Girl in a jacket

ತುಕಡಿಗಳ ಪಥಸಂಚಲನ

 


ಸುದ್ದಿಲೈವ್/ಶಿವಮೊಗ್ಗ


ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗದ ಪ್ರಮುಖ ಬೀದಿಗಳಲ್ಲಿ ಪೊಲೀಸರ ರೂಟ್ ಮಾರ್ಚ್ ನಡೆದಿದೆ.


ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ನಡೆದ ರೂಟ್ ಮಾರ್ಚ್ ಶಿವಮೊಗ್ಗದ ಶಾಂತಿ ನೆಲೆಸುವ ಸಲುವಾಗಿ ಹಮ್ಮಿಕೊಳ್ಳಲಾಗಿದೆ. ಶಿವಮೊಗ್ಗ ನಗರದ ಮುರಾದ್ ನಗರ ದಿಂದ ಪ್ರಾರಂಭಗೊಂಡ ರೂಟ್ ಮಾರ್ಚ್.



ನಂತರ ನಗರದ ಬಿ ಬಿ ರಸ್ತೆಯಿಂದ ಎಂಕೆಕೆ ರಸ್ತೆ, ಅಮೀರ್ ಅಹಮ್ಮದ್ ವೃತ್ತ, ಶಿವಪ್ಪ ನಾಯಕ ವೃತ್ತ, ಗಾಂಧಿ ಬಜಾರ್ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಎಸ್.ಪಿ. ಎಂ ರಸ್ತೆಯಲ್ಲಿ   ಪಥ ಸಂಚಲನ ನಡೆಸಲಾಯಿತು. 


ಎಸ್ ಪಿ ಎಂ ರಸ್ತೆ ಮೂಲಕ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ಮುಕ್ತಾಯಗೊಂಡಿದೆ. ಪಥ ಸಂಚಲನದಲ್ಲಿ ಎಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ, ಕಾರ್ಯಪ್ಪ ಭಾಗಿಯಾಗಿದ್ದರು. ರೂಟ್ ಮಾರ್ಚ್ ನಲ್ಲಿ  ಡಿ ಎ ಆರ್, ಕೆಎಸ್ಆರ್.ಪಿ ತುಕಡಿಗಳು ಸೇರಿದಂತೆ ನೂರಾರು ಸಿವಿಲ್ ಪೊಲೀಸ್ ಸಿಬ್ಬಂದಿಗಳು ಭಾಗಿಯಾಗಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು