ಸುದ್ದಿಲೈವ್/ಶಿವಮೊಗ್ಗ
ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಕೊಪ್ಪ ಗ್ರಾಮದಲ್ಲಿ ಪಾದಚಾರಿಯೋರ್ವನಿಗೆ ಬೈಕ್ ವೊಂದು ಡಿಕ್ಕಿ ಹೊಡೆದಿದ್ದು, ಪಾದಚಾರಿ ಸಾವುಕಂಡಿರುವ ಘಟನೆ ನಿನ್ನೆ ನಡೆದಿದೆ.
ಹೊಸಕೊಪ್ಪ ಗ್ರಾಮದಲ್ಲಿ ಕೂಲಿಕಾರ್ಮಿರೊಬ್ಬರು ಹೊಳೆಹೊನ್ನೂರಿನಲ್ಲಿ ಕೂಲಿ ಮುಗಿಸಿಕೊಂಡು ಹೊಸಕೊಪ್ಪ ಬಸ್ ನಿಲ್ದಾಣದಿಂದ ಮನೆ ಕಡೆ ನಡೆದುಕೊಂಡು ಹೋಗುವಾಗ ಹಿಂದಿನಿಂದ ಬಂದ ಬೈಕ್ ಡಿಕ್ಕಿ ಹೊಡೆದಿದೆ.
KA 14 HA 0712 ಕ್ರಮಸಂಖ್ಯೆಯ ಬೈಕ್ ಡಿಕ್ಕಿ ಹೊಡೆದಿದೆ. ಅಪಘಾತಕ್ಕೆ ಒಳಗಾದ ವ್ಯಕ್ತಿಯ ಕಿವಿಯಲ್ಲಿ ರಕ್ತ ಬಂದಿದೆ. ತಕ್ಷಣವೇ ಆತನನ್ನ ಹೊಳೆಹೊನ್ನೂರು ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಲಾಗಿತ್ತು.
ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದ ಕೂಲಿಕಾರ್ಮಿಕನನ್ನ ಚಂದ್ರಪ್ಪ (58) ಎಂದು ಗುರುತಿಸಲಾಗಿದೆ.