ಭಾನುವಾರ, ಸೆಪ್ಟೆಂಬರ್ 1, 2024

ಹೋಬಳಿ ಮಟ್ಟದ ಕ್ರೀಡಾಕೂಟ ಅತ್ಯಂತ ಯಶಸ್ವಿಯಾಗಿ ಮುಕ್ತಾಯ



ಸುದ್ದಿಲೈವ್/ಶಿವಮೊಗ್ಗ


ನಿನ್ನೆ ದಿನ ಆಗುಂಬೆ ಹೋಬಳಿ ಮಟ್ಟದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟವು ಮುಕ್ತಾಯಗೊಂಡಿದೆ. ಕ್ರೀಡಾಕೂಟ ನಡೆಸಲು ಅತ್ಯಂತ ಅಭೂತಪೂರ್ವ ಯಶಸ್ವಿಗೆ ಸಹಕರಿಸಿದ  ಶಾಲೆಯ ಶಿಕ್ಷಕ ಬಳಗ, ಎಸ್ ಡಿ ಎಂ ಸಿ ಎಲ್ಲಾ ಪದಾಧಿಕಾರಿಗಳು, ಪೋಷಕರು, ಗ್ರಾಮಸ್ಥರು,  ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹೊನ್ನೇತಾಳು, 


ಸಹಕಾರ ನೀಡಿದ ವಿವಿಧ ಸ್ವಯಂ ಸೇವಾ ಸಂಸ್ಥೆಗಳು, ವಿವಿಧ ಸಂಘಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಆರೋಗ್ಯ ಇಲಾಖೆಯವರು, ರಕ್ಷಣಾ ಇಲಾಖೆಯವರು, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲ ದಾನಿಗಳಿಗೂ ಮತ್ತು ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲಾ ಶಾಲೆಯ ಮಕ್ಕಳಿಗೂ, ಎಲ್ಲಾ ಶಿಕ್ಷಕರಿಗೂ,  ಕ್ರೀಡಾಕೂಟಕ್ಕೆ ಆಗಮಿಸಿದ ವಿವಿಧ ಗ್ರಾಮದ ಎಸ್‌ಡಿಎಂಸಿಯವರಿಗೂ,  


ಪೋಷಕರಿಗೂ ಕ್ರೀಡಾಕೂಟಕ್ಕೆ ನಿಯೋಜನೆಗೊಂಡು ಕರ್ತವ್ಯ ನಿರ್ವಹಿಸಿದ ಎಲ್ಲ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಿಗೂ, ಸಹ ಶಿಕ್ಷಕರಿಗೂ  ಮತ್ತು ನಿವೃತ್ತ ಶಿಕ್ಷಕರಿಗೂ  ಹೋನ್ನೆ ತಾಳು ಶಾಲೆಯ ಪರವಾಗಿ ಧನ್ಯವಾದಗಳನ್ನ ತಿಳಿಸಿದ್ದಾರೆ. 


ಕಾರ್ಯಕ್ರಮ ಉದ್ಘಾಟನೆ ಮಾಡಿದ ತೀರ್ಥಹಳ್ಳಿ  ಶಾಸಕ ಆರಗ ಜ್ಞಾನೇಂದ್ರರಿಗೆ, ಕಾರ್ಯಕ್ರಮದಲ್ಲಿ ಆರಂಭದಿಂದ ಕೊನೆಯವರೆಗೂ ಜೊತೆಗಿದ್ದು ಸಂಪೂರ್ಣ ಸಹಕಾರ ನೀಡಿದ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಗ್ರಾಮ ಪಂಚಾಯತಿ ಹೊನ್ನೇತಾಳು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಮಸ್ತ ಸಿಬ್ಬಂದಿವರ್ಗದವರಿಗೂ ಧನ್ಯವಾದಗಳು ಶಾಲೆ ತಿಳಿಸಿದೆ. 


ಮಾರ್ಗದರ್ಶನ ನೀಡಿದ ಶಾಲಾ ಶಿಕ್ಷಣ ಇಲಾಖೆಯ ಬಿ.ಇ.ಓ, ಟಿ.ಪಿ.ಇ.ಓ, ಶಿಕ್ಷಣ ಸಂಯೋಜಕರು, ಸಿ.ಆರ್‌.ಪಿ ಯವರಿಗೂ ಕ್ರೀಡಾಂಗಣ ಸಹಕಾರ ನೀಡಿದ ಗುಡ್ಡೇಕೇರಿ ಶಾಲೆಯ ಎಲ್ಲಾ ಶಿಕ್ಷಕರು ಅಧ್ಯಕ್ಷರು ಮತ್ತು ಸದಸ್ಯರು ಎಸ್.ಡಿ.ಎಂ.ಸಿ, ಸರ್ಕಾರಿ ಪ್ರೌಢ ಶಾಲೆ ಹೊಸೂರು-ಗುಡ್ಡೇಕೇರಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರುಗಳಿಗೂ ಅನಂತ ವಂದನೆಗಳನ್ನ ತಿಳಿಸಲಾಗಿದೆ. 


ಸದಾ ಆಶೀರ್ವಾದ ನೀಡಿ ನಮ್ಮ ಎಲ್ಲಾ ಏಳ್ಗೆಗೆ ಸಹಕಾರ, ಪ್ರೋತ್ಸಾಹ, ಮಾರ್ಗದರ್ಶನದಲ್ಲಿ ನೀಡಿದ ಹಾಗೂ ನಿನ್ನೆಯ ದಿನದ ಮಧ್ಯಾಹ್ನ ಊಟ ವ್ಯವಸ್ಥೆ ಮಾಡಿಕೊಟ್ಟಿರುವ ಶ್ರೀ ಮಠ ಶೃಂಗೇರಿಯ ಪೂಜ್ಯ ಗುರುಗಳು ಹಾಗೂ ಸಿಬ್ಬಂದಿಯವರಿಗು,  ಕ್ರೀಡಾ ಕೂಟಕ್ಕೆ ಧನಸಹಾಯ ಮಾಡಿ ಸದಾ ನಮ್ಮನ್ನು ಪ್ರೋತ್ಸಾಹ ಮಾಡುತ್ತಿರುವ ಎಲ್ಲಾ ದಾನಿಗಳಿಗೂ, ಕ್ರೀಡಾಕೂಟದ ಬಹುಮಾನಕ್ಕೆ ಸುಂದರವಾದ ಟ್ರೋಫಿಗಳನ್ನು ಕೊಡುಗೆಯಾಗಿ ಕೊಟ್ಟಿರುವ ಸಮಸ್ತ ದಾನಿಗಳಿಗೂ  ಸಹಕಾರ ನೀಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತೀರ್ಥಹಳ್ಳಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಅಧ್ಯಕ್ಷರು ಮತ್ತು ಸದಸ್ಯರು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ತೀರ್ಥಹಳ್ಳಿ ಇವರಿಗೂ ನಮ್ಮ ಪ್ರಣಾಮಗಳನ್ನ ತಿಳಿಸಲಾಗಿದೆ. 


ತಂಡ ರಾತ್ರಿಯವರೆಗೂ ಹಲವಾರು ದಿನದಿಂದ ಜೊತೆಯಲ್ಲಿ ಇದ್ದು ಆಟ ಕಲಿಸುವುದರೊಂದಿಗೆ ಇತರೆ ಕೆಲಸಕ್ಕೂ ಮಳೆಯನ್ನು ಲೆಕ್ಕಿಸದೆ ಪೂರ್ಣ ಸಹಕಾರ ನೀಡಿದ ನಮ್ಮ ಬಹುದೊಡ್ಡ ಶಕ್ತಿಯಾದ ಶಾಲೆಯ ಹಿರಿಯ ವಿದ್ಯಾರ್ಥಿಗಳು, ಶಾಲಾ‌ ಅಭಿಮಾನಿಗಳಿಗೆ, ಕ್ರೀಡಾಭಿಮಾನಿಗಳಿಗೆ ಹಾಗು ವಾಹನ ವ್ಯವಸ್ಥೆ ಮಾಡಿದ ಬಂಧುಗಳಿಗೆ ಶಾಲಾ ಬಳಗದ ಪರವಾಗಿ ಪ್ರಣಾಮಗಳು. ನಿಮ್ಮ ಸಹಕಾರ ಪ್ರೋತ್ಸಾಹ ಸದಾ ಹೀಗೆ ಇರಲಿ ಎಂದು ಹೊನ್ನೇತಾಳಿನ ತಂಡ ಕೋರಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ