Girl in a jacket

ಆರ್.ಟಿ.ಆರ್ ಮಂಜು ಅವರಿಂದ ಧಾನ ಧರ್ಮಗಳ ಮೂಲಕ ನಡೆದ ಭಗತ್ ಸಿಂಗ್ ಹುಟ್ಟುಹಬ್ಬ

 


ಸುದ್ದಿಲೈವ್/ಶಿವಮೊಗ್ಗ

ಭಾರತ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ 117 ನೇ ಜನ್ಮದಿನೋತ್ಸವವನ್ನ ಆಚರಿಸಲಾಯಿತು.

ನಗರದ ಗಾಂಧಿ ಬಜಾರ್‌ನಲ್ಲಿರುವ ಉಪ್ಪಾರ್ ಕೇರಿಯಲ್ಲಿ ಭಗತ್ ಸಿಂಗ್ ಯುವಕರ ಸಂಘ ಇಂದು ಹುಟ್ಟುಹಬ್ಬ ಆಚರಿಸಿದರು. ಕೇಕ್ ಕಟ್ ಮಾಡಿ ಹಾಗೂ ಸಿಹಿ ಹಂಚಲಾಯಿತು. ಅಂಧರಿಗೆ ಬೆಡ್ ಶೀಟ್, ಶಾಲೆ ಮಕ್ಕಳಿಗೆ ಪಠ್ಯ ಕಿಟ್ ಹಂಚಿ ಹುಟ್ಟು ಹಬ್ಬವನ್ನಚರಿಸಲಾಯಿತು‌. ಆರ್ ಟಿ ಆರ್ ಮಂಜು ಮತ್ತು ಆರ್ ಟಿ ಆರ್ ಅಭಿಮಾನಿ ಬಳಗದಿಂದ ಹುಟ್ಟುಹಬ್ಬ ಆಚರಿಸಲಾಯಿತು.

ಭಗತ್ ಸಿಂಗ್1907 ರಂದು ಸೆಪ್ಟಂಬರ್ 28 ರಂದುಪಂಜಾಬಿನ ಜರನವಾಲಾ ತಾಲೂಕಿನ ಬಂಗಾ ಎಂಬ ಹಳ್ಳಿಯಲ್ಲಿ ಜನಿಸಿದರು.  ಜನನ ಜರನವಾಲಾ ತಾಲೂಕಿನ ಬಂಗಾ ಎಂಬ ಹಳ್ಳಿಯಲ್ಲಿ. ಅವರ ತಾಯಿ ಶ್ರೀಮತಿ ವಿದ್ಯಾವತಿ ಮತ್ತು ಜೀವ ವಿಮಾ ಕಂಪನಿಯಲ್ಲಿ ಏಜೆಂಟರಾಗಿ ವೃತ್ತಿ ಮಾಡುತ್ತಿದ್ದ ತಂದೆ ಕಿಶನ್ ಸಿಂಗ್. ಭಗತ್ ಮೇಲೆ ಅತೀವ ಪ್ರಭಾವವನ್ನು ಬೀರಿದ್ದವರೆಂದರೆ ಅವರ ಚಿಕ್ಕಪ್ಪ ಅಜಿತ್ ಸಿಂಗ್  

ಈಗಾಗಲೇ ಅಜಿತ್ ಸಿಂಗರು ಉಗ್ರ ಭಾಷಣಕಾರರಾಗಿದ್ದು ರೈತರ ನಡುವೆ ಹಲವಾರು ಚಳುವಳಿಗಳನ್ನು ಸಂಘಟಿಸಿ ಬ್ರಿಟೀಷರು ಬಂಧನಕ್ಕೀಡು ಮಾಡಲು ಬಲೆ ನೇಯ್ದಿದ್ದರೂ ಸಿಗದೆ ಅವರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದರು. ಇದರೊಂದಿಗೆ ಜಲಿಯನ್ ವಾಲಾಬಾಗ್‌ನಲ್ಲಿ ಬ್ರಿಟೀಷರು ನಡೆಸಿದ ಮಾರಣಹೋಮದಿಂದುಂಟಾದ ರಕ್ತದ ಕೆಂಪು ಕಲೆ, ಅವರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಬ್ಬಿಸಿ ಮನಸ್ಸಿನಲ್ಲಿ ಹೋರಾಟದ ಚಿತ್ತಾರ ಮೂಡಿಸಿತ್ತು.

ಲಾಹೋರ್ ಪಿತೂರಿ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಕರ್ತಾರ್ ಸಿಂಗ್ ಸರಭ್ ರವರನ್ನು 1915 ರಲ್ಲಿ ಅವರ 20 ನೇ ವಯಸ್ಸಿನಲ್ಲೇ ನೇಣಿಗೇರಿಸಲಾಗಿತ್ತು. "ರಾಷ್ಟ್ರ ವಿಮೋಚನೆಯೊಂದೇ ನನ್ನ ಗುರಿ. ಯಾವುದೇ ವ್ಯಕ್ತಿ, ರಾಷ್ಟ್ರ, ಧರ್ಮ ಅಥವಾ ಜನಾಂಗದ ಮೇಲೆ ದ್ವೇಷ ಸಾಧಿಸಲು ನಾನಾವುದನ್ನೂ ಮಾಡಿಲ್ಲ. ನನಗೆ ಬೇಕಾಗಿರುವುದೊಂದೆ - ಸ್ವಾತಂತ್ರ್ಯ. ಅದೊಂದೇ ನನ್ನ ಕನಸು" ಎಂಬ ಸರಭ್‌ರ ಕೊನೆಗಾಲದ ಮಾತುಗಳು ಅವರಲ್ಲಿ ಕ್ರಾಂತಿಯ ಉದ್ದೀಪನ ಹಚ್ಚಿದ್ದವು. ಇದು ಭಗತ್‌ರನ್ನು ಮೈನವಿರೇಳಿಸಿ ಸಾವಿಗೇ ಸವಾಲು ಹಾಕುವಂತಹ ಗುಣವನ್ನು ಮೈಗೂಡುವಂತೆ ಮಾಡಿತ್ತು.

ಪುರಾತನ ವ್ಯವಸ್ಥೆಯನ್ನು ನಾಶಮಾಡದೆ ಹೊಸ ಬದಲಾವಣೆಯನ್ನು ತರುವುದು ಸಾಧ್ಯವಿಲ್ಲ' ಎಂದು ಭಗತ್ ಸಿಂಗ್ ರವರಿಗೆ ಮನವರಿಕೆಯಾಗಿತ್ತು. ಆದರೆ ಪ್ರತಿಭಟನೆಯ ದಿವ್ಯ ಜ್ಯೋತಿ ಆರದಂತೆ ಉರಿಯಲು ತನ್ನಂಥವರು ಸಾಯಲೇಬೇಕೆಂದು ಭಗತ್ ನಂಬಿದ್ದರು. 

ಮಾರ್ಚ್ ೨೩ ೧೯೩೧ ರಂದು ಇವರನ್ನು ಬ್ರಿಟಿಷ್ ಸರ್ಕಾರವು ಗಲ್ಲಿಗೇರಿಸಿತು. . ಭಗತ್ ಸಿಂಗ್ ಸಂಪೂರ್ಣ ನಾಸ್ತಿಕ ಮತ್ತು ಜಾತಿವಿರೋಧಿಯಾಗಿದ್ದರು ಸಾಯುವ ಕೆಲವೇ ನಿಮಿಷಗಳ ಮೊದಲು ಪ್ರಾರ್ಥನೆಯಂತೆ ಭಗತ್ ನುಡಿದ ಮಾತುಗಳು ಎಂಥವರನ್ನೂ ಕೆಚ್ಚೆದೆಯ ಉತ್ತುಂಗಕ್ಕೇರಿಸಬಲ್ಲವು.  ಮೊದಲು ನಿಮ್ಮ ವೈಯುಕ್ತಿಕತೆಯನ್ನು ನುಚ್ಚುನೂರು ಮಾಡಿ, ವೈಯುಕ್ತಿಕ ಸುಖದ ಕನಸನ್ನು ಭಗ್ನಗೊಳಿಸಿ, ನಂತರ ಕೆಲಸ ಮಾಡಲು ತೊಡಗಿ. ನೀವು ಒಂದೊಂದೇ ಅಂಗುಲ ಮುಂದಕ್ಕೆ ಸಾಗಬೇಕು. ಅದಕ್ಕೆ ಧೈರ್ಯ ಬೇಕು, ದೃಡ ನಿರ್ಧಾರ ಬೇಕು. ನಿರಂತರ ಪರಿಶ್ರಮ ಬೇಕು. ಯಾವ ಕಷ್ಟ ಕಾರ್ಪಣ್ಯಗಳೂ ನಿರಾಶೆಗೊಳಿಸುವುದಿಲ್ಲ. ಯಾವ ವೈಫಲ್ಯಗಳೂ, ನಿಮ್ಮನ್ನು ಕಂಗೆಡಿಸುವುದಿಲ್ಲ. ತ್ಯಾಗ ಮತ್ತು ನರಳಾಟಗಳ ಅಗ್ನಿದಿವ್ಯವನ್ನು ಹಾದು ನೀವು ವಿಜಯಶಾಲಿಗಳಾಗುತ್ತೀರಿ. ಈ ವೈಯುಕ್ತಿಕ ಗೆಲುವುಗಳು ಕ್ರಾಂತಿಯ ಬಹುದೊಡ್ಡ ಆಸ್ತಿ ಎಂದು ಭಗತ್ ನಂಬಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು