ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ಜೈಲಿಗೆ ನಿಜವಾಗಿಯೂ ಏನೋ ಗ್ರಹಚಾರ ಹಿಡಿದಿದೆಯೋ ಗೊತ್ತಿಲ್ಲ. ಸೆ.13 ರಂದು ಗಲಭೆಯಾಗಿದೆ. ಸರಿ ಎಂದು ಜೈಲ್ ಸೂಪರಿಂಟೆಂಡೆಂಟ್ ಬದಲಾದರೆ ಅದರ ಬೆನ್ನಲ್ಲೇ ಅನುಮಾನ ವಸ್ತುಗಳನ್ನ ಜೈಲ್ ಖೈದಿಗಳನ್ನ ಭೇಟಿ ಮಾಡಲು ಬಂದ ಸಂದರ್ಶಕರು ಬಿಸಾಕಿ ಹೋಗಿರುವ ಘಟನೆ ನಡೆದಿದೆ.
ಸೆ.17 ರಂದು ಸಂಜೆ ಸುಮಾರು 05-30 ಗಂಟೆಗೆ ಶಿವಮೊಗ್ಗ ಕೇಂದ್ರ ಕಾರಾಗೃಹದ ಸಂಧರ್ಶಕರ ಕೊಠಡಿ ಪಕ್ಕದ ಕಾರಿಡಾರ್ ಜಾಗದ ಬಳಿ ಅನುಮಾನಾಸ್ಪದ ವಸ್ತುವು ಬಿದ್ದಿದ್ದು ಪತ್ತೆಯಾಗಿದೆ. ಅನುಮಾನಾಸ್ಪದ ವಸ್ತುವನ್ನು ಕೇಂದ್ರ ಕಾರಾಗೃಹದ ಎಕ್ಸ್ ರೆ ಬ್ಯಾಗೇಜ್ ನಲ್ಲಿ ಪರಿಶೀಲಿಸಿದಾಗ ಮೇಲ್ನೋಟಕ್ಕೆ ಮೊಬೈಲ್ ಹಾಗೂ ಇತರೆ ವಸ್ತುಗಳಿರುವುದು ಕಂಡು ಬಂದಿದೆ. ಕಾರಾಗೃಹದ ಶಿಕ್ಷಾ ಬಂಧಿ ಶೋಯೇಬ್ @ ಚೂಡಿ ಬಿನ್ ಅಬ್ದುಲ್ ಗಫಾರ್ ಈತನನ್ನ ಭೇಟಿಮಾಡಲು ಬಂದ ಸೈಯ್ಯದ್ ಸಾದತ್ ಬಿನ್ ಮೆಹಬೂಬ್ ಪಾಷ, ತಾಹೀರ್ ಖಾನ್, ಬಂದಿದ್ದರು.
ಇವರುಗಳು ಹಳದಿ ಬಣ್ಣದ ಗಮ್ ಟೇಪಿನಲ್ಲಿ ಸುತ್ತಿರುವ ಅನುಮಾನಾಸ್ಪದ ವಸ್ತುವನ್ನು ಎಸೆಯಲು ಬಂದಿರುವುದು ತಿಳಿದು ಬಂದಿದೆ. ಇವರುಗಳನ್ನು ಕೆ.ಎಸ್.ಐ.ಎಸ್.ಎಫ್. ಪಾಳಿಯ ಉಸ್ತುವಾರಿಯವರಾದ ವೀರೇಂದ್ರ ಪಿ.ಎಸ್.ಐ ಹಾಗೂ ಕಾರಾಗೃಹದ ಹೊರಗಡೆ ಪೆರಿಮೀಟರ್ 5 ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಇವರು ಸೆರೆಹಿಡಿದಿದ್ದಾರೆ.
ಸದರಿ ಅನುಮಾನಾಸ್ಪದ ವಸ್ತುವನ್ನು ಒಳಗೆ ಎಸೆದ ಸಂಧರ್ಶಕರನ್ನು ಸಹಾಯಕ ಜೈಲರ್‌ಗಳು ಈ ಕಾರಾಗೃಹದ ಶಿಕ್ಷಾ ಬಂಧಿ ಸಂಖ್ಯೆ 01570 ಶೋಯೇಬ್ @ ಚೂಡಿ ಬಿನ್ ಅಬ್ದುಲ್ ಗಫಾರ್ ಮತ್ತು ಅನುಮಾನಾಸ್ಪದ ವಸ್ತುವನ್ನು ಒಳಗೆ ಎಸೆದ ಇಬ್ಬರು ಸಂಧರ್ಶಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನೂತನ ಜೈಲ್ ಸೂಪರಿಂಟೆಂಡೆಂಟ್ ದೂರು ದಾಖಲಿಸಿದ್ದಾರೆ.