ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಎಎ ವೃತ್ತದ ಬಳಿ ನಟ ದರ್ಶನ್ ಅವರ ಭಾವಚಿತ್ರ ಹಿಡಿದುಕೊಂಡು ಬಂದ ಅಭಿಮಾನಿಯೊಬ್ಬ ಮಾಧ್ಯಮದವರ ಮುಂದೆ ಪ್ರದರ್ಶಿಸಿದ್ದಾನೆ. ಇಷ್ಟುವರ್ಷ ಪುನೀತ್ ರಾಜ್ ಕುಮಾರ್ ಅವರ ಭಾವ ಚಿತ್ರ ಪ್ರದರ್ಶನ ಮಾಡಲಾಗುತ್ತಿತ್ತು. ಈ ಬಾರಿ ದರ್ಶನ್ ಭಾವ ಚಿತ್ರ ಪ್ರದರ್ಶಿಸಲಾಗುತ್ತಿದೆ.
ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿಯ ಮೆರವಣಿಗೆ ಇನ್ನೂ ಎಎ ವೃತ್ತದ ಬಳಿ ಬರಬೇಕಿದೆ. ಆ ವೇಳೆ ನಟ ದರ್ಶನ್ ಅವರ ಫೊಟೊವನ್ನ ಅಭಿಮಾನಿ ಹಿಡಿದುಕೊಂಡು ಬಂದಿದ್ದಾನೆ.
ಫೋಟೋದಲ್ಲೂ ಕುತೂಹಲಕಾರಿ ವಾಕ್ಯಗಳನ್ನ ಬಳಸಿ ದೇವರ ಕಲಾಕೃತಿಗೆ ಹಾಗೂ ಮಾಧ್ಯಮದವರಿಗೆ ತೋರಿಸಿದ್ದಾನೆ. ಯಾವುದೇ ಕೇಡು ತಾಕದು ನಿಮಗೆ ಕಾಯುವುದು ಅಭಿಮಾನ ಲವ್ ಯು ಡಿ ಬಾಸ್ ಎಂದು ಪೋಟೊ ಕೆಳಗೆ ಬರೆಯಲಾಗಿದೆ.
ಇದೇ ವೇಳೆ ಎಎವೃತ್ತದಲ್ಲಿ ನಿರ್ಮಿಸಲಾಗಿರುವ ಅಯೋಧ್ಯ ರಾಮ ಮಂದಿರ, ರಾಮ ಮತ್ತು ಆಂಜನೇಯ ಹಾಗೂ ಕಾಶಿ ವಿಶ್ವನಾಥನ ಕಲಾಕೃತಿಗೆ ಟಾರ್ಜ್ ಬೆಳಗಲಾಯಿತು.
ಮೊಬೈಲ್ ಟಾರ್ಚ್ ಆನ್
ಗಣಪತಿ ಮೆರವಣಿಗೆ ಈ ಬಾರಿ ಬಜಾರ್ ನ ಮಹಾದ್ವಾರದಿಂದ ಗೋಪಿ ವೃತ್ತದವರೆಗೆ ಜನರು ಕಿಕ್ಕಿರಿದು ನಿಂತಿದ್ದಾರೆ. ಗಣಪತಿ ಬಜಾರ್ ಮಹಾದ್ವಾರದ ವರೆಗೆ ಬರಬೇಕಿದೆ. ಈ ವೇಳೆ ಸಂತೋಷದಿಂದ ಟಾರ್ಚ್ ಬೆಳಗಲಾಯಿತು
ಪಟಾಕಿಯನ್ನ ಸಿಡಿಸಲಾಯಿತು. ಸಂಸದ ರಾಘವೇಂದ್ರ ಈ ವೇಳೆ ಎಎ ವೃತ್ತದಲ್ಲಿ ನಿರ್ಮಿಸಿದ ಸಿರುವ ರಾಮಾಂಜನೇಯ ಕಲಾಕೃತಿ ಬಳಿ ಅವರು ಸಹ ಮೊಬೈಲ್ ಟಾರ್ಚ್ ಲೈಟ್ ಬೆಳಗಿದ್ದಾರೆ.
ಗಣಪತಿ ವಿಸರ್ಜನೆ ವೇಳೆ ಗೋಪಿ ವೃತ್ತದಲ್ಲಿ ಡಿಜೆ ಹಾಕಲಾಗಿದೆ. ಈಗ ಗಣಪತಿ ಎಎ ವೃತ್ತ ದಾಟಿ, ನೆಹರೂ ರಸ್ತೆಕಡೆ ಸಾಗಿಧ.