Girl in a jacket

ಹಬ್ಬದ ದಿನವೂ ಮುಂದುವರೆದ ಪಥಸಂಚಲನ


ಸುದ್ದಿಲೈವ್/ಶಿವಮೊಗ್ಗ


ಗಣಪತಿ ಹಬ್ಬದ ವೇಳೆ ಪೊಲೀಸರ ಪಥಸಂಚಲನ ಮಾಮೂಲು. ಆದರೆ ಹಬ್ಬದ ದಿನವೂ ನಗರದಲ್ಲಿ ಪಥಸಂಚಲನ ನಡೆದಿದೆ. ಗಣಪತಿ ಹಬ್ಬದ ದಿನ ಆರ್‌ಎಎಫ್ ಹಾಗೂ ಪೊಲೀಸರು ಪಥಸಂಚಲನ ನಡೆಸಿದ್ದಾರೆ.


 ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಎಸ್ಪಿ ಮಿಥುನ್ ಕುಮಾರ್ ಜಿ.ಕೆ, ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ, ಎ ಜಿ ಕಾರ್ಯಪ್ಪ, ಮಾರ್ಗದರಶನದಲ್ಲಿ ಮತ್ತು ಡಿವೈಎಸ್ಪಿ ಬಾಬು ಆಂಜನಪ್ಪ, ಕಾರವಾರ ಟೌನ್  ಪಿಐ  ಗಿರೀಶ್  ಮತ್ತು ಆರ್.ಎ.ಎಫ್ ಅಸ್ಸಿಸ್ಟೆಂಟ್ ಕಮಾಂಡೆಂಟ್ ರಿಜೇಶ್‌ರವರ ನೇತೃತ್ವದಲ್ಲಿ, ಇಂದು ಸಂಜೆ ಶಿವಮೊಗ್ಗ ನಗರದಲ್ಲಿ ಪೊಲೀಸ್ ಪಥ ಸಂಚಲನ (ರೂಟ್ ಮಾರ್ಚ್) ವನ್ನು ನಡೆಸಲಾಯಿತು. 


ಪಥ ಸಂಚಲನವನ್ನು ಮಂಡಲೇಶ್ವರ ದೇವಸ್ಥಾನದ   ಆವರಣದಿಂದ ಪ್ರಾರಂಭಿಸಿ  ಎ ಎ ವೃತ್ತ, ನ್ಯೂ ಮಂಡ್ಲಿ ವೃತ್ತ, ಸಂದೇಶ್ ಮೋಟರ್ಸ್, ಕೆಜಿಎನ್ ವೃತ್ತ, ಇಮಾಮ್ ಬಡಾ, ಸೀಗೆಹಟ್ಟಿಯಿಂದ ಎ. ಎ. ವೃತ್ತಕ್ಕೆ ಬಂದು ಮುಕ್ತಾಯ ಮಾಡಲಾಯಿತು. 


ಪೋಲಿಸ್ ಪಥ ಸಂಚಲನದಲ್ಲಿ  ರವಿ ಪಟೇಲ್, ಪೊಲೀಸ್ ನಿರೀಕ್ಷಕರು, ದೊಡ್ಡಪೇಟೆ ಪೊಲೀಸ್ ಠಾಣೆ, ಮತ್ತು ಪೊಲೀಸ್ ನಿರೀಕ್ಷಕರಾದ  ನಾಗರಾಜ್,  ಮಂಜುನಾಥ್, ಶ್ರೀ ಬಲಕೃಷ್ಣ, ಹಾಗೂ ಶಿವಮೊಗ್ಗ ನಗರದ ಪೊಲೀಸ್ ಉಪ ನಿರೀಕ್ಷಕರು, ಸಿಬ್ಬಂಧಿಗಳ ಮತ್ತು  ಆರ್. ಎ. ಎಫ್,  ಕೆ.ಎಸ್.ಆರ್.ಪಿ ಮತ್ತು ಕ್ಯೂ.ಆರ್.ಟಿ ಯ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳು ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು