Girl in a jacket

ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರಿಗಳಿಗೆ ಕಠಿಣ ಕಾನೂನು ಜಾರಿಗೊಳಿಸುವಂತೆ ಆಗ್ರಹ

 


ಸುದ್ದಿಲೈವ್/ಶಿವಮೊಗ್ಗ

ಲೈಂಗಿಕ ಕಿರುಕುಳ ಅತ್ಯಾಚಾರ ಆರೋಪಿಗಳಿಗೆ ಜಾಮೀನು ನೀಡದೆ ಕಠಿಣ ಶಿಕ್ಷೆ ವಿಧಿಸುವಂತೆ ಕೋರಿ ಸಮೃದ್ಧ್ ಸ್ವ-ಸಹಾಯ ಸಂಘಗಳ ತಾಲ್ಲೂಕು ಒಕ್ಕೂಟವು ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಕುಳಿತು ಮನವಿ ಸಲ್ಲಿಸಿದ್ದಾರೆ.

ದೌರ್ಜನ್ಯಗಳನ್ನು ಖಂಡಿಸಿ ಶೋಷಿತ, ಬಡ ಬಗ್ಗರ, ದೀನ ದಲಿತರ ಮಹಿಳೆಯರ ಸಬಲೀಕರಣಕ್ಕಾಗಿ ಹಾಗೂ ಮಹಿಳೆ ಮತ್ತು ಮಕ್ಕಳ ರಕ್ಷಣೆಗಾಗಿ ಮಹಿಳೆಯರ ಸಾಮಾರ್ಥ್ಯ ಅಭಿವೃದ್ಧಿಗಾಗಿ ಕಾರ್ಯಾಚರಿಸುತ್ತಿದೆ.

ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ, ಹಿಂಸಾಚಾರ, ಅತ್ಯಾಚಾರ, ಲೈಂಗಿಕ ಕಿರುಕುಳ, ಹತ್ಯೆ, ಮುಂತಾದ ಕಂಡು ಕೇಳರಿಯದ ಭೀಭತ್ಸ ಪ್ರಕರಣಗಳು ವರ್ಷದಿಂದ ವಷಕ್ಕೆ ಹಚ್ಚುತ್ತಿದ್ದು ಇದಕ್ಕೆ ಅಂತಿಮ ಹಾಡುವ ಲಕ್ಷಣಗಳೇ ಕಾಣುತ್ತಿಲ್ಲ.

ಅದರಂತೆ ನಮ್ಮ ರಾಜ್ಯದಲ್ಲೂ ಈ ವರ್ಷ ಜುಲೈ ತಿಂಗಳ ಅಂತ್ಯದೊಳಗೆ 340 ಅತ್ಯಾಚಾರ ಪ್ರಕರಣ ದಾಖಲೆಗೊಂಡಿವೆ. ಪೊಲೀಸ್ ಇಲಾಖೆಯ ಪ್ರಕಾರ 234 ಅತ್ಯಾಚಾರ ಪ್ರಕರಣ ವಿಚಾರಣಾ ಹಂತದಲ್ಲಿದೆ. 106 ಪ್ರಕರಣಗಳು ವಿಚಾರಣೆ ಆಗಬೇಕಿದೆ.

2089 ಪೋಕೋ ಪ್ರಕರಣ ದಾಖಲಾಗಿ 2015 ಪ್ರಕರಣಗಳು ವಿಚಾರಣೆ ಹಂತದಲ್ಲಿದೆ. 1074 ಪ್ರಕರಣಗಳು ವಿಚಾರಣೆಗೆ ಬಾಕಿ ಇದೆ. 3643 ಲೈಂಗಿಕ ಪ್ರಕರಣ ದಾಖಲಾಗಿದೆ. 2023 ರಲ್ಲಿ ಒಟ್ಟು 3863 ಪೋಕ್ಸೋ ಪಕರಣ ಮತ್ತು 6076 ಅತ್ಯಾಚಾರ ಪ್ರಕರಣ ದಾಖಲಾಗಿದೆ.. 2022 ರಲ್ಲಿ 3194 ಪ್ರಕರಣಗಳು ದಾಖಲಾಗಿದ್ದು,  537  ಪ್ರಕರಣಗಳು ಬಾಕಿಯಿವೆ. ವರ್ಷದಿಂದ ವರ್ಷಕ್ಕೆ ಮಹಿಳೆ ಮತ್ತು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ. 

ಮಹಿಳೆಯರು ಮತ್ತು ಮಕ್ಕಳು ಉಸಿರುಗಟ್ಟುವ ವಾತಾವರಣದಲ್ಲಿ ಜೀವಿಸುವ ಸಂದರ್ಭ ನಿರ್ಮಾಣವಾಗಿದೆ. ಮಹಿಳೆಯರು ಮತ್ತು ಹಣ್ಣು ಮಕ್ಕಳ ಮೇಲಿನ ಎಲ್ಲಾ ದೌರ್ಜನ್ಯ, ಹಿಂಸೆ, ಅತ್ಯಾಚಾರ, ಹತ್ಯೆಯಂತಹ ಪ್ರಕರಣ ಶಾಶ್ವತವಾಗಿ ನಿಲ್ಲಬೇಕಾದರೆ ಅಪರಾಧ ಕೃತ್ಯ ಎಸಗುವವರಿಗೆ ಭಯ ಹುಟ್ಟಿಸಬೇಕಿದೆ. ಇಂತ ಅಪರಾಧಿಗಳಿಗೆ ಕಠಿಣ ಶಿಕ್ಷೆ, ಶಾಶ್ವತ ಜಾಮೀನು ನಿರಾಕರಣೆ, ಜೀವಾವಧಿ ಶಿಕ್ಷೆ ಅಥವಾ ಗಲ್ಲು ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತರಬೇಕು.  

ಮಹಿಳೆಯರು ಮತ್ತು ಮಕ್ಕಳಿಗೆ ಸಮಾಜದಲ್ಲಿ ಮುಕ್ತವಾಗಿ ಜೀವನ ನಡೆಸಲು ಅವಕಾಶ ಕಲ್ಪಿಸಿಕೊಡಬೇಕೆಂದು ಸಂಘಟನೆ  ವಿನಂತಿಸಿಕೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು