Girl in a jacket

ಕೋಟೆ ರಸ್ತೆಯಲ್ಲಿರುವ ಗಣಪತಿ, ಬಜಾರ್‌ನಲ್ಲಿ ಎಲ್ಲಿನೋಡಿದರೂ ಕೇಸರಿ ಮಯ

 


ಸುದ್ದಿಲೈವ್/ಶಿವಮೊಗ್ಗ


ಬೆಳಿಗ್ಗೆ 11-10 ಕ್ಕೆ ಹಿಂದೂ ಮಹಾಸಭಾ ಗಣಪತಿ ಭೀಮೇಶ್ವರ ದೇವಸ್ಥಾನದಿಂದ ಹೊರಟ ಮೆರವಣಿಗೆ ರಾಮಣ್ಣ‌ಶ್ರೇಷ್ಠಿ ಪಾರ್ಕ್ ತಲುಪಿಲ್ಲ. ರಾಮಣ್ಣ ಶ್ರೇಷ್ಟಿ ಪಾರ್ಕ್ ಬಳಿ ಕಾಂಗ್ರೆಸ್ ಮುಖಂಡ ಹೆಚ್ ಸಿ ಯೋಗೀಶ್ ನೋಟಿನ ಹಾರ ಹಾಕಲು ಸಜ್ಜಾಗಿದ್ದಾರೆ. ಇದಕ್ಕೂ ಮೊದಲು ಭೀಮೇಶ್ವರ ದೇವಸ್ಥಾನದಿಂದ  ಕೋಟೆ ಮಾರಿಕಾಂಬ ದೇವಿ ದೇವಸ್ಥಾನದ ತಿರುವಿನ‌ ಬಳಿ ಗಣಪತಿಗೆ ಬೆಕ್ಕಿನ ಕಲ್ಮಠದ ಡಾ.ಮುರುಘ ರಾಜೇಂದ್ರ ಮಹಾಸ್ವಾಮಿಗಳು ಪ್ರತಿವರ್ಷದಂತೆ ಈ ವರ್ಷವೂ ಹೂವಿನ ಮಾಲೆ ಅರ್ಪಿಸಿದ್ದಾರೆ. ಬ





ಒಂದು ಕಡೆ ಭಕ್ತಿಗೀತೆಗಳು ಆಡಿಯೋದಲ್ಲಿ ಬಿತ್ತರವಾಗುತ್ತಿದ್ದಾರೆ. ಯುವಕರ ಜೈ ಶ್ರೀರಾಮ್ ಘೋಷಣೆ ಭರ್ಜರಿಯಾಗಿ ಮೊಳಗುತ್ತಿವೆ. ಸಾವರ್ಕರ್ ಧ್ವಜ ಆಗಲೇ ಬಜಾರ್ ನಲ್ಲಿ ಹಿಡಿದು ಯುವಕರು ಭಾಗಿಯಾಗಲು ಅಣಿಯಾಗುತ್ತಿದ್ದಾರೆ. ಮೆರವಣಿಗೆಗೆ ಎಂದಿನಂತೆ ಪೊಲೀಸರ ಪಹರೆ ನಡೆದಿದೆ.


ರಾಮಣ್ಣಶ್ರೇಷ್ಠಿ ಪಾರ್ಕ್‌ನ್ನ ಸುಮಾರು 2 ಗಂಟೆಗೆ ತಲುಪಿದರೂ ಅಲ್ಲಿಂದ ಹೊರಡುವುದು ಮೂರು ಗಂಟೆಯ ನಂತರವೇ ಆಗುವ ಸಾಧ್ಯತೆಯಿದೆ. ಅದೇ ಬಸವಣ್ಣನ ದೇವಸ್ಥಾನದ ಬಳಿ ಮಾರ್ಕೆಟ್ ಭಾನು ಅವರಿಂದ ಗಣಪತಿಗೆ ನೋಟಿನ ಹಾರಕ್ಕೆ ಸಿದ್ದತೆ ನಡೆದಿದೆ.



ಗಾಂಧಿ ಬಜಾರ್ ಕೇಸರಿಮಯವಾಗಿದೆ. ಬಹುಪಾಲು ಸಾರ್ವಜನಿಕರು ಕೇಸರಿ ಶಾಲು ಧರಿಸಿ ಮೆರವಣಿಗೆಯಲ್ಲಿ ಯುವಕರು ಯುವತಿಯರು ಪಾಲ್ಗೊಂಡಿದ್ದಾರೆ. ಒಟ್ಟಿನಲ್ಲಿ ಜಾತ್ರೆಯ ವಾತವಾರಣ ಶಿವಮೊಗ್ಗ ಗಾಂಧಿ ಬಜಾರ್ ನಲ್ಲಿ ನಿರ್ಮಾಣವಾಗಿದೆ.



ಅಲ್ಲಲ್ಲಿ ಪ್ರಸಾದ ವಿನಿಯೋಗ ನಡೆಯುತ್ತಿದೆ. ಗಾಂಧಿ ಬಜಾರ್ ನಲ್ಲೇ 6-8 ಕಡೆ ಪ್ರಸಾದ ವಿನಿಯೋಗದ ವ್ಯವಸ್ಥೆ ಮಾಡಲಾಗಿದೆ. ಸರದಿ ಸಾಲಿನಲ್ಲಿ ನಿಂದು ಭಕ್ತರು ಪ್ರಸಾದ ಪಡೆಯುತ್ತಿದ್ದಾರೆ. ಒಟ್ಟಿನಲ್ಲಿ ಬಜಾರ್ ಭರ್ಜರಿ ಮೆರವಣಿಗೆಗೆ ಸಜ್ಜುಗೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು