Girl in a jacket

ಹಿಂದೂ ಸಮಾಜ ಸುಮ್ಮನಿರುವುದು ದೌರ್ಭಲ್ಯವಲ್ಲ, ರಕ್ತಪಾತಗಳಾಗುತ್ತವೆ-ಈಶ್ವರಪ್ಪ



ಸುದ್ದಿಲೈವ್/ಶಿವಮೊಗ್ಗ


ರಾಜ್ಯಾದ್ಯಂತ ಗಣಪತಿ ವಿಸರ್ಜನ ಮೆರವಣಿಗೆ ವೇಳೆ ಹಿಂದೂ ಸಮಾಜವನ್ನ ಟಾರ್ಗೆಟ್ ಮಾಡಲಾಗುತ್ತಿದೆ. ಸಮಾಜ ಎಚ್ಚೆತ್ತು ಕೊಂಡರೆ ರಕ್ತಪಾತ ಹಾಗೂ ದಂಗೆ ನಡೆಯಲಿದೆ. ಹಾಗಾಗಿ ರಾಜ್ಯ ಸರ್ಕಾರ ಸರಿಯಾದ ಕಾನೂನು ಜಾರಿಗೊಳಿಸಬೇಕು ಎಂದು ಮಾಜಿ ಡಿಸಿಎಂ ಈಶ್ವರಪ್ಪ ಗುಡುಗಿದ್ದಾರೆ.


ರಾಷ್ಟ್ರದ್ರೋಹಿ ಚಟುವಟಿಕೆ ಕರ್ನಾಟಕದಲ್ಲಿ ಹೆಚ್ಚಾಗಿದೆ. ಗಣಪತಿ ವಿಸರ್ಜನೆ ಸಮಯದಲ್ಲಿ ಇದು ಬಹಿರಂಗವಾಗುತ್ತಿದೆ. ಟಿಪ್ಪು, ಔರಂಗಜೇಬ್ ಕಟೌಟ್ ಹಾಕಲಾಗಿದೆ. ಶಿವಮೊಗ್ಗದಲ್ಲಿ ಪ್ಯಾಲೆಸ್ತೇನಿ ಜಿಂದಾಬಾದ್ ಎಂದಿರುವುದು. ಇವೆಲ್ಲ ರಾಷ್ಟ್ರದ್ರೋಹ ಕೆಲಸವಾಗಿದೆ. ಇವರನ್ನ ಸದೆ ಬಡೆಯಬೇಕು. ಒಬ್ಬ ಕಾಂಗ್ರೆಸ್ ನಾಯಕರೂ ಖಂಡಿಸದೆ ಇರುವುದು ದುಖಕರವಿಷಯವೆಂದರು.


ಪ್ರತಿಯಾಗಿ ಹಿಂದೂ ಸಮಾಜ ಉತ್ತರ ಕೊಡಲು ಶುರುವಾದರೆ ಕಥೆಯೇನು ಎಂದು ಪ್ರಶ್ನಿಸಿದ ಈಶ್ವರಪ್ಪ, ದಾವಣಗೆರೆಯಲ್ಲಿ ನಡೆದ ಘಟನೆಯಲ್ಲಿ ನಾಗಮಂಗಲದಲ್ಲಿ ನಡೆದ ಘಟನೆ ಬಗ್ಗೆ ಎಷ್ಟು ದಿನದ ವರೆಗೆ ಸುಮ್ಮನಿರಬೇಕು ಎಂದು ಪ್ರಶ್ನಿಸಿದರು. 


ನಾಗಮಂಗಲದಲ್ಲಿ ಮಸೀದಿ ರಸ್ತೆಗೆ ಬಂದ ಮೆರವಣಿಗೆ ಮೇಲೆ ಕಲ್ಲು ತೂರಲಾಗಿದೆ. ವಾಹನಗಳು ಜಖಂ, ಕೊಲೆ ಸಹ ಆಗಿದೆ. ದಾವಣಗೆರೆಯಲ್ಲಿ ನಡೆದ ಘಟನೆಯಲ್ಲಿ ಹೊರಗಿನವರ ಕೈವಾಡವಿದೆಯಾ ಎಂಬ ಶಂಕೆ ವ್ಯಕ್ತಪಡಿಸಿದರು. ಪೆಟ್ರೋಲ್ ಬಾಂಬ್ ಆಯುಧಗಳನ್ನ ತಂದು ಚುಚ್ಚುವುದರ ಹಿಂದೆ ತನಿಖೆಯಾಗಬೇಕು. ಸಣ್ಣ ಘಟನೆ ಎಂದು ಗಲಾಟೆ ನಡೆಸಿದವರ ವಿರುದ್ಧ ಮಾತ್ರ ಕ್ರಮ ಕೈಗೊಂಡರೆ ಶಾಂತವಾಗಲ್ಲ. 


ಬೆಳಿಗ್ಗೆ ಶಿವಮೊಗ್ಗ ಹಾವೇರಿಯಿಂದ ಕೆಎಸ್ಅರ್‌ಪಿ ವ್ಯಾನ್ ಗಳನ್ನ ದಾವಣಗೆರೆಗೆ ಕರೆಯಿಸಿಕೊಳ್ಳಲಾಗಿದೆ. ಯಾರು ಮೂಸ್ಲೀಂ ಗೂಂಡಗಳು ಯಾರು ಅಂತ ಪೊಲೀಸರಿಗೆ ಗೊತ್ತಿಲ್ವಾ? ಕಣ್ಮುಂದೆನೆ ಗಲಭೆಯಾದರೆ ಪೊಲೀಸರು ತಟಸ್ಥರಾಗಿರುತ್ತಾರೆ. ಹಾಗಾದರೆ ರಾಜ್ಯ ಸರ್ಕಾರ ಗೂಂಡಗಳಿಗೆ ಗಲಭೆ ನಡೆಸಲು ನಿರ್ದೇಶನವನ್ನ ನೀಡಿದ್ದೀರಾ ಎಂದು ಕೆಂಡಮಂಡಲವಾದರು. 


ಸುಮ್ಮನಿರುವುದು ಹಿಂದುಗಳ ದುರ್ಬಲವಲ್ಲ. ಇದೇ ಮುಂದುವರೆದರೆ ರಕ್ತಪಾತವಾಗಲಿದೆ, ದಂಗೆ ನಡೆಯಲಿದೆ ಎಂದು ಮಾಜಿ ಸಿಎಂ ಡಿಸಿಎಂ ಈಶ್ವರಪ್ಪ ಎಚ್ಚರಿಸಿದರು.‌


ಹಿಂದೂ ಭಾವನೆಗಳಿಗೆ ಧಕ್ಕೆಯಾಗಿದೆ 


ಸಾವಿರಾರು ಹಿಂದೂಗಳ ಮನೋಭಾವನೆಗಳಿಗೆ ಧಕ್ಕೆಯಾಗಿದೆ. ತಿರುಪತಿಯಲ್ಲಿ ಪ್ರಸಾದವಾಗಿ ನೀಡುವ ಲಡ್ಡು ತಯಾರಿಕೆಗೆ ಬಳಸುವ ವಸ್ತುಗಳ ಬಗ್ಗೆ ನಿನ್ನೆ ಸಿಎಂ ಚಂದ್ರಬಾಬು ನಾಯ್ಡು ನಡೆಸಿರುವ ವಿಷಯ ತನಿಖೆಯಾಗಬೇಕು. ಅಪ್ರತ್ಯಕ್ಷವಾಗಿ ವಿಷ ಕೊಡುವ ಕೆಲಸವಾಗಿದೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಗುಡುಗಿದರು. 


ಆಂಧಪ್ರದೇಶದಲ್ಲಿ ಸರ್ಕಾರ ಬದಲಾವಣೆ ಮಾಡದಿದ್ದರೆ ತಿರುಪತಿಯಲ್ಲಿ ಆಗಿರುವ ವಿಷಯನೇ ಗೊತ್ತಾಗುತ್ತಿರಲಿಲ್ಲ. ಪ್ರಪಂಚದ ತಿರುಪತಿ ತಿಮ್ಮಪ್ಪನ ಭಕ್ತರ ನೋವು ಹೇಳತೀರದು. ಗೋವಿನ, ಹಂದಿ ಮತ್ತು ಮೀನಿನ ಅಂಶ ಬೆರೆಸಿರುವ ಲಡ್ಡುವನ್ನ ಭಕ್ತರಿಗೆ ಹಂಚಲಾಗಿದೆ. ಈ ಬಗ್ಗೆ ಬಗ್ಗೆ ಲ್ಯಾಬ್ ವರದಿ ಬಂದಿದೆ. ತನಿಖೆ ಮಾಡಬೇಕು. ಇದರ ಹಿಂದೆ ಯಾರು ಯಾರು ಇದ್ದಾರೆ ಹೊರಬರಬೇಕು ಎಂದು ಆಗ್ರಹಿಸಿದರು.


ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್ ಅವರ ಪತ್ನಿಗೆ ಪರಿಹಾರ ನೀಡಲು ಸಿಎಂ ಕಚೇರಿಯಿಂದ ಕರೆ ಬಂದಿದೆ. ಬಾಂಡ್ ತರಲು ಸೂಚಿಸಿದ್ದಾರೆ. ಉದ್ಯೋಗವೂ ಸಿಗಲಿದೆ ಎಂದು ತಿಳಿಸಲಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು