Girl in a jacket

ತಿರುಪತಿಯಲ್ಲಿ ಲಡ್ಡು ಪ್ರಸಾದಕ್ಕೆ ಅಪಪ್ರಚಾರ-ಕೂಡಲಿ ಶ್ರೀಗಳಿಂದ ಮೌನವ್ರತ ಹಾಗೂ ಉಪವಾಸ


ಸುದ್ದಿಲೈವ್/ಶಿವಮೊಗ್ಗ

ತಿರುಪತಿ ಲಡ್ಡು ಪ್ರಸಾದದ (prasadam) ವಿಚಾರದಲ್ಲಿ ಅಪಪ್ರಚಾರವಾಗಿದೆ. ಇದರ ಪ್ರಾಯಶ್ಚಿತ್ತ, ದುಷ್ಟದಮನ ಮತ್ತು ಆಧ್ಯಾತ್ಮಿಕ ಶಕ್ತಿವರ್ಧನೆಗಾಗಿ ಶಿವಮೊಗ್ಗದ ಕೂಡಲಿ ಶೃಂಗೇರಿ (sringeri) ಮಹಾ ಸಂಸ್ಥಾನದ ಪೀಠಾಧಿಪತಿ ಶ್ರೀ ಅಭಿನವ ಶಂಕರಭಾರತೀ ಸ್ವಾಮೀಜಿ ಅವರು ಇಂದಿನಿಂದ ಉಪವಾಸ ಮತ್ತು ಮೌನವ್ರತ ಕೈಗೊಂಡಿದ್ದಾರೆ.

ಕೂಡಲಿ ಮಠದಲ್ಲಿ ಶ್ರೀ ಅಭಿನವ ಶಂಕರಭಾರತೀ ಸ್ವಾಮೀಜಿ ಅವರು ಇಂದಿನಿಂದ ಮೂರು ದಿನ ಉಪವಾಸ ಮತ್ತು ಮೌನವ್ರತ ಆರಂಭಿಸಿದ್ದಾರೆ. ಈ ಸಂಬಂಧ ಮಠದ ವತಿಯಿಂದ ಪ್ರಕಟಣೆ ಹೊರಡಿಸಲಾಗಿದೆ.

ತಿರುಪತಿಯಲ್ಲಿ ನಡೆದಿರುವುದು ಸಸ್ಯಾಹಾರ, ಮಾಂಸಾಹಾರ ಎಂಬ ಚರ್ಚೆ ಮಾಡುವಂತಹ ಸಾಮಾನ್ಯ ಘಟನೆಯಲ್ಲ. ಅಲ್ಲಿ ನಡೆದಿರುವುದು ನಂಬಿಕೆ ದ್ರೋಹ. ಹಿಂದೂ ಸಮಾಜದ ಒಟ್ಟಾರೆ ಬಲಹೀನತೆ ಮೇಲೆ ದುರುಳರು ಮಾಡರುವ ಅಟ್ಟಹಾಸ ಎಂದು ಸ್ವಾಮೀಜಿ ತಿಳಿಸಿದ್ದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದೇವಸ್ಥಾನಗಳ ಮೇಲೆ ಸರ್ಕಾರದ ಹಿಡಿತ ಹಿಂತೆಗೆದುಕೊಳ್ಳಬೇಕು ಎಂದು ಸಮಾಜ ಸರ್ಕಾರವನ್ನು ಒತ್ತಾಯಿಸಬೇಕು. ಅಲ್ಲದೆ ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಿದೆ. ಹಾಗಾಗಿ ಎಲ್ಲರು ತಮ್ಮ ಮನೆಯಲ್ಲಿಯೇ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಿದೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು