ಸುದ್ದಿಲೈವ್/ಶಿವಮೊಗ್ಗ
ಸೇವಾ ಮನೋಭಾವ ಹಾಗೂ ನಾಯಕತ್ವ ಗುಣ ಬೆಳೆಸುವಲ್ಲಿ ಜೆಸಿಐ ಮಹತ್ತರ ಪಾತ್ರ ವಹಿಸುತ್ತದೆ ಎಂದು ಜೆಸಿಐ ಸಪ್ತಾಹ ಸಂಯೋಜಕಿ ಪೂರ್ಣಿಮಾ ಸುನೀಲ್ ಹೇಳಿದರು.
ಜೆಸಿಐ ಸಪ್ತಾಹದ ಅಂಗವಾಗಿ ಮಿಷನ್ ಕಾಂಪೌಂಡ್‌ನಲ್ಲಿ ಇರುವ ಪಾರ್ಕ್ ನಲ್ಲಿ ಜೆಸಿಐ ಇಂಡಿಯಾದ ಬಾವುಟ ಹಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಸಮಾಜಮುಖಿ ಕೆಲಸದೊಂದಿಗೆ ತರಬೇತಿ ನೀಡುವ ಜತೆಯಲ್ಲಿ ಸ್ವಸ್ಥ ಸಮಾಜ ಕಟ್ಟಲು ನಿರಂತರ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಜೆಸಿಐ ಸಂಸ್ಥೆ ಪ್ರತಿ ವರ್ಷ ಸಪ್ತಾಹ ನಡೆಸುತ್ತಿದ್ದು, ಪ್ರಸ್ತಕ ಸಾಲಿನಲ್ಲಿ ಸೆ. 9ರಿಂದ 15ರವರೆಗೆ ಜೆಸಿಐ ಹಬ್ಬ ಆಚರಿಸುತ್ತಿದ್ದು, ಸಪ್ತಾಹದಲ್ಲಿ ಸಾರ್ವಜನಿಕ ಸಂವಹನ ಹಾಗೂ ಸೇವೆಗೆ ಸಂಬಂಧಿಸಿ ವೈವಿಧ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಸೇವೆ ಹಾಗೂ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಜೆಸಿಐ ಸಂಸ್ಥೆಯು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಸೇವಾ ಕಾರ್ಯಗಳನ್ನು ನಡೆಸುತ್ತಿದ್ದು, ಶಾಲೆಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡುತ್ತದೆ. ಸಾರ್ವಜನಿಕರ ಅನುಕೂಲಕ್ಕಾಗಿ ಆರೋಗ್ಯ ಜಾಗೃತಿ ಶಿಬಿರಗಳನ್ನು ನಡೆಸಲಾಗುತ್ತದೆ. ಯುವಜನರಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡುವ ಕೆಲಸವನ್ನು ಜೆಸಿಐ ಸಂಸ್ಥೆ ಮಾಡುತ್ತದೆ ಎಂದು ತಿಳಿಸಿದರು.
ಶುಭಂ ಹೊಟೇಲ್ ಮಾಲೀಕರಾದ ಜೆಸಿ ಚಂದ್ರಹಾಸ ಶೆಟ್ಟಿ, ಉದಯ ಕದಂಬ ಅವರ ಸಹಕಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿಜಡ್‌ಪಿ ಜೆಸಿ ಅನುಷ್ ಗೌಡ, ಪಿಜಡ್ ಅಧಿಕಾರಿಗಳು, ಶಿವಮೊಗ್ಗದ ಜೆಸಿಐ ಘಟಕದ ಎಲ್ಲ ಅಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿದ್ದರು.