ಸುದ್ದಿಲೈವ್/ಭದ್ರಾವತಿ
ಇಲ್ಲಿನ ಟಿ.ಕೆ ರಸ್ತೆಯಲ್ಲಿರುವ ಮಸ್ಜಿದ್-ಎ-ಚೌಕ್‌ಗೆ 11 ಜನ ವ್ಯವಸ್ಥಾಪನ ಸಮಿತಿಯ ಸದಸ್ಯರನ್ನ ಚುನಾಯಿಸಲು ವೇಳಾಪಟ್ಟಿಯಲ್ಲಿ ಕೆಲವು ಬದಲಾವಣೆಯನ್ನ ತಂದು ವಕ್ಫ್ ಸಮಿತಿಯ ಅಧಿಕಾರಿಯಾಗಿರುವ ಸೈಯ್ಯದ್ ಮೆಹತಾಬ್ ಸರ್ವರ್ ಅದೇಶಿಸಿದ್ದಾರೆ.
ಇಷ್ಟು ದಿನ ನಾಮಪತ್ರ ಸಲ್ಲಿಕೆ ಪಡೆಯುವುದನ್ನ ಶಿವಮೊಗ್ಗದ ಮುಸ್ಲೀಂ ಹಾಸ್ಟೆಲ್ ನಲ್ಲಿರುವ ವಕ್ಫ್ ಬೋರ್ಡ್ ಕಚೇರಿಯಲ್ಲಿ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಈಗ ಚುನಾವಣೆ ಅಧಿಕಾರಿ ಸೈಯ್ಯದ್ ಮೆಹತಾಬ್ ಸರ್ವರ್ ಚುನಾವಣೆಗೆ ಸ್ಪರ್ಧಿಸಲು ಬಯಸುವ ಅಭ್ಯರ್ಥಿಗಳು ನಾಮತ್ರ ಪಡೆಯಲು, ನಾಮಪತ್ರ ಸಲ್ಲಿಸುವುದು ಪರಿಷ್ಕರಣೆ, ಅಭ್ಯರ್ಥಿಗಳಿಗೆ ಚಿಹ್ನೆ ಪ್ರಕಟಿಸುವುದನ್ನ ಭದ್ರಾವತಿಯ ಟಿ.ಕೆ ರಸ್ತೆಯಲ್ಲಿರುವ ಮಸ್ಜಿದ್-ಎ-ಚೌಕ್‌ನಲ್ಲಿಯೇ ಪಡೆಯಲು ಅವಕಾಶ ಕಲ್ಪಿಸಿದ್ದಾರೆ. ಸೆ.26 ರಂದು ನಾಮಪತ್ರ ಮಧ್ಯಾಹ್ನ 2 ಗಂಟೆಯ ವರೆಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಚುನಾವಣೆ ಅಧಿಸೂಚನೆ ಪ್ರಕಟಣೆ ಇಂದಿನಿಂದ ಹೊರಡಿಸಲಾಗಿದೆ. ನಾಮಪತ್ರ ಪಡೆಯಲು ಮತ್ತು ಸಲ್ಲಿಸಲು ಸೆ.19 ರಿಂದ ಸೆ.26 ರ ವರೆಗೆ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ರವರೆಗೆ ( ಸರ್ಕಾರಿ ರಜೆ ಹೊರತುಪಡಿಸಿ) ನಡೆಯಲಿದ್ದು ಭರ್ತಿ ಮಾಡಿದ ನಾಮಪತ್ರವನ್ನ ಸೆ.26 ರಂದು ಮಧ್ಯಾಹ್ನ 2 ಗಂಟೆಯ ಒಳಗೆ ಸಲ್ಲಿಸಬಹುದಾಗಿದೆ. ಸೆ.30 ರಂದುವನಾಮಪತ್ರ ಪರಿಷ್ಕರಣೆ ನಡೆಯಲಿದೆ.
ಚುನಾವಣೆ ಸ್ಪರ್ಧಿಸುವ ಅರ್ಹ ಅಭ್ಯರ್ಥಿಗಳ ಪಟ್ಟಿಪ್ರಕಟಣೆ ಮತ್ತು ಅಭ್ಯರ್ಥಿಗಳ ನಾಮಪತ್ರ ಹಿಂಪಡೆಯಲು ಅ.01 ರವರೆಗೆ ಅವಕಾಶ ಕಲ್ಪಿಸಲಾಗಿದೆ. ಅ.03 ರಂದು ಚುನಾವಣೆ ಸ್ಪರ್ಧಿಸುವ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಲಾಗುವುದು. ಅ.04 ರಂದು ಮದ್ಯಾಹ್ನದ 2 ಗಂಟೆಯ ಒಳಗೆ ಅಭ್ಯರ್ಥಿಗಳ ಚಿಹ್ನೆ ಹಂಚಲಾಗುತ್ತದೆ.
ಅ.13 ರಂದು ಭಾನುವಾರ ಭದ್ರಾವತಿಯ ಬೈಪಾಸ್ ರಸ್ತೆಯಲ್ಲಿರುವ ಅಲ್ ಮೆಹಮೂದ್ ತಾಜ್ ಶಿಕ್ಷಣ ಪ್ರೌಢಶಾಲೆಯಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 3 ರವರೆಗೆ ಮತದಾನ ನಡೆಯಲಿದೆ. ಅಂದು ಸಂಜೆ 4 ಗಂಟೆಯಿಂದ ಮತ ಎಣಿಕೆ ನಡೆಯಲಿದೆ. ನಂತರ ಫಲಿತಾಂಶ ಪ್ರಕಟಿಸಲಾಗುವುದು.