ಸೋಮವಾರ, ಸೆಪ್ಟೆಂಬರ್ 2, 2024

ಸ್ನೇಹಿತರಲ್ಲೇ ವಾಗ್ವಾದ ಚಾಕು ಇರಿತ



ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗ ಪಿಳಂಗೆರೆ ರಸ್ತೆಯಲ್ಲಿ ಸ್ನೇಹಿತರ ನಡುವೆ ಗಲಾಟೆಯಾಗಿ ಚಾಕು ಇರಿತವಾಗಿರುವ ಘಟನೆ ನಡೆದಿದೆ. ಚಾಕು ಇರಿತಕ್ಕೆ ಒಳಗಾದ ವ್ಯಕ್ತಿಯನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ. 


ನಿನ್ನೆ ಹಣದ ವ್ಯವಹಾರದಲ್ಲಿ ಚನ್ನಗಿರಿಯಲ್ಲಿ ಪಂಚಾಯಿತಿಗೆ ನಡೆದಿತ್ತು. ಇದಕ್ಕೆ ಕಡೇಕಲ್ ನ ಹಕೀಬುಲ್ಲಾ ಬೇಗ್, ಅಮ್ಜದ್ ಎಂಬುವರು ಸೇರಿ ನಾಲ್ವರು  ಕಾರಿನಲ್ಲಿ ಬರುವಾಗ ಮಾತಿಗೆ ಮಾತು ಬೆಳೆದಿದೆ. 


ಅಬೀಬುಲ್ಲ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಬಳಿ ಕಾರಿನಿಂದ ಇಳಿದುಕೊಂಡಿರುತ್ತಾರೆ. ನಂತರ ಸತ್ತರ್ ಅವರು ಇಳಿದು ಚಾಕು ಇರಿದಿರುವುದಾಗಿ ತಿಳಿದು ಬಂದಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ