ಸುದ್ದಿಲೈವ್/ಶಿವಮೊಗ್ಗ
ಬಾರ್ ನಲ್ಲಿ ಕೈ ಟಚ್ ಆಗಿದ್ದಕ್ಕೆ ನಾಲ್ವರು ಯುವಕರು ಪರಸ್ಪರ ಬಡಿದಾಡಿಕೊಂಡಿದ್ದಾರೆ. ಸಕಾಲಕ್ಕೆ 112 ಬಂದ ಕಾರಣ ಮೂರನ್ನ ಪೊಲೀಸರು ವಶಪಡಿಸಿಕೊಂಡರೆ ಉಳಿದಿಬ್ಬರು ಪರಾರಿಯಾಗಿದ್ದಾರೆ. ಪ್ರಕರಣ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಂಕರ ಮಠ ರಸ್ತೆಯಲ್ಲಿರುವ ಬಾರ್ ನಲ್ಲಿ ಶೇಷಾದ್ರಿಪುರಂ ಹುಡುಗರು ಕುಡಿಯುತ್ತಿದ್ದ ವೇಳೆ ಚಿಕ್ಕಲ್ ನ ಹುಡುಗರು ಬಂದಿದ್ದಾರೆ. ನಡೆದಾಡುವಾಗ ಟಚ್ ಆಗಿದೆ. ಅಷ್ಟಕ್ಕೆ ಗಲಾಟೆಯಾಗಿದೆ. ಬಾರ್ ನಿಂದ ಹೊರ ಬಂದು ಗಲಾಟೆ ಮಾಡಿಕೊಂಡಿದ್ದಾರೆ.
ಈ ವೇಳೆ 112 ಗೆ ಕರೆ ಮಾಡಿದ ಪರಿಣಾಮ ಪೊಲೀಸರ ವಾಹನ ಸಕಾಲದಲ್ಲಿ ಸ್ಥಳಕ್ಕೆ ಧಾವಿಸಿದೆ. ಇದೇ ವೇಳೆ ಇಬ್ವರು ಯುವಕರು ಪರಾರಿಯಾಗಿದ್ದಾರೆ. ಕಾರ್ತಿಕ್, ರವಿ, ಸಂಜುದೇವಕರ್‌ನ್ನ ಪೊಲೀಸರು ವಶಕ್ಕೆ ಪಡೆದುಕೊಂಡು ಕೋಟೆ ಠಾಣೆಗೆ ಕರೆದೊಯ್ದಿದ್ದಾರೆ.
ಚಂದನ್ ಮತ್ತು ದರ್ಶನ್ ಎಂಬುವರು ಎಸ್ಕೇಪ್ ಆಗಿದ್ದಾರೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.