ಸುದ್ದಿಲೈವ್/ಶಿವಮೊಗ್ಗ
ವಿಪಕ್ಷ ನಾಯಕ ರಾಹುಲ್ ಗಾಂಧಿ ಸಾರ್ವಭೌಮತ್ವವನ್ನೇ ವಿರೋಧಿಸುತ್ತಾರೆ. ಹಾಗಾಗಿ ಅವರು ವಿಪಕ್ಷ ನಾಯಕರೋ ಅಥವಾ ಭಾರತದ ವಿರೋಧಿಯೋ ಸ್ಪಷ್ಟಪಡಿಸಬೇಕು ಎಂದು ರಾಜ್ಯ ಬಿಜೆಪಿ ವಕ್ತಾರ ಮೋಹನ್ ವಿಶ್ವ ಪ್ರಶ್ನಿಸಿದರು.
ಸುದ್ದಿಗೋಷ್ಠಿ ನಡೆಸಿದ ಅವರು ಮೀಸಲಾತಿ ವಿರೋಧಿ ಕಾಂಗ್ರೆಸ್ ಆಗಿದೆ. ಕಾಕರ್ ಆಯೋಗದ ವರದಿ ಜಾರಿಗೆ ತರದೆ ಇಂದಿರಾಗಾಂಧಿ ಸುಮ್ಮನಿದ್ದರು. ನಂತರ ರಾಜೀವ್ ಗಾಂಧಿ ಮತ್ತು ಪಕ್ಷದ ಇತರರು ಅಧಿಕಾರಕ್ಕೆ ಬಂದಾಗಲೆಲ್ಲ ಜಾರಿಗೆ ತರಲೇ ಇಲ್ಲ ಎಂದು ದೂರಿದರು.
ಬೆಲೆ ಏರಿಕೆ ಮತ್ತು ಹಗರಣದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಮುಳುಗಿದೆ. ವಾಲ್ಮೀಕಿ ಹಗರಣ ಮತ್ತು ಎಸ್‌ಇಪಿ ಟಿಎಸ್‌ಪಿ ಹಗರ ನಡೆದಿದೆ. ಕಾಂಗ್ರೆಸ್ ದಲಿತ ವಿರೋಧಿಯಾಗಿದೆ. ರಾಹುಲ್ ಗಾಂಧಿ ಎಲ್ಲರ ಕ್ಷಮೆ ಕೇಳಬೇಕು. ಇಲ್ಲವಾದರೆ ಬಿಜೆಪಿ ದೇಶಾದ್ಯಂತ ಪ್ರತಿಭಟಿಸಲಿದೆ ಎಂದು ಎಚ್ಚರಿಸಿದರು.
ರಾಹುಲ್ ಗಾಂಧಿ ಶೇ.50 ಮೀಸಲಾತಿ ಬಗ್ಗೆ ಮಾತನಾಡುತ್ತಾರೆ. ಇವರು ಮಾತನಾಡುವುದು ಒಂದು ಮಾಡುವುದು ಮತ್ತೊಂದು ಆಗಿದೆ. ಮಾತಿಗೆ ಸರಿಯಾಗಿ ನಡೆದುಕೊಳ್ಳದಿರುವುದೇ ಸಮಸ್ಯೆ ಎಂದು ದೂರಿದರು.
ನಾಗಮಂಗಲದಲ್ಲಿ ನಡೆದ ಕೋಮುಗಲಭೆಯೂ ಕಾಂಗ್ರೆಸ್ ಅಣತಿಯಂತೆ ನಡೆದಿದೆ. ಚುನಾವಣೆಗೂ ಮೊದಲೆ ಒಲೈಕೆ ರಾಜಕಾರಣ ನಡೆಸುವುದು ನಂತರ ಒಂದು ಕೋಮಿನ ಋಣ ಸಂದಾಯ ನಡೆಸುವುದು ಕಾಂಗ್ರೆಸ್ ಚಾಳಿಯಾಗಿದೆ. ಗಲಭೆ ನಡೆಸಿದವರನ್ನ ಬಂಧಿಸುವ ಬದಲು ಗಣಪತಿ ಪೆಂಡಾಲ್ ರವನ್ನ ಬಂಧಿಸಲಾಗುವುದು.
ಮಸೀದಿ ರೋಡ್ ನಲ್ಲಿ ಹೋಗಬೇಡಿ ಎಂದು ಪೊಲೀಸ್ ನಿರ್ಬಂಧಿಸಿದೆ. ಹಾಗಾದರೆ ಹಿಂದೂ ಹಬ್ಬಗಳ ಆಚರಣೆಗೆ ನಿರ್ಬಂಧವೇಕೆ? ಕಳೆದ ಬಾರಿಯೂ ಅಲ್ಲಿ ಗಲಭೆಯಾಗಿತ್ತು ಪೊಲೀಸ್ ಸೂಕ್ತ ಕ್ರಮಕೈಗೊಂಡಿದ್ದರೆ ಈ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಮಸೀದಿ ರಸ್ತೆಯಲ್ಲಿ ಹೋಗಬೇಡಿ, ದೇವಸ್ಥಾನದ ರಸ್ತೆಯಲ್ಲಿ ಹೋಗಬೇಡಿ ಎಂಬ ಕಾನೂನು ಎಲ್ಲೂ ಇಲ್ಲ. ಹಾಗೇನಿದ್ದರೆ ಇಲಾಖೆ ಸ್ಪಷ್ಟಪಡಿಸಲಿ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ವಕ್ತಾರ ಬಿ.ಕೆ.ಶ್ರೀನಾಥ್, ಶ್ರೀನಾಗ್, ಅಣ್ಣಪ್ಪ, ಹರಿಕೃಷ್ಣ, ಚಂದ್ರಶೇಖರ್ ಮೊದಲಾದವರು ಉಪಸ್ಥಿತರಿದ್ದರು.