ಸುದ್ದಿಲೈವ್/ಶಿವಮೊಗ್ಗ
ಭರ್ಜರಿ ಜನ್ತೋಮದೊಂದಿಗೆ ಹಿಂದೂ ಮಹಾಸಭಾ ಗಣಪತಿ ಗಾಂಧಿ ಬಜಾರ್ ನ ಮಾರ್ಗದಲ್ಲಿ ಸಾಗಿ ಬರುತ್ತಿದೆ. ಈಗ ಸಿನಿಮಾ ರಸ್ತೆಯನ್ನ ದಾಟುತ್ತಿದ್ದು ಇಲ್ಲಿ ಮಾರ್ಕೆಟ್ ಭಾನುವಿನಿಂದ ನೋಟಿನ ಹಾರವನ್ನ ಮೂರ್ತಿಗೆ ಹಾಕಿದ್ದಾರೆ.
ಬಜಾರ್ ನಲ್ಲಿ ಭರ್ಜರಿಯಾಗಿ ಮೆರವಣಿಗೆ ಹೊರಟಿರುವ ಗಣಪನಿಗೆ ಪಟಾಕಿ ಸಿಡಿಸುವುದು. ತಮಟೆ, ಮದ್ದಳೆ, ಯುವಕ ಯುವತಿಯರಿಂದ ಕುಣಿತ, ಸಿಳ್ಳೆಗಳ ಸರಮಾಲೆಯೊಂದಿಗೆ ಗಣಪ ಸಾಗಿ ಬರುತ್ತಿದ್ದಾನೆ. ಒಟ್ಟಿನಲ್ಲಿ ಹಿಂದೂ ಮಹಾಸಭಾ ಗಣಪತಿಯ ಮೆರವಣಿಗೆ ಸಡಗರ ಸಂಭ್ರಮದಿಂದ ಕೂಡಿದೆ.