ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಅವರ ಜನ್ಮ ದಿನಾಚರಣೆಯನ್ನು ಅವರ ಅಭಿಮಾನಿಗಳು ಇಂದು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಿದರು.
ಇಂದು ಬೆಳಗ್ಗೆ ದ್ರೌಪದಮ್ಮ ಸರ್ಕಲ್ ನಲ್ಲಿರುವ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸಿದರು. ನಂತರ ಸೂಡಾ ಕಚೇರಿಯಲ್ಲಿ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.
ಸುಂದರೇಶ್ ಅವರನ್ನು ಪೊಲೀಸ್ ಚೌಕಿ ವೃತ್ತದಿಂದ ಮೆರವಣಿಗೆಯಲ್ಲಿ ಕರೆತರಲಾಯಿತು. ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಕಚೇರಿ ಮುಂಭಾಗದಲ್ಲಿ ನಿರ್ಮಿಸಿದ್ದ ವೇದಿಕೆಯಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಲಾಯಿತು. ನಂತರ ಅವರ ಅಭಿಮಾನಿಗಳು ಪುಷ್ಪಗುಚ್ಚ ನೀಡಿ ಶುಭಾಶಯ ಕೋರಿದರು.
ಹುಟ್ಟುಹಬ್ಬದ ಅಂಗವಾಗಿ ಇಂದು ಬಸವೇಶ್ವರ ದೇವಸ್ಥಾನದ ಬಳಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ನಾಳೆ ಮತ್ತು ನಾಡಿದ್ದು ಕೂಡ ಹುಟ್ಟುಹಬ್ಬದ ಅಂಗವಾಗಿ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಹೆಚ್.ಎಸ್. ಸುಂದರೇಶ್, ಅಭಿಮಾನಿಗಳ ಪ್ರೀತಿಗೆ ಹೃದಯ ತುಂಬಿ ಬಂದಿದೆ. ಅವರ ವಿಶ್ವಾಸಕ್ಕೆ ಎಂದೂ ಋಣಿಯಾಗಿದ್ದೇನೆ. ಸೂಡಾ ಅಧ್ಯಕ್ಷನಾಗಿ ಮತ್ತಷ್ಟು ಕೆಲಸ ಮಾಡುವ ಮೂಲಕ ಜನರ ಋಣ ತೀರಿಸುವೆ ಎಂದರು.
ಮುಖಂಡರಾದ ಜಿ.ಡಿ. ಮಂಜುನಾಥ್ ಟಿ.ಎನ್. ಶಶಿಧರ್, ರಾಜಶೇಖರ್, ಹೆಚ್. ಪಾಲಾಕ್ಷಿ, ಎನ್.ಡಿ. ಪ್ರವೀಣ್, ಹೆಚ್.ಪಿ. ಗಿರೀಶ್, ಶಿ.ಜು. ಪಾಶಾ, ಜಿ. ಪದ್ಮನಾಭ್, ಸೌಗಂಧಿಕಾ, ಶಮೀನಾ ಬಾನು, ನಾಜಿಮಾ, ಸ್ಟೆಲಾ ಮಾರ್ಟಿನ್, ಅರ್ಚನಾ, ಜಯ್ಯಣ್ಣ, ಜಿ.ಎಸ್. ಶಿವಕುಮಾರ್, ತಾನಾಜಿ, ಜಿತೇಂದ್ರ, ಮಂಜುನಾಥ್ ಬಾಬು, ಶಂಕರಪ್ಪ, ನಾಗೇಶ್, ರುದ್ರಪ್ಪ ಮೊದಲಾವರಿದ್ದರು.