ಸುದ್ದಿಲೈವ್/ಶಿವಮೊಗ್ಗ
ಅನೇಕ ಗೊಂದಲಗಳು, ಆಡಳಿತದಲ್ಲಿ ಅಧಕ್ಷತೆ, ಸದಾ ಸರ್ಕಾರಿ ಮೊಬೈಲ್ ಸಿಮ್‌ನ್ನ ಸ್ವಿಚ್ ಆಫ್ ಮಾಡಿಕೊಂಡು ಆಕ್ಷೇಪಣೆಗೆ ಕಾರಣವಾಗಿದ್ದ ಜೈಲರ್ ಡಾ.ಅನಿತಾ ಕೊನೆಗೂ ವರ್ಗಾವಣೆಯಾಗಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ತುಂಗನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದೇ ಈ ಮೇಡಂನ ಒಂದು ಸಾಧನೆಯಾಗಿತ್ತು. ಎಫ್ಐಆರ್ ದಾಖಲಿಸಲು ಮೇಡಂ ಸರ್ವ ಸ್ವತಂತ್ರರು. ಹಾಗಂತ ಆಡಳಿತದಲ್ಲಿ ಬಿಗಿ ಇಲ್ಲವೆಂದರೆ ಎಲ್ಲವೂ ತಲೆಮೇಲೆ ಏರಲಿದೆ ಎಂಬ ಆರೋಪವೂ ಸಹ ನಿಜವಾದಂತೆ ಕಂಡು ಬಂದಿದೆ.
ಶಿವಮೊಗ್ಗ ಕಾರಾಗೃಹದಲ್ಲಿ ಸೆ. 7-12 ರವರೆಗೆ ನಡೆದ ಖೈದಿಗಳ ಬೇಡಿಕೆ ವಿಚಾರದಲ್ಲಿ ನಡೆದ ಗಲಾಟೆ, ದೊಂಬಿ, ಕಲ್ಲುತೂರಾಟ ಜೈಲ್ ಸೂಪರಿಂಟೆಂಡೆಂಟ್ ಮಹಿಳಾ ಅಧಿಕಾರಿಯಿಂದಲೇ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಸರ್ಕಾರ ನೀಡಿದ ಸಿಮ್‌ನ್ನ ನಿತಂತರವಾಗಿ ಸ್ವಿಚ್ ಆಫ್ ಮಾಡಿಕೊಂಡಿರುವ ರಹಸ್ಯವೇನು ಎಂಬುದನ್ನ ವರ್ಗಾವಣೆಗೊಂಡ ಮಹಿಳೆ ಅಧಿಕಾರಿ ಇನ್ನಾದರೂ ಬಯಲು ಮಾಡುತ್ತಾರಾ ಅಥವಾ ವರ್ಗಾವಣೆಗೊಂಡ ಸ್ಥಳದಲ್ಲೂ ಇದೇ ರೀತಿಯ ಕಾರ್ಯವೈಖರಿ ಮುಂದುವರೆಸುತ್ತಾರಾ ಕಾದು ನೋಡಬೇಕಿದೆ.
ಈ ನಡುವೆ ಡಾ.ಅನಿತಾ ಕಲ್ಬುರ್ಗಿಗೆ ಎತ್ತಂಗಡಿಯಾದರೆ ಕಲ್ಬುರ್ಗಿಯಲ್ಲಿದ್ದ ಜನಸ್ನೇಹಿ ಅಧಿಕಾರಿ ರಂಗನಾಥ್ ಶಿವಮೊಗ್ಗ ಜೈಲ್ ಸೂಪರಿಂಟೆಂಡೆಂಟ್ ಆಗಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಇವರೂ ಸಹ 2017 ರವರೆಗೆ ಶಿವಮೊಗ್ಗ ಜೈಲ್ ಸೂಪರಿಂಟೆಂಡೆಂಟ್ ಆಗಿ ಕರ್ತವ್ಯ ನಿರ್ವಹಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಈಗಲಾದರೂ ಶಿವಮೊಗ್ಗ ಜೈಲ್ ಬದಲಾಗುತ್ತಾ ಕಾದು ನೋಡಬೇಕಿದೆ.