Girl in a jacket

ಸಾಮಿಲ್‌ನಲ್ಲೇ ಮಾಲೀಕನ ಮಗನ ಆತ್ಮಹತ್ಯೆ-ಆತ್ಮಹತ್ಯೆಯಲ್ಲ ಕೊಲೆ ಎಂದು ಅನುಮಾನ ವ್ಯಕ್ತಪಡಿಸಿ ದೂರು ದಾಖಲು

 



ಸುದ್ದಿಲೈವ್/ಶಿವಮೊಗ್ಗ

ಇಲಿಯಾಸ್ ನಗರದ ರೇಣುಕಾಂಬ ಸಾಮಿಲ್‌ನ ಮಾಲೀಕರ ಮಗ ಮಂಜುನಾಥ್ ಸಾಮಿಲ್‌ನ ಕ್ರೇನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಸಾಮಿಲ್‌ನ ಮಳಿಗೆಯಲ್ಲಿರುವ ಬಾಡಿಗೆದಾರರು ಸಾಮಿಲ್‌ನಲ್ಲಿ ಕೆಲಸ ಮಾಡಿಕೊಂಡಿರುವರಿಗೆ ಮಂಜುನಾಥ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಸಾಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದ ಗಣೇಶ್ ಮಾಲೀಕರ ಪತ್ನಿಗೆ ವಿಷಯ ಮುಟ್ಟಿಸಿದ್ದಾರೆ. ಗೇಟಿನ ಸಂದಿಯಿಂದ ನೋಡಿದಾಗ ಮಂಜುನಾಥ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.

ಸ್ಥಳಕ್ಕೆ ಹೋಗಿ ನೋಡಿದಾಗ ಸಾಮಿಲ್‌ನ ಕ್ರೇನ್ ಗೆ ಮಂಜುನಾಥ್ ಕುತ್ತಿಗೆವೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸರಿಗೆ ವಿಷಯ ತಿಳಿಸಿ ನಂತರ ನೇಣು ಬಿಗಿದ ಸ್ಣತಿಯಲ್ಲಿದ್ದ ಮಂಜುನಾಥ್‌ನನ್ನ ಕೆಳಗೆ ಇಳಿಸಲಾಗಿದೆ.

ಮೆಗ್ಗಾನ್‌ಗೆ ತೆಗೆದುಕೊಂಡು ಹೋದಾಗ ಆತನ ಸಾವನ್ನ ಮೆಗ್ಗಾನ್ ವೈದ್ಯರು ದೃಢಪಡಿಸಿದ್ದಾರೆ.  ಮೃತ ಮಂಜುನಾಥ್‌ಗೆ 32 ವರ್ಷ ವಯಸ್ಸಾಗಿತ್ತು. ಇವರ ತಂದೆ ಅನುಮಾನವ್ಯಕ್ತ ಪಡಿಸಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮೃತ ಮಂಜುನಾಥ್‌ಗೆ  ಸಾಲವಿದ್ದು ಸಾಲದ ಹಿನ್ನಲೆಯಲ್ಲಿ ಜೀವ ಬೆದರಿಕೆ ಇತ್ತು. ಮಗನ ಸಾವನ್ನ ಗಮನಿಸಿದರೆ ಕೊಲೆ ಮಾಡಿ ನೇಣು ಹಾಕಿರುವ ಅನುಮಾನವಿದೆ. ಈ ಸಾವಿನ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿ ನ್ಯಾಯ ಕೊಡಿಸುವಂತೆ ಮೃತನ ತಂದೆ ಗುರುಮೂರ್ತಿ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು