ಅರಣ್ಯ ಇಲಾಖೆ ವಿರುದ್ಧ ಭದ್ರಾವತಿ ತಾಲೂಕು ಹೊಳೆಹೊನ್ನೂರು ಹೋಬಳಿಯ ಅರಣ್ಯ ಹಕ್ಕು ಸಮಿತಿ ಮತ್ತು ಬಗರ್ ಹುಕುಂ ಸಾಗುವಳಿದಾರರು ಇಂದು ಶಿವಪ್ಪ ನಾಯಕ ಪ್ರತಿಮೆಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಪಾದಯಾತ್ರೆ ನಡೆಸಿದೆ.
ಪಕ್ಷಾತೀತವಾಗಿ ನಡೆದ ಈ ಪ್ರತಿಭಟನೆಯಲ್ಲಿ ಸರ್ಕಾರಿ ಜಮೀನನಲ್ಲಿ 40 ವರ್ಷಗಳಿಂದ ರೈತರು ಉಳಿಮೆ ಮಾಡಿಕೊಂಡು ಬಂದು ಸಾಗುವಳಿ ಪತ್ರ ಪಡೆದರೂ ಉಪವಿಭಾಗಾಧಿಕಾರಿಗಳು ಮತ್ತು ತಾಲೂಕು ದಂಡಾಧಿಕಾರಿಗಳು ಹಾಗೂ ಅರಣ್ಯಾಧಿಕಾರಿಗಳು ಜಮೀನನ್ನ ತೆರವುಗೊಳಿಸಬೇಕು ಎಂದು ನೋಟೀಸ್ ಕೊಟ್ಟಿರುವ ವಿರುದ್ಧ ರೈತರು ತಿರುಗಿ ಬಿದ್ದಿದ್ದಾರೆ.
ದಾಖಲಾತಿ ಪ್ರಕಾರ ಹಂತಹಂತವಾಗಿ ತೋಟ ಮಾಡಿಕೊಂಡು ಬರುತ್ತಿದ್ದ ರೈತರನ್ನ ಒಕ್ಕಲೆಬ್ಬಿಸದಂತೆ ರಕ್ಷಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಶಾಸಕರಾದ ಶಾರದಾ ಪೂರ್ಯನಾಯ್, ಡಾ.ಧನಂಜಯ ಸರ್ಜಿ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಬಸವರಾಜಪ್ಪ, ಮಲೆನಾಡು ರೈತ ಹೋರಾಟ ಸಮಿತಿಯ ಸಂಚಾಲಕ ತೀ.ನಾ.ಶ್ರೀನಿವಾಸ್, ಹೊಳೆಹೊನ್ನೂರಿನ ರೈತರಾದ ಹನುಮಂತಪ್ಪ ಮೊದಲಾದವರು ಉಪಸ್ಥಿತರಿದ್ದರು.