Girl in a jacket

ಹೊಸೂಡಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಮಾರಾಮಾರಿಗೆ ಪಿಡಿಒ ಕಾರಣನಾ?



ಸುದ್ದಿಲೈವ್/ಶಿವಮೊಗ್ಗ


ಹೊಸೂಡಿ ಗ್ರಾಮ ಪಂಚಾಯಿತಿ ಯಲ್ಲಿ ನೀರುಗಂಟೆ ಹಾಗೂ ಅಧ್ಯಕ್ಷೆ ಕಾರು ಚಾಲಕನ ನಡುವಿನ ಮಾರಮಾರಿ ಪ್ರಕರಣ ಈಗ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.‌


ರಿವೆಂಜ್ ತೀರಿಸಿಕೊಳ್ಳಲು ಮುಂದಾದ್ರಾ ಹೊಸೂಡಿ ಗ್ರಾಮ ಪಂಚಾಯತಿ ಪಿಡಿಒ? ಎಂಬ ಅನುಮಾನ ವ್ಯಕ್ತವಾಗುತ್ತಿದೆ. ನೀರುಘಂಟಿ ಹನುಮಂತಪ್ಪ ಮೇಲೆ ರಿವೆಂಜ್ ತೀರಿಸಿಕೊಳ್ಳಲು ಪಿ ಡಿ ಓ ಕಳ್ಳಾಟ ನಡೆಸುದ್ರಾ ಎಂಬ ಅನುಮಾನಕ್ಕೆ ದೂರು ನೀಡಿರುವುದು ಕಾರಣವಾಗಿದೆ. 


ಹನುಮಂತಪ್ಪ ಕಚೇರಿಯ ಪೀಠೋಪಕರಣಗಳು ಒಡೆದು ಹಾಕಿದ್ದಾನೆ ಎಂದು ದೂರು ದಾಖಲು ಮಾಡಿದ ಪಿ ಡಿ ಓ ಮಂಜಮ್ಮ,  ಹನುಮಂತಪ್ಪ ಗ್ರಾಮ ಪಂಚಾಯಿತಿಯ ಚೇರುಗಳನ್ನ ಒಡೆದು ಹಾಕಿದ್ದಾನೆ ಎಂದು ದೂರು ನೀಡಿ ತಾವೇ ಹೊಡೆಸಿದ್ರಾ ಪಿ ಡಿ ಓ ಎಂದು ಹೇಳಲಾಗುತ್ತಿದೆ. 


ಕೆಲ ಜನರನ್ನ ಬಿಟ್ಟು ಚೇರುಗಳನ್ನ ಹೊರಗೆ ತರಿಸಿ ಒಡೆದು ಹಾಕುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್ ಹಾಗೂ ಮತ್ತೋರ್ವ ನೀರು ಗಂಟೆಯಿಂದ ಚೇರ್ಗಳನ್ನ  ಪಿಡಿಓ ಒಡೆಸುದ್ರ ಎನ್ನಲಾಗುತ್ತಿದೆ. 


ಚೇರ್ ಗಳನ್ನ ಒಡೆಯುವ ಸಮಯದಲ್ಲಿ ಸ್ಥಳದಲ್ಲೇ ಇದ್ದ ಪಿ ಡಿ ಓ ಮಂಜಮ್ಮ ತಡೆಯಲು ಮುಂದಾಗಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ. ನಂತರ  ಶಿವಮೊಗ್ಗ ಗ್ರಾಮಾಂತರ ಪೊಲೀಸರು  ಸ್ಥಳಕ್ಕೆ ಧಾವಿಸಿದ್ದಾರೆ.          


ಬಿಲ್ ಕಲೆಕ್ಟರ್ ಹಾಗೂ ಮತ್ತೋರ್ವ ನೀರು ಗಂಟಿಗೆ ಕೆಲಸದಿಂದ ತೆಗೆದು ಹಾಕುತ್ತೇನೆ ಎಂದು ಹೆದರಿಸಿ ಚೇರು ಹೊಡೆಯುವಂತೆ ಪಿಡಿಓ ಹೇಳಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಪಿಡಿಒ ಮಂಜಮ್ಮ ಹಾಗೂ ಅಧ್ಯಕ್ಷ ಚೈತ್ರ ಸಲ್ಲಿಸಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಾಗಿದೆ. 


ಕಳೆದ ಎರಡನೇ ತಾರೀಕು ಗ್ರಾಮ ಪಂಚಾಯಿತಿ ಕಚೇರಿ ಒಳಗಡೆ ಮಾರಮಾರಿ ನಡೆದಿತ್ತು. ಈ ವೇಳೆ ನೀರು ಗಂಟಿ ಹನುಮಂತಪ್ಪ ಮೇಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರರ ಕಾರು ಚಾಲಕ ಅಜರ್ ಹಲ್ಲೆ ನಡೆಸಿದ್ದ. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು