ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ಕಾಮಧೆನು ಔಷಧ ಸಗಟು ವ್ಯಾಪಾರಿ ಮುತ್ತಣ್ಣ ನವರ ಮಗ ಪೃಥ್ವಿ 20 ವರ್ಷದ ವಿದ್ಯಾರ್ಥಿ ಇಂದು ಶಿವಮೊಗ್ಗದ ಸರ್ಕ್ಯೂಟ್ ಹೌಸ್ ಬಳಿ ವಾಕ್ ಮಾಡುತ್ತಿದ್ದ ವೇಳೆ ಹೃದಯಾಘಾ ಸಾವು ಕಂಡಿರುವ ಘಟನೆ ವರದಿಯಾಗಿದೆ.
ಸಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ 2ನೇ ವರ್ಷದ ಮೆಡಿಕಲ್ ವ್ಯಾಸಂಗ ಮಾಡುತಿದ್ದರು ಪೃಥ್ವಿ ಇಂದು ಶಿವಮೊಗ್ಗದ ಹೆಲಿಪ್ಯಾಡಿನಲ್ಲಿ ಸಂಜೆ 4 ಗಂಟೆಗೆ ವಾಕ್ ಮಾಡುತ್ತಿದ್ದಾಗ ತೀವ್ರ ಹೃದಯಗತವಾಗಿ ಸ್ಥಳದಲ್ಲೆ ಕುಸಿದು ಬಿದ್ದಿದ್ದಾರೆ.
ತಕ್ಷಣವೇ ಅಲ್ಲೆ ವಾಕ್ ಮಾಡುತಿದ್ದ ಅಶೋಕನಗರದ ಮೋಹನ್ ಎಂಬುವರು ಹೃದಯಘಾತದ ಲಕ್ಷಣ ಕಂಡು ಬಂದಿರುವುದರಿಂದ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ 5ನಿಮಿಷದಲ್ಲಿ ಮೆಗ್ಗಾನ ಆಸ್ಪತ್ರೆ ಗೆ ಕರೆದುಕೊಂಡು ಬಂದಿದ್ದಾರೆ ಅಷ್ಟರಲ್ಲೇ ಮರಣ ಹೊಂದಿರುವಾದಗಿ ವೈದ್ಯರು ದೃಢಪಡಿಸಿದ್ದಾರೆ. ವಿದ್ಯಾರ್ಥಿಯ ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ.
ಮುತ್ತಣ್ಣನವರಿಗೆ ಇಬ್ಬರು ಮಕ್ಕಳಿದ್ದು ಪಾರ್ಥ ಹಾಗೂ ಪೃಥ್ವಿ ಎಂಬುವರಿದ್ದಾರೆ. ಪಾರ್ಥ ದೆಹಲಿಯಲ್ಲಿದ್ದರೆ, ಪೃಥ್ವಿ ಸಿಮ್ಸ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ. ಶರಾವತಿ ನಗರದಲ್ಲಿ ಮನೆಯಿದ್ದು ಪ್ರತಿದಿನ ಪೃಥ್ವಿ ಸರ್ಕ್ಯೂಟ್ ಹೌಸ್ ಗೆ ವಾಕ್ ಬರ್ತಾ ಇದ್ದರು.