Girl in a jacket

ಗ್ರಾಮ ಪಂಚಾಯಿತಿ ಮಗನ ವಿರುದ್ಧ ಲಂಚದ ಆರೋಪ



ಸುದ್ದಿಲೈವ್/ಶಿವಮೊಗ್ಗ

ತಾಲೂಕಿನ ಗಾಜನೂರು ಗ್ರಾಮ ಪಂಚಾಯಿತಿ ಸದಸ್ಯನ ಮಗನಿಗೆ ಲಂಚ ನೀಡಿಲ್ಲವೆಂಬ ಕಾರಣಕ್ಕೆ ವ್ಯವಹಾರ ನಡೆಸಲು ಅಡ್ಡಿಪಡಿಸಿರುವ ಘಟನೆ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಗಾಜನೂರಿನ ಸರ್ವೆ ನಂಬರ್ 258/1 ಗ್ರಾಮ ಪಂಚಾಯಿತಿಯ ಸರ್ಕಾರಿ ಜಾಗವಾಗಿದೆ. ಇಲ್ಲಿ ಬಾಡಿಗೆ ಪಡೆದ ಕುಮಾರ್ ಮತ್ತು ದಂಪತಿಗಳು ಕ್ಯಾಂಟೀನ್ ಮತ್ತು ಬೀಡಾ ಅಂಗಡಿ ನಡೆಸಲು ಖಾಲಿ ನಿವೇಶನಕ್ಕೆ ಬಾಡಿಗೆ ಪಡೆದಿರುತ್ತಾರೆ. 

ಈ ಖಾಲಿ ಜಾಗದಲ್ಲಿ ನೀರು ಹೋಗಲು  ನಾಲ್ಕುಪೈಪ್ ಲೈನ್ ಸಂಪರ್ಕ ನೀಡಲು ಮುಂದಾಗಿದ್ದಾರೆ. ಕಾಮಗಾರಿ ಮಾಡಿಸುವಾಗ ಗ್ರಾಮಪಂಚಾಯಿತಿ ಸದಸ್ಯರ ಮಗ ಅಡ್ಡಿಪಡಿಸಿದ್ದು ಕುಮಾರ್ ಮತ್ತು ಪತ್ನಿಗೆ ತೊಂದರೆ ನೀಡುವುದಾಗಿ ದೂರಿನಲ್ಲಿ ದೂರಲಾಗಿದೆ. 

ಗ್ರಾಮಪಂಚಾಯಿತಿಯಿಂದ ಬಾಡಿಗೆ ಪಡೆಯುವಾಗ ಈ ಗ್ರಾಮಪಂಚಾಯಿತಿ ಸದಸ್ಯನ ಮಗ ಅಜಯ್ 10 ಸಾವಿರ ರೂ. ಲಂಚಕೊಡುವಂತೆ ಕೇಳಿದ್ದು ಲಂಚ ಕೊಡದೆ ಇದ್ದ ಪರಿಣಾಮ ಈಗ ಪೈಪ್ ಲೈನ್ ನಿರ್ಮಿಸಲು ಅಡ್ಡಿ ಪಡಿಸಿ, ಬೆದರಿಕೆ, ಹಲ್ಲೆ ಮಾಡಿರುವುದಾಗಿ ಎಫ್ಐಆರ್ ನಲ್ಲಿ ದೂರಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು