ಸುದ್ದಿಲೈವ್/ಶಿವಮೊಗ್ಗ
ಕಾರ್ತಿಕ ಮಾಸದ ಅಂಗವಾಗಿ ನಗರದ ಬಸವ ಕೇಂದ್ರದಲ್ಲಿ ನವೆಂಬರ್ 05 ರಿಂದ ಡಿಸೆಂಬರ್ 2 ರವರೆಗೆ 18 ನೇ ವರ್ಷದ ಚಿಂತನ ಕಾರ್ತಿಕ-2024 ಕಾರ್ಯಕ್ರಮ ಜರುಗಲಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಬಸವಕೇಂದ್ರ ಸಮಿತಿಯ ಅಧ್ಯಕ್ಷ ಬೆನಕಪ್ಪ, ಚಿಕ್ಕಮಗಳೂರಿನ ಬಸವತತ್ವ ಪೀಠದ ಬಸವಕೇಂದ್ರದ ಡಾ.ಶ್ರೀ ಬಸವ ಮರುಳಸಿದ್ಧ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನವೆಂಬರ್ 5ವರಂದು ನವಮಗರದ ವೆಂಕಟೇಶ್ ನಗರದಲ್ಲಿರುವ ಬಸವಕೇಂದ್ರದಲ್ಲಿ ಚಿಂತನ ಕಾರ್ತಿಕ-2024 ಕಾರ್ಯಕ್ರಮಕ್ಕೆ ಚಾಲನೆ ನಡೆಯಲಿದೆ ಎಂದರು.
ಅಂದು ಅಕ್ಕನಬಳಗದಿಂದ ವಚನ ಗಾಯನ ಕಾರ್ಯಕ್ರಮ ಜರುಗಲಿದ್ದು ಬೆಂಗಳೂರಿನ ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ ಕಾರ್ಯಕ್ರಮವನ್ನ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ರಂಗಾಯಣದ ನಿರ್ದೇಶಕ ಪ್ರಸನ್ನ ಡಿ.ಸಾಗರ, ಡಾ.ಜಿ.ವಿ ಹರಿಪ್ರಸಾದ್, ಕ್ರಾಂತಿದೀಪ ಪತ್ರಿಕೆಯ ಸಂಪಾದಕ ಶರಣ ಎನ್ ಮಂಜುನಾಥ್, ಮಾಧ್ಯಮ ಅಕಾಡೆಮಿ ಪುರಸ್ಕೃತ ಚಂದ್ರಶೇಖರ್ ಹಿರೇಮಳಲಿ ಅವರನ್ನ ಅಭಿನಂದಿಸಲಿದ್ದಾರೆ. ನ.27 ರವರೆಗೆ ದಿನ ಸಂಜೆ 6-30 ಕ್ಕೆ ಕಾರ್ಯಕ್ರಮ ಜರುಗಲಿದೆ.
ನ.28 ರಂದು ಸಂಜೆ 6-30 ಕ್ಕೆ ಶಿವಾನುಭವ ಗೋಷ್ಠಿನಡೆಯಲಿದೆ. ನ.30 ರಂದು ಸಂಜೆ 6-30 ಕ್ಕೆ ವಚನ ಕಾರ್ತಿಕ ಸಮಾರೋಪ ನಡೆಯಲಿದೆ. ಚಿಂತನ ಕಾರ್ತಿಕ-2024 ಸಮಾರೋಪ ಸಮಾರಂಭ ನಡೆಯಲಿದೆ.