Girl in a jacket

ಮಿನಿಸ್ಟರ್ ಸೋಮಣ್ಣ ಶಿವಮೊಗ್ಗಕ್ಕೆ



ಸುದ್ದಿಲೈವ್/ಶಿವಮೊಗ್ಗ

ರಾಜ್ಯ ರೈಲ್ವೆ ಮತ್ತು ಜಲಶಕ್ತಿ ಸಚಿವರಾದ ವಿ.ಸೋಮಣ್ಣ ಶಿವಮೊಗ್ಗಕ್ಕೆ ಭೇಟಿ ನೀಡುತ್ತಿದ್ದಾರೆ. ಸಚಿವರ ಈ ಭೇಟಿ ಏನು ಪರಿಣಾಮ ಬೀರಲಿದೆ ಎಂಬ ಕುತೂಹಲ ಹೆಚ್ಚಿಸಿದೆ. 

ಈ ವರ್ಷದ ಜೂ.30 ಕ್ಕೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಸೇಲ್ ಸಚಿವ ಹೆಚ್.ಡಿ.ಕುಮಾರ್ ಸ್ವಾಮಿ ಭೇಟಿ ನೀಡಿ ಭದ್ರಾವತಿ ವಿಐಎಸ್ಎಲ್ ಕಾರ್ಖಾನೆಗಳನ್ನ ಉದ್ಧಾರ ಮಾಡಲಿದ್ದಾರೆ ಎಂಬ ನಿರೀಕ್ಷೆ ಹೆಚ್ಚಿತ್ತು. ಆ ನಿರೀಕ್ಷೆ ಹಾಗೆ ಉಳಿದಿದ್ದು, ನಿರೀಕ್ಷೆ ನಿಜವಾಗಲಿದೆ ಎಂಬ ಭರವಸೆ ಇನ್ನೂ ಹಾಗೆ ಉಳಿದಿದೆ. 

ಸೆ.26 ರಂದು ರೈಲ್ವೆ ಮತ್ತು ಜಲ ಶಕ್ತಿ ರಾಜ್ಯ ಸಚಿವರಾದ ವಿ ಸೋಮಣ್ಣ ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದು, ಈ ಪ್ರದೇಶದಲ್ಲಿನ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಪ್ರಗತಿಯನ್ನು ವೀಕ್ಷಿಸಲಿದ್ದಾರೆ. ಇವರೊಂದಿಗೆ ಶ್ರೀ ಬಿ ವೈ ರಾಘವೇಂದ್ರ, ಮಾನ್ಯ ಸಂಸದರು, ಶಿವಮೊಗ್ಗ, ಮತ್ತು ಇತರ ಸಾರ್ವಜನಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. 

ಸಚಿವರ ಭೇಟಿಯ ವಿವರಗಳು 

ಬೆಳಿಗ್ಗೆ 9:00 ಘಂಟೆಗೆ: ಶಿಕಾರಿಪುರ-ಶಿವಮೊಗ್ಗ ನಡುವೆ ಶಿಕಾರಿಪುರ ಯಾರ್ಡ್ ಬಳಿ ಕಿ.ಮೀ 45/700 ಮತ್ತು ರಾಜ್ಯ ಹೆದ್ದಾರಿ 57 ರಲ್ಲಿ ಕಿಮೀ 34/900 ರಲ್ಲಿ ರಸ್ತೆ ಕೆಳ ಸೇತುವೆ ನಿರ್ಮಾಣದ ಪರಿಶೀಲನೆ. 

11:30 ಘಂಟೆಗೆ: ಕೋಟೆಗಂಗೂರು ಕೋಚಿಂಗ್ ಟರ್ಮಿನಲ್‌ನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ. 

ಮಧ್ಯಾಹ್ನ 12:00 ಘಂಟೆಗೆ: ಶಿವಮೊಗ್ಗ/ಮಲೆನಾಡು ಭಾಗದಾದ್ಯಂತ ನಡೆಯುತ್ತಿರುವ ಅಭಿವೃದ್ಧಿ ಯೋಜನೆಗಳು ಮತ್ತು ಕಾಮಗಾರಿಗಳ ಕುರಿತು ಚರ್ಚಿಸಲು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನೈಋತ್ಯ ರೈಲ್ವೆ ಅಧಿಕಾರಿಗಳು, ಸಾರ್ವಜನಿಕ ಪ್ರತಿನಿಧಿಗಳು ಮತ್ತು ಸ್ಥಳೀಯ ಆಡಳಿತದೊಂದಿಗೆ ಸಭೆ ನಡೆಸಲಿದ್ದಾರೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು