ಸುದ್ದಿಲೈವ್/ಚೋರಡಿ
ಶಿವಮೊಗ್ಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಾಣಾಧಿಕಾರಿ, ಇಒ ಮತ್ತು ಪಿಡಿಒ ವಿರುದ್ಧ ಶಿವಮೊಗ್ಗ ತಾಲೂಕು ಚೋರಡಿ ಜನಪ್ರತಿನಿಧಿಗಳು ಸಾರ್ವಜನಿಕರು ದಿಡೀರ್ ಎಂದು ಗ್ರಾಮ ಪಂಚಾಯಿತಿ ಕಚೇರಿ ಎದುರು ಟೆಂಟ್ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಗ್ರಾಮಠಾಣ ವ್ಯಾಪ್ತಿಯಲ್ಲಿರುವ ಪಶು ಆಸ್ಪತ್ರೆಗೆ ಕಳೆದ ಮೂರು ವರ್ಷದಿಂದ ಜಾಗ ದೊರೆತಿದ್ದು ಅಶೋಕ್ ನಾಯ್ಕ್ ಅವರು ಇದ್ದಾಗ 40 ಲಕ್ಷ ಬಿಡುಗಡೆಯಾದ ಹಣ ವಾಪಾಸಾಗಿದೆ, ಇದಾದ ನಂತರ ಈಗ 50 ಲಕ್ಷ ಹಣ ಸರ್ಕಾರ ಬಿಡುಗಡೆಗೊಳಿಸಿದ್ದು ಶಾರದಾ ಪೂರ್ಯನಾಯ್ಕ ಅವರ ಅನುದಾನದಲ್ಲಿ 20 ಲಕ್ಷ ಬಿಡುಗಡೆಯಾದರೂ ಕಟ್ಟಡ ಕಟ್ಟದೆ ಸುಮ್ಮನೆ ಕುಳಿತಿರುವ ಅಧಿಕಾರಿಗಳ ವಿರುದ್ಧ ಚೋರಡಿ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಚೋರಡಿಯಲ್ಲಿ ಮಾರಿಗದ್ದುಗೆಯು ಬಿಡುಗಡೆಯಾಗಿದ್ದು, ಜಿಪಂ ತಾಪಂ ಮತ್ತು ಗ್ರಾಪಂ ಅಧಿಕಾರಿಗಳು ಕಟ್ಟಿಸಿಕೊಡದೆ ನಿರ್ಲಕ್ಷಿಸುತ್ತಿದ್ದಾರೆ. ಜೊತೆಗೆ ಚೋರಡಿಯಲ್ಲಿ ಎಸ್ ಡಿಎ, ಮತ್ತು ಕಾರ್ಯನಿರ್ವಾಣಾಧಿಕಾರಿಗಳ ಹುದ್ದೆ 6 ತಿಂಗಳಿಂದ ಖಾಲಿ ಇದ್ದು ಭರ್ತಿ ಮಾಡದೆ ಇರುವ ಬಗ್ಗೆ ದೂರಿದ್ದಾರೆ.