Girl in a jacket

ಕೋರ್ಟ್‌ಗಳನ್ನೇ ಮುಚ್ಚಿಬಿಡಿ-ಈಶ್ವರಪ್ಪ



ಸುದ್ದಿಲೈವ್/ಶಿವಮೊಗ್ಗ

ನ್ಯಾಯಾಲಯದ ತೀರ್ಪನ್ನ ಒಪ್ಪಲ್ಲ ಎಂಬುದುದಾದರೆ ನ್ಯಾಯಾಗಳನ್ನೇ ಮುಚ್ಚಿಬಿಡಿ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ಸಿದ್ದರಾಮಯ್ಯನವರ ಬಗ್ಗೆ ಹೈಕೋರ್ಟ್ ನೀಡಿರುವ ತೀರ್ಪು ಮಹತ್ವ ಪಡೆದಿದೆ ವೈಯುಕ್ತಿಕವಾಗಿ ಸಿಎಂ ಬಗ್ಗೆ ಏನೂ ಹೇಳಲ್ಲ. ಸಂವಿಧಾನದಲ್ಲಿ ನ್ಯಾಯಾಂಗದ ಬಗ್ಗೆ ದೊಡ್ಡವಿವರಣೆ ಇದೆ. 

ನ್ಯಾಯಾಲಯದ ತೀರ್ಪು ಬಂದ ನಂತರ ತೀರ್ಪಿಗೆ ಮನ್ನಣೆ ಕೊಡಲ್ಲ ಎಂದು ಹೇಳಲಾಗುತ್ತಿದೆ. ನ್ಯಾಯಾಂಗಕ್ಕೆ ಗೌರವ ಕೊಡ್ತಾರೋ ಇಲ್ವೋ? ಸಂವಿಧಾನದ ಉನ್ನತ ಸ್ಥಾನಕ್ಕೆ ಏರಿರುವ ವ್ಯಕ್ತಿ ಸಿದ್ದರಾಮಯ್ಯ ಕೋರ್ಟ್ ತೀರ್ಪಿಗೆ ಬೆಲೆ ಕೊಡಬೇಕು ಎಂದು ಮಾಜಿ ಡಿಸಿಎಂ ತಿಳಿಸಿದರು. 

ಸಿಎಂ ಅವರ ಪತ್ನಿ ಪಾರ್ವತಮ್ಮ ಸಾಥ್ವಿಕ ಹೆಣ್ಣುಮಕ್ಕಳು, ಯಾವುದೇ ಕಾರಣಕ್ಕೂ ಅವರಿಗೆ ಅನ್ಯಾಯವಾಗಬಾರದು. ಯಾವುದೋ ವ್ಯವಹಾರದಲ್ಲಿ ಸಿಎಂ ಪತ್ನಿ ಅವರ ಹೆಸರು ಬಳಸಿಕೊಂಡಿರಬಹುದು. ನ್ಯಾಯಾಂಗಕ್ಕೂ ಅನ್ಯಾಯವಾಗಬಾರದು ಎಂದರು. 

ನ್ಯಾಯಾಲಯಕ್ಕೆ ಬೆಲೆ ಕೊಡಲ್ಲ ಎನ್ನುವರೀತಿಯಲ್ಲಿ  ಕಾಂಗ್ರೆಸ್ ವರ್ತಿಸುತ್ತಿದೆ. ಹಾಗಾದರೆ ಕೋರ್ಟ್ಗಳನ್ನ  ಮುಚ್ಚಿ. ನಿಮ್ಮ ಪರ ಬಂದರೆ ನ್ಯಾಯ, ವಿರುದ್ಧ ಬಂದರೆ ಅನ್ಯಾಯವಾಗುತ್ತಾ? ನ್ಯಾಯಾಂಗದ ತೀರ್ಪನ್ನ ಒಪ್ಪಲ್ಲ ಎಂದು ಸಿಎಂ ಡಿಸಿಎಂ ಮತ್ತು ಕಾಂಗ್ರೆಸ್ ಹೈಕಮ್ಯಾಂಡ್ ಸಹ ರಾಜೀನಾಮೆ ನೀಡಲ್ಲ ಎಂದಿದ್ದಾರೆ. 

ನ್ಯಾಯಾಲಯದ ತೀರ್ಪನ್ನ ಒಪ್ಪಲ್ಲ ಎಂಬುದಕ್ಕೆ ಕಾಂಗ್ರೆಸ್ ಗೆ ಶೋಭಿತರಲ್ಲ. ನನ್ನ ವಿರುದ್ಧ ಆರೋಪ ಬಂದಾಗ ಸಿದ್ದರಾಮಯ್ಯ ಮತ್ತು ಡಿಕೆಶಿ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಪ್ರತಿಭಟಿಸಿದರು. ಈಶ್ವರಪ್ಪ, ಸಿದ್ದರಾಮಯ್ಯ ಎಂಬುದರ ಪ್ರಶ್ನೆ ಅಲ್ಲ ನ್ಯಾಯಾಲಯದ ವ್ಯವಸ್ಥೆಗೆ ಬದ್ಧರಾಗಬೇಕು ಎಂದರು. 

ರಾಜ್ಯದ ಮುಖ್ಯಮಂತ್ರಿಗಳು ಹೈಕೋರ್ಟ್ ಜಡ್ಜ್ ಮೆಂಟ್ ಒಪ್ಪಲ್ಲ ಎಂದರೆ ಯಾವ‌ನ್ಯಾಯ? ಮೇಲ್ಮನವಿಗೆ ಹೋಗಿ ಹೋರಾಡಲಿ. ರಾಜೀನಾಮೆ ನೀಡಲ್ಲ ಎಂಬ ಕೆಟ್ಟ ಸಂಪ್ರದಾಯವನ್ನ ಕಾಂಗ್ರೆಸ್ ಹುಟ್ಟುಹಾಕೋದು ಬೇಡ ಎಂದರು. 

ಬೆಂಗಳೂರಿನ ಈಶ್ವರಪ್ಪನವರ ಮನೆಯಲ್ಲಿ ನಿನ್ನೆ ಯತ್ನಾಳ್, ರಮೇಶ್ ಜಾರಕಿಹೊಳೆ ರಾಜೂಗೌಡರ ಭೇಟಿ ಬಗ್ಗೆ ಯಾವ ಗುಟ್ಟು ಬಿಟ್ಟುಕೊಡದ ಈಶ್ವರಪ್ಪ ಇದೊಂದು ಸ್ವಾಭಾವಿಕ ಸಭೆ ವಿಶೇಷತೆ ಇಲ್ಲ ಎಂದು ತಿಳಿಸಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು