Girl in a jacket

ಆನ್‌ಲೈನ್ ಟ್ರೇಡಿಂಗ್ ಕುರಿತು ಎಚ್ಚರ... ಎಚ್ಚರ.... ಎಚ್ಚರ!




ಸುದ್ದಿಲೈವ್/ಶಿವಮೊಗ್ಗ


ಆನ್ ಲೈನ್ ಟ್ರೇಡಿಂಗ್ ಕುರಿತು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ಆನ್ ಲೈನ್ ಟ್ರೇಡಿಂಗ್ ಕುರಿತು ಸಾರ್ವಜನಿಕರು ಜಾಗೃತರಾಗುವಂತೆ ಉದಾಹರಣೆ ಸಮೇತ ಮಾಹಿತಿ ನೀಡಿದೆ. 


ಶಿವಮೊಗ್ಗ ನಗರದ ವ್ಯಕ್ತಿಯೊಬ್ಬರಿಗೆ KSL VIP ಎಂಬ ವ್ಯಾಟ್ಸಪ್ ಗ್ರೂಪ್‌ನಲ್ಲಿ ಷೇರು ಮಾರುಕಟ್ಟೆಯ Online Stock Trading ನಲ್ಲಿ ಹೆಚ್ಚಿನ ಲಾಭಾಂಶ ಕೊಡುವುದಾಗಿ ನಂಬಿಸಿ ಅವರಿಂದ ಹಣ ಹಾಕಿಸಿಕೊಂಡು ಅದರಲ್ಲಿ ಲಾಭಾಂಶದ ರೂಪದಲ್ಲಿ 1,30,933/- ರೂಗಳನ್ನು ವಾಪಸ್ಸು ನೀಡಿದ್ದು, ಇನ್ನುಳಿದ ಅಸಲು ಮತ್ತು ಲಾಭಾಂಶದ ಹಣ ನೀಡಲು  Loan, Commission, Tax ಇತರೆ ವೆಚ್ಚಗಳನ್ನು ಕಟ್ಟಬೇಕು ಎಂದು ವಿವಿಧ ಕಾರಣಗಳನ್ನು ನೀಡಿ ಹಂತಹಂತವಾಗಿ ಒಟ್ಟು 19,23,000/- ಹಣವನ್ನು ಹಾಕಿಸಿಕೊಂಡು ಹಣವನ್ನು ವಾಪಾಸ್ ನೀಡದೇ ವಂಚಿಸಿರುತ್ತಾರೆಂದು ನೊಂದ ವ್ಯಕ್ತಿಯು ನೀಡಿದ ದೂರಿನ ಮೇರೆಗೆ ಶಿವಮೊಗ್ಗ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.


ಇತ್ತೀಚಿನ ದಿನಗಳಲ್ಲಿ ಈ ರೀತಿಯ ಟ್ರೇಡಿಂಗ್ ಹೆಸರಿನಲ್ಲಿ ಹೆಚ್ಚಿನ ಲಾಭಾಂಶ ಮಾಡಿಕೊಡುವುದಾಗಿ ನಂಬಿಸಿ ವಂಚಿಸುತ್ತಿರುವ ಬಗ್ಗೆ ಪ್ರಕರಣಗಳು ದಾಖಲಾಗುತ್ತಿದ್ದು, ಸಾರ್ವಜನಿಕರು ಈ ಕುರಿತು ಜಾಗರೂಕರಾಗಿರತಕ್ಕದ್ದು ಎಂದು ಪೊಲೀಸ್ ಇಲಾಖೆ ಎಚ್ಚರಿಸಿದೆ.


ಯಾರಾದರೂ ಕಡಿಮೆ ಅವಧಿಗೆ ಹೆಚ್ಚಿನ ಲಾಭಾಂಶ ಮಾಡಿಕೊಡುವುದಾಗಿ ಹೇಳಿದರೆ ಅವರನ್ನು ನಂಬಿ ಆನ್ ಲೈನ್ ಮುಖಾಂತರ ಹಣವನ್ನು ಹೂಡಿ ಮೋಸಕ್ಕೆ ಒಳಗಾಗಬೇಡಿ  ಹಾಗೂ ಯಾರಾದರೂ ಸಾರ್ವಜನಿಕರು ಸೈಬರ್ ವಂಚನೆಗೆ ಓಳಗಾದಲ್ಲಿ ಕೂಡಲೇ 1930 ಹೆಲ್ಪ್ ಲೈನ್ ನಂಬರ್‌ಗೆ ಹಾಗೂ ಸಿಇಎನ್ ಕ್ರೈಂ ಪೊಲೀಸ್ ಠಾಣೆ ಶಿವಮೊಗ್ಗದ ದೂರವಾಣಿ ಸಂಖ್ಯೆ:- 08182261426 / 9480803383 ಕರೆ ಮಾಡಿ ದೂರು ದಾಖಲಿಸಬಹುದಾಗಿರುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು