ಸುದ್ದಿಲೈವ್/ಶಿವಮೊಗ್ಗ
ಡೆತ್ ನೋಟ್ ಬರೆದಿಟ್ಟು ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಹಾಗೂ ಉದ್ಯಮಿ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಉದ್ಯೋಗದಲ್ಲಿ ನಷ್ಟ ಉಂಟಾಗಿ ಸಾಲ ಆದ ಪರಿಣಾಮ 28 ವರ್ಷದ ದೀಪಕ್ ಎಂಬುವರು ಮನೆಯಲ್ಲಿ ಡೆತ್ ನೋಟ್ ಬರೆದು ನಾಪತ್ತೆಯಾಗಿದ್ದಾರೆ. ಸಂಗಮೇಶ್ವರ್ ಎಂಬುವರ ಜೊತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ದೀಪಕ್ ಮಾರ್ಕೆಟಿಂಗ್ ಕೆಲಸ ಮಾಡಿಕೊಂಡಿದ್ದರು.
ವ್ಯವಹಾರದಲ್ಲಿ ನಷ್ಟ ಉಂಟಾಗಿದೆ. ಸೆ.27 ರಂದು ಮಧ್ಯಾಹ್ನ ಚಿಕ್ಕಪ್ಪ ಸಂಗಮೇಶ್ ಅವರಿಗೆ ಊಟಕ್ಕೆ ಹೋಗಿ ಬರುವುದಾಗಿ ಹೇಳಿ ಅನೇಕ ಹೊತ್ತಿನ ನಂತರ ಬಾರದೆ ಇರುವುದರಿಂದ ದೀಪಕ್ ಗೆ ಸಂಗಮೇಶ್ ಕಾಲ್ ಮಾಡ್ತಾರೆ. ದೀಪಕ್ ಮೊಬೈಲ್ ಸ್ವಿಚ್ ಆಫ್ ಬಂದಿದೆ.
ನಂತರ ಮನೆಗೆ ಬಂದು ನೋಡಿದ ಸಂಗಮೇಶ್ವರ್ ಗೆ ಒಂದು ಪತ್ರ ದೊರೆಯುತ್ತದೆ. ಪತ್ರದಲ್ಲಿ ನನ್ನ ಕೆಲವು ತಪ್ಪು ನಿರ್ದಾರಗಳಿಂದ ಸಾಕಷ್ಟು ಹಣಕಾಸಿನ ನಷ್ಟವನ್ನು ಅನುಭವಿಸಿದ ಪರಿಣಾಮ ನಾನು ಆತ್ಮಹತ್ಯೆಗೆ ಶರಣಾಗಬೇಕೆಂದು ನಿರ್ಣಯಿಸಿದ್ದೇನೆ ಎಂದು ಪತ್ರ ಬರೆದು ದೀಪಕ್ ಕಾಣೆಯಾಗಿದ್ದಾರೆ. ಪ್ರಕರಣ ಕೋಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.