ಅಯ್ಯೋ ಬರ್ಕಯಾ, ಮುಂದಾಗಡೆ ಪೇಪ‌ರ್ ನಲ್ಲಿ ಬರ್ಕೋ, ಶಿವಮೊಗ್ಗ ನಂದು ಎಂಬ ಸಿನಿಮಾ ಡೈಲಾಗನ್ನು ಜೋಡಿಸಿ ಇನ್ನಾಗ್ರಾಂ ನಲ್ಲಿ ಪೋಸ್ಟ್ ಮಾಡಿರುವುದು, ಹಾಗೂ ಟಿಪ್ಪು ಸುಲ್ತಾನ್ ಕಟೌಟ್, ಬಾಬರಿ ಮಸೀದಿ ಕುರಿತು ಕೆಲವೊಂದು ಹೇಳಿಕೆಗಳ ತುಣುಕುಗಳನ್ನು ಜೋಡಿಸಿ ಇನ್ನಾಎಗ್ರಾಂ ನಲ್ಲಿ ಪೋಸ್ಟ್ ಮಾಡಲಾಗಿತ್ತು. 

ಇನ್ ಸ್ಟಾಗ್ರಾಂ ಖಾತೆ ಹೊಂದಿರುವ ಆಸಾಮಿಯ ಬಗ್ಗೆ ಪರಿಶೀಲಿಸಲಾಗಿ ಶಿವಮೊಗ್ಗ, ನಗರ ಟ್ಯಾಂಕ್ ಮೊಹಲ್ಲಾ, 1ನೇ ಕ್ರಾಸಿನ ವಾಸಿಯಾದ ರೋಷನ್ ನವಾಜ್ ಮಹಮ್ಮದ್ ಸಮೀವುಲಾ ಎಂದು ತಿಳಿದು ಬಂದಿದೆ. ಆತನ ವಿರುದ್ಧ ಸೆ.20 ರಂದು ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು