ಸೋಮವಾರ, ಸೆಪ್ಟೆಂಬರ್ 2, 2024

ಭದ್ರಾವತಿಯ ಬಿಜೆಪಿ ನಗರಸಭಾ ಸದಸ್ಯರು ಪಕ್ಷದಿಂದ ಉಚ್ಚಾಟನೆ



 ಸುದ್ದಿಲೈವ್/ಶಿವಮೊಗ್ಗ


ಗಂಭೀರ ಬೆಳವಣಿಗೆಯೊಂದರಲ್ಲಿ ಭದ್ರಾವತಿ ನಗರ ಸಭೆ ಬಿಜೆಪಿ ಸದಸ್ಯರನ್ನ ಜಿಲ್ಲೆಯ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್ ಉಚ್ಚಾಟಿಸಿ ಆದೇಶಿಸಿದ್ದಾರೆ. 


ದಿನಾಂಕ : 26.08.2024 ರ ಸೋಮವಾರದಂದು ಭದ್ರಾವತಿಯ ನಗರಸಭಾ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಭಾಹವಹಿಸಿ ಮತ ಚಲಾವಣೆ ಮಾಡಲು ಪಕ್ಷ  ವಿಪ್ ಜಾರಿಗಿಳಿಸಲಾಗಿತ್ತು. ಆದರೆ ಚುನಾವಣೆಯಲ್ಲಿ ಬಿಜೆಪಿ ಸದಸ್ಯರು ಗೈರು ಹಾಜರಾಗಿದ್ದರು. 


ಚುನಾವಣೆಗೆ ಹಾಜರಾಗದೆ ವಿಪ್ ಉಲ್ಲಂಘನೆ ಮಾಡಿರುವ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದ ನಗರಸಭಾ ಸದಸ್ಯರುಗಳಾದ  ವಿ ಕದಿರೇಶ್,  ಅನಿತಾ ಮಲ್ಲೇಶ್ ಮತ್ತು  ಶಶಿಕಲಾ ನಾರಾಯಣಪ್ಪ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ 06 ವರ್ಷಗಳ ಕಾಲ ಭಾರತೀಯ ಜನತಾ ಪಾರ್ಟಿಯ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ