Girl in a jacket

ಕೋಮು ಸೌಹಾರ್ಧತೆಗೆ ಧಕ್ಕೆ ಉಂಟು ಮಾಡುವ ಪೋಸ್ಟ್ ಇಬ್ಬರ ವಿರುದ್ಧ ಸುಮೋಟೊ ಪ್ರಕರಣ ದಾಖಲು

 


ಸುದ್ದಿಲೈವ್/ಸಾಗರ

ಇನ್‌ಸ್ಟಾಗ್ರಾಮ್‌ನಲ್ಲಿ ಹಿಂದೂ ದೇವರ ದೇವಸ್ಥಾನದ ಮುಂದೆ ಮುಸ್ಲೀಂರು ವಿವಿಧ ರೀತಿಯ ಬಾವುಟಗಳನ್ನ ಹಿಡಿದು ಕೋಮು ಸೌಹಾರ್ಧತೆಗೆ ಧಕ್ಕೆ ಉಂಟು ಮಾಡುವಂತೆ ಪೋಸ್ಟ್ ಮಾಡಿದ ಇಬ್ವರು ಯುವಕರ ವಿರುದ್ಧ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮುದಾಸಿರ್_6 ಮತ್ತು ಮಿ.ಸಿರಾಜ್ ಎಂಬುವರು ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಸಾಗರದ ಮಾರಿಕಾಂಬ ದೇವಸ್ಥಾನದ ಮುಂದೆ ಮುಸ್ಲೀಂ ಮೆರವಣಿಗೆ ಸಾಗುವ ಮತ್ತು ವಿವಿಧ ಬಾವುಟ ಪ್ರದರ್ಶಿಸುವುದನ್ನ ತೋರಿಸಿ ಅದಕ್ಕೆ ಹಳೇಯ ಪೋಸ್ಟ್ ಸೇರಿಸಿದ್ದರು.

ಈ ಹಳೆಯ ಪೋಸ್ಟ್ ನಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಮನವಿ ಮಾಡಿದ್ದ ಪೋಸ್ಟ್ ಗೆ ಸಂಘಟನೆಯ ನಾಯಕರ ಫೋಟೋಗಳನ್ನ ಸೇರಿಸಿ ಕೋಮು ದಳ್ಳುರಿಗೆ ಪ್ರಚೋದಿಸುವ ಕೆಲಸ ಮಾಡಿದ್ದರು.

ಕೋಮು ಸೌಹಾರ್ಧತೆಯನ್ನ ಹಾಳು ಮಾಡಿ ಇಬ್ಬರನ್ನೂ ಬಂಧಿಸುವಂತೆ ಸಾಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು