ಸುದ್ದಿಲೈವ್/ಶಿವಮೊಗ್ಗ
ಉಪಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿಯನ್ನ ದೂರವಿಟ್ಟು ಮಾದೀಗ ದಂಡೋರ ಬೆಂಬಲಿತ ಸ್ವತಂತ್ರ್ಯ ಅಭ್ಯರ್ಥಿಯನ್ನ ಗೆಲ್ಲಿಸುವುದಾಗಿ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾನುಪ್ರಸಾದ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಳಮೀಸಲಾತಿ ವಿಷಯದಲ್ಲಿ ಸರ್ಕಾರ ತಡಮಾಡುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಯಾವ ರಾಷ್ಟ್ರೀಯ ಪಕ್ಷಕ್ಕೂ ಬೆಂಬಲಿಸುತ್ತಿಲ್ಲ. ಈ ಮೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ನ್ನ ಸೋಲಿಸಲು ತೀರ್ಮಾನಿಸಲಾಗಿತ್ತು. ಎರಡೂ ಪಕ್ಷಕ್ಕೂ ಈ ಬಾರಿ ಬೆಂಬಲ ಕೊಡಬಾರದು ಎಂದು ತೀರ್ಮಾನಿಸಲಾಗಿತ್ತು. ಆ ತೀರ್ಮಾನದಲ್ಲಿಯೇ ಈಗಲೂ ಸಮಿತಿ ಮುಂದುವರೆಯಲು ಸಿದ್ದವಾಗಿದೆ ಎಂದರು.
ಒಳಮೀಸಲಾತಿ ಜಾರಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಹೊಸನೇಮಕಾತಿಗೆ ಬ್ರೇಕ್ ಹಾಕಿರುವುದನ್ನ ಸ್ವಾಗತಿಸಿದ ಭಾನುಪ್ರಸಾದ್ ಮತ್ತೊಂದು ಸಮಿತಿ ರಚಿಸಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಉಪಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಕ್ಕೆ ಬುದ್ದಿಕಲಿಸಬೇಕಿದೆ. ಸುಪ್ರೀಂ ಕೋರ್ಟ್ ದತ್ತಾಂಶವನ್ನ ನೋಡಿ ಒಳಮೀಸಲಾತಿ ಜಾರಿಗೆ ನೀಡುವಂತೆ ಆದೇಶಿಸಿದೆ. ಸದಾಶಿವ ಆಯೋಗ, ಕಾಂತರಾಜು ಆಯೋಗ ಮತ್ತು ಮಾಧುಸ್ವಾಮಿ ಅವರ ಉಪಸಮಿತಿಯ ದತ್ತಾಂಶ ಸ್ಪಷ್ಟವಾಗಿದ್ದರೂ ಕಾಂಗ್ರೆಸ್ ಮತ್ತೊಂದು ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿರುವುದನ್ನ ಖಂಡಿಸುವುದಾಗಿ ತಿಳಿಸಿದರು.
ಮಾಧು ಸ್ವಾಮಿ ಅವರ ವರದಿ ಮತ್ತು ಸುಪ್ರೀಂ ಕೋರ್ಟ್ ನ ಆದೇಶ ಬಂದಮೇಲೂ ಮತ್ತೊಂದು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿರುವುದು ಒಳಮೀಸಲಾತಿ ಜಾರಿಯ ಮುಂದೂಡಿಕೆಯ ತಂತ್ರವಾಗಿದೆ. ಅಂಕಿ ಅಂಶ ಮತ್ತು ದತ್ತಾಂಶ ಇಟ್ಟುಕೊಂಡು ಈ ಯಾವ ವರದಿ ಇಲ್ಲವೆಂದು ಕಾಂಗ್ರೆಸ್ ಸರ್ಕಾರದ ಸಚಿವರು ಹೇಳುತ್ತಿದ್ದಾರೆ. ಆದರೆ ಸರ್ಕಾರಿ ಪ್ರಧಾನ ಕಾರ್ಯದರ್ಶಿಗಳು ಅಂಕಿ ಅಂಶವಿದೆ ಎಂದು ಹೇಳುವ ಮೂಲಕ ಗೊಂದಲ ಮೂಡಿಸಿದ್ದಾರೆ.
ದತ್ತಾಂಶ ವರದಿಯನ್ನ ಈ ಸಮಿತಿ ಹೇಗೆ ಸಂಗ್ರಹಿಸುತ್ತಾರೆ ಎಂಬುದೇ ಕುತೂಹಲವೆಂದ ಭಾನುಪ್ರಸಾದ್ ಹಿಂದಿನ ಬಿಜೆಪಿ ಸರ್ಕಾರದ ದತ್ತಾಂಶ ಪಡೆದರೆ ಪ್ರತಿಷ್ಠೆಯ ಪ್ರಶ್ನೆಯಾಗಿ ಕಾಂಗ್ರೆಸ್ ಮಾಧುಸ್ವಾಮಿಯ ಉಪಸಮಿತಿಯ ದತ್ತಾಂಶ ಪಡೆಯುತ್ತಿಲ್ಲವೆಂದರು
ಒಳಮೀಸಲಾತಿ ಜಾರಿಗೆ ಧರ್ಮಸಿಂಗ್ ಕಾಲದಲ್ಲಿ ಸದಾಶಿವ ಆಯೋಗ ರಚನೆಯಾಯಿತು. ವರದಿ ಕೊಟ್ಟಿದೆ. ಸದಾಶಿವ ಆಯೋಗ, ಕಾಂತರಾಜ ಆಯೋಗ ಮಾಧು ಸ್ವಾಮಿ ಇದ್ದರೂ ಮತ್ತೆ ದತ್ತಾಂಶ ಪಡೆಯುತ್ತೇವೆ ಎಂದು ನಂಬಿಸಿ ತಡಮಾಡುವ ತಂತ್ರಗಾರಿಕೆ ಯಾಗಿದೆ ಎಂದರು.