Girl in a jacket

ಆಸ್ಪತ್ರೆ ಜಾಗ ಖರೀದಿಯಲ್ಲಿ ಹಗರಣ ನಡೆದಿದೆ ಎಂಬ ಆಯನೂರು ಆರೋಪಕ್ಕೆ ಸಂಸದರಿಂದ ಸ್ಪಷ್ಟನೆ




ಸುದ್ದಿಲೈವ್/ಶಿವಮೊಗ್ಗ


ಕಾಂಗ್ರಸ್ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ  ಬಂದು ಒಂದುವರೆ ವರ್ಷ ಕಳೆದಿದೆ ಜನ ಸರ್ಕಾರವನ್ನ ಯಾಕೆ ತಂದವಿ ಎಂದು ಶಾಪಹಾಕುತ್ತಿದ್ದಾರೆ ಎಂದು ಸಂಸದ ರಾಘವೇಂದ್ರ ದೂರಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೂಡ ಹಗರಣದ ಬಗ್ಗೆ ಜನ ಮಾತನಾಡುತ್ತಿದ್ದಾರೆ. ಇಡಿ ಸಚಿವ ನಾಗೇಂದ್ರರವರ ಮೇಲೆ ಚಾರ್ಜ್ ಶೀಟ್ ಹಾಕಿದ್ದಾರೆ. ಆದರೆ ಎಸ್ಐಟಿಯು ಸಚಿವರ ಮೇಲೆ ಒಂದೂ ಆರೋಪನೂ ಮಾಡದೆ ಇರುವುದನ್ನ ಜನ ಗಮನಿಸುತ್ತಿದ್ದಾರೆ. ರಾಜ್ಯದ ತನಿಖಾ ಸಂಸ್ಥೆಯನ್ನ ರಾಜ್ಯ ಸರ್ಕಾರ ಎಲ್ಲಿಗೆ ತಂದು ನಿಲ್ಲಿಸಿದೆ ಎಂದು ದೂರಿದರು. 


ಈ ವಿಚಾರವನ್ನ ಡೈವರ್ಟ್ ಮಾಡಬೇಕು ಎಂದು ದೂರಾಲೋಚನೆಯಿಂದ ನಮ್ಮ ಕುಟುಂಬದ ಮೇಲೆ ಕಾಂಗ್ರೆಸ್ ಕೆಪಿಸಿಸಿ ವಕ್ತಾರ ಮೂಲಕ ಆರೋಪ ಮಾಡುತ್ತಿದೆ. ಜನ ನನಗೆ ನಾಲ್ಕು ಬಾರಿ ಆಶೀರ್ವಾದಿಸಿದ್ದಾರೆ. ಕಾಂಗ್ರೆಸ್ ವಕ್ತಾರರು ಶಿವಮೊಗ್ಗದಲ್ಲಿ ಎರಡು ಬಾರಿ ಸುದ್ದಿಗೋಷ್ಠಿ ನಡೆಸಿ ಆರೋಪ ಮಾಡಿದ್ದಾರೆ. ಈ ಆರೋಪಗಳಿಗೆ ಚುನಾವಣೆಯಲ್ಲಿ ಉತ್ತರ ಕೊಡಲಾಗಿದೆ ಎಂದರು. 


ಆರೋಪಗಳ ಬಗ್ಗೆ ತಲೆ ಕೆಡೆಸಿಕೊಳ್ಳಲ್ಲ. ಆದರೆ ಸುಳ್ಳನ್ನ ನೂರು ಬಾರಿ ಹೇಳುವ ಮೂಲಕ ಸತ್ಯ ಮಾಡಲು ಹೊರಟಿದ್ದಾರೆ. ಆಸ್ಪತ್ರೆ ನಿರ್ಮಾಣದ ವೇಳೆ ಕೆಐಡಿಬಿ ದುರ್ಬಳಕೆ ಆಗಿದೆ ಎಂದು ದೂರಲಾಗಿದೆ. ಏಕಕೋಶದ ಅಡಿ ಐದು ಎಕರೆಯಲ್ಲಿ ಖರೀದಿಯಾಗಿದೆ. ಸಂಬಂಧಿಕರ ಜಾಗವನ್ನ ಕೆಐಡಿಬಿ ಮೂಲಕ ಖರೀದಿಸಿ ನಂತರ ನಾವು ಖರೀದಿಸಿದ್ದೇವೆ.‌


ಈ ರೀತಿ ಏಕೆಂದರೆ ಹಲವಾರು ಇಲಾಖೆಗಳಿಂದ ಎನ್ ಒಸಿ ಪಡೆಯುವುದನ್ನ ತಪ್ಪಿಸಲು ಈ ರೀತಿಯ ಖರೀದಿ ಮಾಡಲಾಗಿತ್ತು. ಈ ರೀತಿ ಖರೀದಿಸಲು ಕೆಐಡಿಬಿಯಲ್ಲಿ ಅವಕಾಶವಿದೆ. ಇದರಲ್ಲಿ ಯಾವ ತಂತ್ರಗಾರಿಕೆಯೂ ಅಡಗಿಲ್ಲ ಎಂದು ಸ್ಪಷ್ಟಪಡಿಸಿದರು. 


10‌ಲಕ್ಷಕ್ಕೆ ಖರೀದಿಸಿದ ಕೆಐಡಿಬಿ 14 ಲಕ್ಷಕ್ಕೆ  ಮಾರಾಟ ಮಾಡಿದೆ.  ಇತರೆ ಇಲಾಖೆಗಳಿಂದ ಎನ್ ಒಸಿ ಪಡೆಯುವ ಗೋಜು ತಪ್ಪಿದೆ. ಇಲ್ಲಿ ದುರುಪಯೋಗ ಪಡಿಸಿಕೊಂಡಿಲ್ಲ. ಬೇನಾಮಿ ಆಸ್ತಿ ಎಂದು ದೂರಲಾಗಿದೆ. 


ಆಯನೂರು ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಮೌನವಾಗಿದ್ದರು. ಅವರ ವಿರುದ್ಧವೇ ಆಯನೂರು ನಮ್ಮ ಪಕ್ಷದಲ್ಲಿದ್ದಾಗ ಆರೋಪಿಸಿದ್ದರು. ಈ ಹಿಂದೆ  ಮಧು ಬಂಗಾರಪ್ಪನವರ ಜೂಲ್ ನಾಯಿಗೆ ಹೋಲಿಸಿದ್ದರು. ಗೀತ ಶಿವರಾಜ್ ಕುಮಾರ್ ವಿರುದ್ಧ ಕರಡಿ ಕುಣಿತ ಎಂದು ದೂರಿದ್ದರು. ಇಲ್ಲಿದ್ದಾಗ ಆ ಪಕ್ಷಕ್ಕೆ, ಆ ಪಕ್ಷಕ್ಕೆ ಹೋದಾಗ ನಮ್ಮ ಪಕ್ಷದ ವಿರುದ್ಧ ಮಾತನಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.


ಅವರ ತಟ್ಟೆಯಲ್ಲಿ ಕತ್ತೆ ಬಿದ್ದಿದೆ ಅದನ್ನ ಡೈವರ್ಟ್ ಮಾಡಲು ಯತ್ನಿಸಲಾಗಿದೆ. ತಂತ್ರಗಾರಿಕೆ ಎಂದು ದೂರಿದ್ದಾರೆ. ಅದು ಸರ್ಕಾರಿ ಭೂಮಿ ಅಲ್ಲ. ಸಿಂಗಲ್ ವಿಂಡೋದಲ್ಲಿ ಖರೀದಿಸಲಾಗಿದೆ. ಮಿನಿ ಮೂಡ ಹಗರ ಎನ್ನುತ್ತಾರೆ. ಸಿದ್ದರಾಮಯ್ಯ ಪ್ರಕರಣ ಡಿನೋಟಿ ಫೈ ಲ್ಯಾಂಡ್ ಮಾಡಿಕೊಂಡು ಬೇರೆಯವರಿಗೆ ಮಾರಲಾಗಿದೆ. ಇದನ್ನ ನಮ್ಮ ಆಸ್ಪತ್ರೆ ಲ್ಯಾಂಡ್ ಗೆ ಹೋಲಿಸಿ ಮಾತನಾಡಿದ್ದಾರೆ. ಇದು ಅವರಿಗೆ ಶೋಭ ತರಲ್ಲ ಎಂದರು.


ಗಣಪತಿ ಹಬ್ಬ ಬಂದರೆ ಗೃಹ ಇಲಾಖೆಗೆ ಟೆನ್ಷನ್ ಆಗುತ್ತೆ. ಹಬ್ಬ ಆಚರಣೆಗೆ ನೂರಾರು ಕಂಡೀಷನ್ ಹಾಕುತ್ತರೆ. ಪುಣೇದಹಳ್ಳಿಯಲ್ಲಿಯಲ್ಲೂ 7 ಗಂಟೆ ಒಳಗೆ ಗಣಪತಿ ವಿಸರ್ಜಿಸುವಂತೆ ನಿರ್ಬಂಧಿಸಲಾಗಿದೆ. ಪರಮೇಶ್ವರ್ ಅವರು ನೆಲಮಂಗಲ ಘಟನೆಯನ್ನ ಸಣ್ಣ ಘಟನೆ ಎಂದಿದ್ದಾರೆ. ಸಣ್ಣದು ದೊಡ್ಡದಾಗದಂತೆ ತಡೆಯಲಿ ಹಾಗಂತ ಗಣಪತಿ ಮೆರವಣಿಗೆಯನ್ನೇ ತಡೆಯುವ ಕೆಲಸ ಆಗಬಾರದು ಎಂದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು