Girl in a jacket

ಕನ್ನಡ ಹಾಡಿಗೆ ವಿದೇಶಿಗರು ಸ್ಟೆಪ್ಸ್

 


ಸುದ್ದಿಲೈವ್/ಶಿವಮೊಗ್ಗ


ಗಣೇಶ ವಿಸರ್ಜನೆ ವೇಳೆ  ವಿದೇಶಿ ಪ್ರವಾಸಿಗರು ಕುಣಿದು ಕುಪ್ಪಳಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಗಿಣಿವಾರ ಗ್ರಾಮದಲ್ಲಿ  ಗಣಪತಿ ವಿಗ್ರಹದ ಮುಂದೆ ವಿದೇಶಿಯರು ಕುಣಿದಿರುವ ವಿಡಿಯೋ ವೈರಲ್ ಆಗಿದೆ. 



 ಗಿಣಿವಾರ ಗ್ರಾಮದ ಗಣೇಶ ಮೆರವಣಿಗೆಯಲ್ಲಿ ವಿದೇಶಿ ಪ್ರವಾಸಿಗರು ಕುಣಿದು ಕುಪ್ಪಳಿಸಿದ್ದಾರೆ. ಮಹಾಗಣಪತಿ ಸೇವಾ ಸಮಿತಿಯ  ವಿಸರ್ಜನ ಸಂದರ್ಭದಲ್ಲಿ ವಿದೇಶಿಗರು ಕನ್ನಡ ಸಿನಿಮಾ ಹಾಡಿಗೆ ಸ್ಟೆಪ್ ಹಾಕಿದ್ದಾರೆ


ಸಾಗರಕ್ಕೆ ಪ್ರವಾಸಕ್ಕೆ ಎಂದು ಆಗಮಿಸಿದ ವಿದೇಶಿ ಪ್ರಜೆಗಳು ಮೆರವಣಿಗೆ ಸಂದರ್ಭದಲ್ಲಿ ಸ್ಥಳೀಯರ ಜೊತೆ ಡ್ಯಾನ್ಸ್‌ ಮಾಡುವ ಮೂಲಕ ಹೆಜ್ಜೆ ಹಾಕಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕರಿಮಣಿ ಮಾಲೀಕ ನಾನಲ್ಲ ಹಾಡಿಗೆ ಹೆಜ್ಜೆ ಹಾಕಿದ್ದಾರೆ‌ 


ಗಿಣಿವಾರ ಗ್ರಾಮದಿಂದ ಗಣಪತಿ ವಿಸರ್ಜನೆ ಮೆರವಣಿಗೆ ಸಾಗರ ಸಿಗಂದೂರು ರಸ್ತೆಗೆ ಬರುತ್ತಿದ್ದಂತೆ ಮೆರವಣಿಗೆಯಲ್ಲಿ ವಿದೇಶಿ ಪ್ರವಾಸಿಗರು ಸ್ಥಳೀಯರ ಜೊತೆ ಭಾಗಿಯಾಗಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು