ಸುದ್ದಿಲೈವ್/ಶಿವಮೊಗ್ಗ
ವಿನೋಬ ನಗರ ಪೊಲೀಸ್ ಠಾಣೆಯ ಮುಂಭಾಗ ಪೊಲೀಸರಿಗೂ ಮತ್ತು ಮಾಜಿ ಕಾರ್ಪರೇಟರ್ ವಿಶ್ವಾಸ್ ಹಾಗೂ ಅವರ ಕಡೆಯ
ಹುಡುಗರ ನಡುವೆ ಮಾತಿನ ಚಕಮಕಿ ನಡೆದಿದೆ. ಡಿವೈಎಸ್ಪಿ ಸುರೇಶ್ ಅವರ ಮಧ್ಯಸ್ಥಿಕೆಯಲ್ಲಿ ಎಲ್ಲವೂ ತಿಳಿಗೊಂಡಿದೆ.
ನಿನ್ನೆ ಬೊಮ್ಮನ್ ಕಟ್ಟೆಯ ಎಫ್ ಬ್ಲಾಕ್ ನ ಸ್ನೇಹ ಜೀವಿ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಮಜಿ ಕಾರ್ಪರೇಟರ್ ಮತ್ತು ರಾಷ್ಟ್ರಭಕ್ತರ ಬಳಗದ ವಿಶ್ವಾಸ್ ಅವರ ಹುಡುಗ ಮಂಜುನಾಥ್ ಎಂಬಾತ ಕಾಣಿಸಿಕೊಂಡಿದ್ದಕ್ಕೆ ವಿನೋಬ ನಗರ ಪೊಲೀಸ್ ಪಿಸಿಯೋರ್ವರು ನೀನು ಯಾಕೆ ಇಲ್ಲಿದ್ದೀಯ ಎಂದು ಪ್ರಶ್ನಿಸಿದ್ದಾರೆ. ಯಾಕೆ ನಾನು ಬರುವ ಹಾಗಿಲ್ವಾ ಎಂದು ಮಂಜುನಾಥ್ ಮರುಪ್ರಶ್ನಿಸಿದ್ದಾರೆ.
ಇಲ್ಲೂ ಸಹ ಪೊಲೀಸರು ಮತ್ತು ಮಂಜುನಾಥ್ ನಡುವೆ ಮಾತಿನ ಸಣ್ಣದಾದ ವಾಗ್ವಾದ ನಡೆದಿದೆ. ಇದಾದ ನಂತರ ವಿನೋಬ ನಗರ ಠಾಣೆ ಪಿಐ ಅವರು ರೌಂಡ್ಸ್ ಗೆ ಹೋದ ಸಂದರ್ಭದಲ್ಲಿ ಮಂಜುನಾಥ್ ಮನೆಗೆ ತೆರಳಿದ್ದಾರೆ. ಈ ವೇಳೆ ಮಂಜುನಾಥ್ ಮನೆಯಲ್ಲಿ ಇಲ್ಲದ ಕಾರಣ ಅವರ ತಾಯಿಗೆ ಠಾಣೆಗೆ ಬರಲು ಹೇಳಿದ್ದಾರೆ.
ಈ ನಡುವೆ ಮಾಜಿ ಕಾರ್ಪರೇಟರ್ ವಿಸ್ವಾಸ್ ಮಂಜುಪರವಾಗಿ ವಿನೋಬನಗರ ಠಾಣೆಗೆ ಬಂದಿದ್ದಾರೆ. ಈ ವೇಳೆಯೂ ಪಿಐ ಮತ್ತು ವಿಶ್ವಾಸ್ ಹಾಗೂ ವಿಶ್ವಾಸ್ ಕಡೆಯ ಹುಡುಗರ ನಡುವೆ ಮಾತಿನ ಚಕಮಕಿ ಬೆಳೆದಿದೆ. ಟ್ರಾನ್ಸಫರ್ ಮಾಡುಸ್ತೀರಾ? ಟ್ರಾನ್ಸ್‌ಫರ್ ಆದರೆ ಮತ್ತೆ ಇದೇ ಠಾಣೆಗೆ ಬರುತ್ತೇನೆ ಎಂದು ಪಿಐ ಹೇಳಿದ ಮಾತು ವಿಶ್ಚಾಸ್ ಕಡೆಯವರನ್ನ ಕೆರಳಿಸಿದೆ.
ಅವರು ಸಹ ಮರು ದಾಳಿ ಮಾಡಿದ್ದಾರೆ. ಈ ವೇಳೆ ಡಿವೈಎಸ್ಪಿ ಸುರೇಶ್ ಅವರ ಮಧ್ಯಸ್ಥಿಕೆಯಲ್ಲಿ ಸಧ್ಯಕ್ಕೆ ಎಲ್ಲವೂ ತಿಳಿಗೊಂಡಿದೆ.