ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ, ಸಂಸದ ರಾಘವೇಂದ್ರ ಅವರ ಹೈವೆ ರಸ್ತೆ ಕಾಮಗಾರಿ, ಬೆಂಗಳೂರಿಗೆ ಶರಾವತಿ ನೀರು ಪೂರೈಕೆ, ಸಿಎಂ ಬದಲಾವಣೆ, ಮರ ಕಡಿತಲೆ ವಿರುದ್ಧ ಗುಡುಗಿದ್ದಾರೆ.
ಮೊದಲಿಗೆ ಸಿಎಂ ಬಲಾವಣೆ ರೇಸ್ ನಲ್ಲಿ ಶಾಸಕರ ಹೇಳಿಕೆ ವಿಚಾರ ಪ್ರತಿಕ್ರಿಯಿಸಿದ ಶಾಸಕರು ಮುಖ್ಯಮಂತ್ರಿ ಆಗಲು ಯಾರಿಗೆ ಬೇಕಾದರೂ ಅವಕಾಶ ಇದೆ. ಮುಖ್ಯಮಂತ್ರಿ ಮಾಡುವವರು ಯಾರು ಶಾಸಕರು, ಮುಖ್ಯಮಂತ್ರಿ ಆಗೋವವರಿಗೆ ನಾವು ಬೇಡ ಎನ್ನುಲು ಆಗಲ್ಲ ಎಂದಿರುವುದು ಕುತೂಹಲ ಮೂಡಿಸಿದೆ.
ಕೇಂದ್ರದ ನಾಯಕರು ಸಿಎಂ ಬದಲಾವಣೆ ಬಗ್ಗೆ ಒಪ್ಪಬೇಕು, ಶಾಸಕರು ಒಪ್ಪಬೇಕು, ನಾನು ಶಾಸಕ ಮಂತ್ರಿ ಆಗಿದ್ದರೆ ನಾನು ಕೇಳುತ್ತಿದ್ದೆನೇನೋ ಈಗ ಕೇಳಲ್ಲ. ಪಕ್ಷದಲ್ಲಿ ಗೊಂದಲ ತರುವುದು ಬೇಡ. ಮುಖ್ಯಮಂತ್ರಿಗಳು ಕೆಲಸ ಮಾಡುತ್ತಿದ್ದಾರೆ
ಬೆಂಗಳೂರಿಗೆ ಶರಾವತಿ ನೀರು ಪೂರೈಕೆ ವಿರೋಧಿಸಲು ಆಗಲ್ಲ
ಸಿಎಂ ವಿರುದ್ದ ಪ್ರಕರಣ ನಡೆಯುತ್ತಿದೆ. ಅಲ್ಲಿಯವರೆಗೆ ಯಾರು ಮಾತನಾಡಬಾರದು ಎಂದ ಶಾಸಕರು ಶರಾವತಿ ನೀರನ್ನು ಬೆಂಗಳೂರಿಗೆ ತಗೆದುಕೊಂಡು ಹೋಗುವ ವಿಚಾರದಲ್ಲಿ ಸಾರ್ವಜನಿಕರ ಅಭಿಪ್ರಾಯ ಕೇಳಬೇಕಾಗುತ್ತದೆ. ಜನರ ಒತ್ತಡ ಇರೋದರಿಂದ ಸರ್ಕಾರ ಗಮನಿಸಬೇಕು. ಬೆಂಗಳೂರು ನಗರಕ್ಕೆ ಕುಡಿಯುವ ನೀರು ಬೇಡ ಅನ್ನಲು ಬರಲ್ಲ. ವಿದ್ಯುತ್ ಉತ್ಪಾದನೆಗೆ ಮಾತ್ರ ಇರುವ ನೀರು ಶರಾವತಿ ಇರೋದು. ಆದರೆ ವಿದ್ಯುತ್ ಇಲ್ಲ ಅಂದರೆ ಸರ್ಕಾರ ಖರೀದಿ ಮಾಡಿ ಕೊಡುತ್ತೆ. ಬರೇ ವಿರೋಧ ಮಾಡುವುದು ಬಿಜೆಪಿಯ ಕೆಲಸ ಎಂದು ಕೈತೊಳೆದುಕೊಂಡರು.
ಮೇಕೆ ದಾಟುವ ಯೋಜನೆಗೆ ಅನುಮತಿ ಕೊಟ್ಟರೆ ಶರಾವತಿ ನೀರು ಕೊಡುವ ಪರಿಸ್ಥಿತಿ ಇಲ್ಲ. ರಾಷ್ಟ್ರೀಯ ಹೈವೆಗಳು ಮಾಡಿದಾಗ ಕಾಡು ಹೋಗುತ್ತೆ ಅಂತ ಯಾಕೇ ಹೇಳಲ್ಲ? ರಾಷ್ಟ್ರೀಯ ಹೈವೆಗಳನ್ನು ಸಹ ನಿಲ್ಲಿಸಲಿ ನೋಡೋಣ ಎಂದು ಸವಾಲು ಎಸೆದರು.
ಡಿಸಿಸಿ ಬ್ಯಾಂಕ್ ಹಗರಣ ತನಿಖೆ ಮಾಡಬೇಕು
ಡಿಸಿಸಿ ಬ್ಯಾಂಕ್ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ. ನೇಮಕಾತಿ ಆದವರಿಗೆ 20 ಲಕ್ಷ ಸಾಲ ಕೊಟ್ಟಿದ್ದಾರೆ. ಇದರ ಬಗ್ಗೆ ತನಿಖೆ ಮಾಡಬೇಕು. ಯಾವುದಾದರೂ ತನಿಖಾ ಸಂಸ್ಥೆಗೆ ಡಿಸಿಸಿ ಬ್ಯಾಂಕ್ ನೇಮಕಾತಿ ಹಗರಣವನ್ನು ಕೊಡಬೇಕು. ಕೆಲಸ ಕೊಡುತ್ತೇವೆ ಎಂದು ಸಾಲ ಕೊಟ್ಟು ಹಣ ತೆಗೆದುಕೊಂಡಿದ್ದಾರೆ ಇವೆಲ್ಲಾ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಸಾಯಿ ಗಾರ್ಮೇಂಟ್ಸ್ ಬಗ್ಗೆ ಸಹ ತನಿಖೆ ನಡೆಸುತ್ತೇವೆ ಎಂದಿರುವ ಶಾಸಕ ಬೇಳೂರು, ಯಾವ ಹಗರಣವನ್ನು ಸಹ ನಾವು ಬಿಡುವುದಿಲ್ಲ ಎಂದು ಗುಡುಗಿದ್ದಾರೆ.
ಸಿಗಂದೂರು ಸೇತುವೆ ತಡವೇಕೆ ಆಯಿತು?
ಸಂಸದ ರಾಘವೇಂದ್ರ ಒಂದು ಹೇಳಿಕೆ ಕೊಟ್ಟಿದ್ದಾರೆ. ಐದು ವರ್ಷ ನಿಮ್ಮದೆ ಆಡಳಿತ ಇತ್ತಲ್ಲ ಆಗ ಯಾಕೇ ರಾಷ್ಟ್ರೀಯ ಹೆದ್ದಾರಿ ಪೂರ್ಣ ಮಾಡಲಿಲ್ಲ. ಎಂಪಿಯಾಗಿ ನಿಮ್ಮ ಕೆಲಸ ನೋಡಿಕೊಳ್ಳಲಿ ಸಿಗಂದೂರು ಸೇತುವೆ ಆಗುತ್ತಿರೋದು ಎಷ್ಟು ವರ್ಷ ಆಯ್ತು?ಎಂಪಿಯವರು ತಮ್ಮ ಸಾಧನೆ ಬಗ್ಗೆ ಹೇಳಬೇಕು. ಏನು ಸಾಧನೆ ಮಾಡಿ ಶಿವಮೊಗ್ಗ ಅಭಿವೃದ್ಧಿ ಮಾಡಿದ್ದಾರೆಎಂಬುದನ್ನ ಪಟ್ಟಿ ನೀಡಲಿ ಎಂದು ಸವಾಲು ಎಸೆದಿದ್ದಾರೆ.