ಹೊಸ-ಕಾಂಪ್ಲೆಕ್ಸ್-ಕಾಮಗಾರಿಯ-ಶಂಕು-ಸ್ಥಾಪನೆ
ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ನಗರದ ಹೃದಯ ಭಾಗದಲ್ಲಿರುವ ಹಜ್ರತ್ ಸೈಯದ್ ಷಾ ಆಲೀಂ ದೀವಾನ್ (ರ.ಅ) ದರ್ಗಾ ಶಾಪಿಂಗ್ ಕಾಂಪ್ಲೆಕ್ಸ್ (ವಕ್ಫ್)(ಬಾಲರಾಜ್ ಅರಸ್ ರಸ್ತೆ) ಹೊಸ ಕಾಂಪ್ಲೆಕ್ಸ್ ಕಾಮಗಾರಿಯ ಶಂಕು ಸ್ಥಾಪನೆ ಕಾರ್ಯಕ್ರಮ ನಡೆಸಲಾಯಿತು.
ಈ ಶುಭ ಸಂದರ್ಭದಲ್ಲಿ ಖತೀಬೊ ಇಮಾಮ್ ಏಜಾಜ್ ಹಾಫಿಜ್ ಸಾಬ್ ಕುರಾನ್ ಪಠಿಸುವ ಮೂಲಕ ಆರಂಭಿಸಿದರು ಹಾಗೂ ಹಜ್ರತ್ ಸೈಯದ್ ಷಾ ಆಲೀಂ ದೀವಾನ್ ದರ್ಗಾ ಶಾಪಿಂಗ್ ಕಾಂಪ್ಲೆಕ್ಸ್ ಚುನಾಯಿತ ಸಮಿತಿ ನೆಲಕ್ಕೆ ಗುದ್ದಲಿ ಹೊಡೆಯುವ ಮೂಲಕ ಶಂಕು ಸ್ಥಾಪನೆ ನೆರವೇರಿಸಿ ಸಿಹಿ ಹಂಚಿಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷರಾದ ಫೈರೋಜ್, ಉಪಾಧ್ಯಕ್ಷರಾದ ಇಮ್ರಾನ್ ಅಹ್ಮದ್, ಕಾರ್ಯದರ್ಶಿ ವಾಹಿದ್ ಬೇಗ್, ಕೋಶಾಧಿಕಾರಿ ಮುಹಮ್ಮದ್ ಮನ್ಸೂರ್, ಸಮಿತಿಯ ಆಸಿಫ್ ಶರೀಫ್, ಅನ್ಸರ್ ಅಹ್ಮದ್, ಫಿರ್ದೋಸ್ ಅಹ್ಮದ್, ನಫೀಜ್ ಅಹ್ಮದ್, ಸೈಫುಲ್ಲಾ, ಹುಸೇನ್ ಮುಂತಾದವರು ಉಪಸ್ಥಿತರಿದ್ದರು.