ಭಾನುವಾರ, ಸೆಪ್ಟೆಂಬರ್ 1, 2024

ವಿದ್ಯುತ್ ವಯರ್ ತಗುಲಿ ವೃದ್ದೆ ಸಾವು


 

ಸುದ್ದಿಲೈವ್/ರಿಪ್ಪನ್‌ಪೇಟೆ 


ವಿದ್ಯುತ್ ವಯರ್ ತಗುಲಿ ವೃದ್ದೆಯೊಬ್ಬರು ಸಾವನ್ನಪ್ಪಿರುವ ಘಟನೆ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಪಾರ್ವತಮ್ಮ (67) ವೃದ್ಧೆ ಮೃತಪಟ್ಟ ದುರ್ಧೈವಿಯಾಗಿದ್ದಾರೆ.


ಇಂದು ಬೆಳಿಗ್ಗೆ ಮನೆ ಮುಂಭಾಗದಲ್ಲಿರುವ ಉನುಗೋಲು ತೆಗೆಯುವಾಗ ಏಕಾಏಕಿ ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.ತೋಟದ ಪಂಪ್ ಸೆಟ್ ವಿದ್ಯುತ್ ವಯರ್ ನ್ನು ಬೇಲಿಗೆ ಸುತ್ತಿ ಇಟ್ಟಿದ್ದ ಪರಿಣಾಮ ವಿದ್ಯುತ್ ಬೇಲಿಗೆ ಪ್ರವಹಿಸಿ ಈ ದುರ್ಘಟನೆ ನಡೆದಿದೆ ಎನ್ನಲಾಗುತಿದೆ.


ಸ್ಥಳಕ್ಕೆ ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ಹಾಗೂ ಮೆಸ್ಕಾಂ ಸಿಬ್ಬಂದಿಗಳು ತೆರಳಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ