ಸುದ್ದಿಲೈವ್/ಶಿವಮೊಗ್ಗ
ದಿಡೀರನೇ ಮರವೊಂದು 206 ಹೈವೆಗೆ ಬಿದ್ದಿದೆ. ತಡರಾತ್ರಿ ಈ ಘಟನೆ ನಡೆದಿದ್ದು, ನಂತರ ಮರ ತೆರವು ಕಾರ್ಯಾಚರಣೆ ನಡೆಸಲಾಗಿದೆ.
ಆಯನೂರಿನಿಂದ ಕುಂಸಿ ರಸ್ತೆಯ ಮಾರ್ಗದಲ್ಲಿ ಆಯನೂರು ಕಾಲೇಜಿನಿಂದ ಮುಂದೆ ನೀಲಗಿರಿ ಮರವೊಂದು ಬುಡಮೇಲಾಗಿದೆ. ವಿದ್ಯುತ್ ತಂತಿ ಮೇಲೆ ಬಿದ್ದಿತ್ತು.
ನಿನ್ನೆ ರಾತ್ರಿ 11 ಗಂಟೆಗೆ ಮರ ಎದುರಿನ ವಿದ್ಯುತ್ ವೈಯರ್ ಮೇಲೆ ಬಿದ್ದಿತ್ತು. ಅರಣ್ಯ ಇಲಾಖೆ, ಕುಂಸಿ ಪೊಲೀಸರು ಅಡ್ಡಬಿದ್ದ ಮರದ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಸುಮಾರು ಇಂದು ಬೆಳಗಿನ ಜಾವ 2 ಗಂಟೆಗೆ ತೆರವು ಕಾರ್ಯ ಮುಕ್ತಾಗೊಂಡಿದೆ.